Viral Video; ಮೃಗಾಲಯದಲ್ಲಿದ್ದ ಕರಡಿ ಬೋನ್ಗೆ 3 ವರ್ಷದ ಮಗುವನ್ನು ಎಸೆದ ಮಹಿಳೆ
ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೃಗಾಲಯದಲ್ಲಿದ್ದ ಕರಡಿಯ ಬೋನ್ಗೆ ಎಸೆದ ಘಟನೆ ನಡೆದಿದೆ. ನೆರೆದಿದ್ದ ಪ್ರವಾಸಿಗರ ಎದುರು ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಇದ್ದಕ್ಕಿದ್ದಂತೆ ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ.
ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಮೃಗಾಲಯದಲ್ಲಿದ್ದ ಕರಡಿ(Bear) ಯ ಬೋನ್ಗೆ ಎಸೆದ ಘಟನೆ ನಡೆದಿದೆ. ನೆರೆದಿದ್ದ ಪ್ರವಾಸಿಗರ ಎದುರು ಮಗುವನ್ನು ಎತ್ತಿಕೊಂಡಿದ್ದ ಮಹಿಳೆ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಹೆಣ್ಣು ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಇದರ ವಿಡಿಯೋ ಮೃಗಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಉಜ್ಬೇಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದೆ. ಡೈಲಿ ಮೇಲ್ (Daily Mail) ವರದಿಯ ಪ್ರಕಾರ ಮಹಿಳೆಯ ಮಗುವನ್ನು 16 ಅಡಿಗಳಷ್ಟು ಕೆಳಗೆ ಎಸೆದಿದ್ದು, ಮಗುವನ್ನು ಸಾಯಿಸಲು ಯತ್ನಿಸಿದ್ದಾಳೆ ಎಂದು ಹೇಳಲಾಗಿದೆ. ಜೂಜು (Zuzu) ಎನ್ನುವ ಕರಡಿಯಿದ್ದ ಜಾಗಕ್ಕೆ ಮಗುವನ್ನು ಎಸೆದಿದ್ದು, ಸ್ಥಳದಲ್ಲಿದ್ದವರು ಬಂದು ತಡೆಯುವಷ್ಟರಲ್ಲಿ ಆಕೆ ಮಗುವನ್ನು ಎಸೆದಿದ್ದಳು ಎಂದು ವರದಿಯಾಗಿದೆ.
VIEWER DISCRETION IS ADVISED!
CCTV footage shows a woman throwing her daughter into a bear’s enclosure in Uzbekistan’s Tashkent Zoo.
The toddler was not harmed by the bear, but she was hospitalized with injuries due to the fall.
The woman’s motivation has remained unclear. pic.twitter.com/R5c4aDzSFA
— Press TV (@PressTV) February 1, 2022
ಈ ಘಟನೆಯ ವಿಡಿಯೋವನ್ನು ಟ್ವಿಟರ್ಲ್ಲಿ ಹಂಚಿಕೊಳ್ಳಲಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಬಂದು ಕರಡಿ ಓಡಾಡುತ್ತಿರುವ ಬೋನ್ನೊಳಗೆ ಎಸೆಯುತ್ತಾಳೆ. ಮೃಗಾಲಯದಲ್ಲಿದ್ದ ಜನ ಆಕೆಯನ್ನು ತಡೆಯುವಷ್ಟರಲ್ಲಿ ಮಗುವನ್ನು ಎಸೆದಿದ್ದಳು. ತಕ್ಷಣ ಮೃಗಾಲಯದ ಸಿಬ್ಬಂದಿ ಓಡಿ ಹೋಗಿ ಮಗುವನ್ನು ರಕ್ಷಿಸುವುದನ್ನು ಕಾಣಬಹುದು.
ವರದಿಯ ಪ್ರಕಾರ ಮಗುವಿಗೆ ಬಿದ್ದ ಗಾಯಗಳಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪ್ರಕರಣ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆಗೆ ಆಗಲಿದೆ. ಈ ಕುರಿತು ಮೃಗಾಲಯದ ಸಿಬ್ಬಂದಿ ಮಾತನಾಡಿ, ಮಹಿಳೆ ಏಕಾಏಕಿ ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಆಕೆಯ ಉದ್ದೇಶವೇನು ಎಂದು ತಿಳಿದಿಲ್ಲ ಸದ್ಯ ಮಗುವನ್ನು ರಕ್ಷಿಸಲಾಗಿದೆ ಎಂದಿದ್ದಾರೆ. ಮೂಲಗಳ ವರದಿಯ ಪ್ರಕಾರ 30 ವರ್ಷದ ಮಹಿಳೆ ಪತಿಯಿಂದ ದೂರವಾಗಿ ರಷ್ಯಾದಲ್ಲಿ ವಾಸವಿದ್ದಳು. ಆಕೆಗೆ ಇಬ್ಬರೂ ಮಕ್ಕಳೂ ಇದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ವರದಿಯಾಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಮಗುವನ್ನು ಎಸೆಯುವ ತಾಯಿಯೂ ಇದ್ದಾಳಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Video: ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಯುವತಿಯನ್ನು ಕಾಪಾಡಿದ ಪುರುಷರು; ಶಾಕಿಂಗ್ ವಿಡಿಯೋ ವೈರಲ್
Published On - 3:22 pm, Wed, 2 February 22