ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ರಾಷ್ಟ್ರೀಯ ಪ್ರಾಣಿ; ವಿಡಿಯೋ ವೈರಲ್
ರಾಷ್ಟ್ರೀಯ ಪಾಣಿ ಹುಲಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿರುವ ಕಿರು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
viral video; ರಾಷ್ಟ್ರೀಯ ಪಾಣಿ ಹುಲಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿರುವ ಕಿರು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆಯುವುದರ ಜತೆಗೆ ನೋಡುಗರು ವಾವ್ ಎನ್ನುವಂತೆ ಮಾಡಿದೆ. 15 ಸೆಕೆಂಡ್‌ಗಳಿರುವ ಈ ಕಿರು ಕ್ಲಿಪ್‌ನಲ್ಲಿ, ಹುಲಿ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ರಾಜಗಂಭೀರವಾಗಿ ಯಾವುದೇ ಅಳುಕ್ಕಿಲ್ಲದೇ ಸುತ್ತಾಡಿ, ನಂತರ ನಾಜೂಕಾಗಿ ಕಾಡಿನೊಳಗೆ ಹೋಗುವುದನ್ನು ಕಾಣಬಹುದಾಗಿದೆ. ಇನ್ನೂ ಈ ವಿಡಿಯೋವನ್ನು ತಮಿಳುನಾಡಿನವರಾದ ಛಾಯಾಗ್ರಾಹಕ ರಾಜ್ ಮೋಹನ್ ಎನ್ನುವವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಅದನ್ನು ಭಾರತೀಯ ಅರಣ್ಯ ಸೇನಾ ಅಧಿಕಾರಿ ಸುಶಾಂತ ನಂದಾ ಅವರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. “ಭಾರತದಲ್ಲಿ ಮತ್ತೊಂದು ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಪ್ರಾಣಿ ಎಂದು ಅವರು ಬರೆದುಕೊಂಡಿದ್ದಾರೆ.
Another day in India. National animal on National Highway… pic.twitter.com/3rrIryczJg
— Susanta Nanda IFS (@susantananda3) January 31, 2022
ಈ ವಿಡಿಯೋವನ್ನು ಸೆರೆಹಿಡಿದಿರುವ ತಮಿಳುನಾಡಿನವರಾದ ಛಾಯಾಗ್ರಾಹಕ ರಾಜ್ ಮೋಹನ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋ ಹಿಂದೆ ಒಂದು ನಂಬಲಾಗದ ಕಥೆ ಇದೆ ಎಂದಿದ್ದಾರೆ. ವಾಲ್ಪರೈನ ಎನ್ನುವಲ್ಲಿ ಇ ಹುಲಿ ಕಾಣಿಸಿಕೊಂಡಿದ್ದು, ನನ್ನ ಹೆಂಡತಿ ಈ ಹುಲಿ ನೋಡಿ ಎಚ್ಚರಗೊಂಡಿದ್ದಳೆ. ನಾನು ಗಾಢ ನಿದ್ದೆಯಲ್ಲಿದ್ದಾಗ ಹುಲಿ ಹುಲಿ ಎಂದು ನನ್ನ ಹೆಂಡತಿ ಕೂಗಿದ್ದಾಳೆ ಎಂದು ಅವರು ಬರೆದುಕೊಂಡಿದ್ದಾರೆ.
Woke up to this at #valparai! As narrated by my wife- Literally, woke up to a #tiger and stopped dead in my tracks for a few seconds when @rajography47 shouted ‘Tiger Tiger Tiger’ while I was fast asleep. Click below to read rest of the story. #TamilNaduhttps://t.co/9jcCxRiJ5F pic.twitter.com/7CEJAAxU6f
— Raj Mohan (@rajography47) January 31, 2022
ಭಾರತೀಯ ಅರಣ್ಯ ಸೇನಾ ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೋ ಹಂಚಿಕೊಂಡ 24 ಗಂಟೆಯ ಒಳಗೆ 38 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ಜತೆಗೆ ಸಾಮಾಜಿಕ ಮಾದ್ಯಮದಲ್ಲಿ ಸಾಕಷ್ಟು ಕಮೆಂಟ್ಸ್ ಕೂಡ ಬರುತ್ತಿವೆ.
ಇದನ್ನೂ ಓದಿ;
Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!