Pillow fighting: ಹೀಗೊಂದು ದಿಂಬಿನ ಕುಸ್ತಿ; ಹೊಸ ಆಟದ ಸ್ಪರ್ಧೆ ನೋಡಲು ಮುಗಿಬಿದ್ದ ಜನ
ಪ್ಲೋರಿಡಾದಲ್ಲಿ ಈ ದಿಂಬಿನ ಹೊಡೆದಾಟವನ್ನು ಕುಸ್ತಿಯ ರೀತಿ ಸ್ಪರ್ಧೆಯನ್ನಾಗಿ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿಂಬಿನ ಕುಸ್ತಿಯ ವಿಡಿಯೋ ಸಖತ್ ವೈರಲ್ ಆಗಿದೆ.
ಸಾಮಾನ್ಯವಾಗಿ ದಿಂಬಿನಿಂದ ಚಿಕ್ಕ ಮಕ್ಕಳು ತಮಾಷೆಗಾಗಿ ಹೊಡೆದಾಡುಕೊಳ್ಳುತ್ತಾರೆ. ಮನರಂಜನೆಗಾಗಿ ಮಾಡುವ ಈ ಹೊಡೆದಾಟ ಮಕ್ಕಳಿಗೆ ಒಂದು ರೀತಿಯ ವ್ಯಾಯಾಮ ಎಂದೇ ಹೇಳುತ್ತಾರೆ. ಆದರೆ ಈಗ ಪ್ಲೋರಿಡಾದಲ್ಲಿ ಈ ದಿಂಬಿನ ಹೊಡೆದಾಟವನ್ನು (Pillow fighting) ಕುಸ್ತಿಯ ರೀತಿ ಸ್ಪರ್ಧೆಯನ್ನಾಗಿ ಆಯೋಜಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿಂಬಿನ ಕುಸ್ತಿಯ ವಿಡಿಯೋ ಹರಿದಾಡುತ್ತಿದ್ದು ಸಖತ್ ವೈರಲ್ ಆಗಿದೆ. ದಿಂಬಿನ ಕುಸ್ತಿಯನ್ನು ಫ್ಲೋರಿಡಾದಲ್ಲಿ ಜನವರಿಯಲ್ಲಿ ಆಯೋಜಿಸಲಾಗಿತ್ತು. professional Pillow Fighting Championship (PFC) ಎನ್ನುವ ಸಂಸ್ಥೆ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರ ವಿಡಿಯೋವನ್ನು ರಾಯಿಟರ್ಸ್ ಹಂಚಿಕೊಂಡಿದೆ.
The Pillow Fighting Championship crowned its first ever champions in Florida as the children’s pastime was turned into a professional combat sport https://t.co/0iLG8xgza5 pic.twitter.com/M8HX87p6bo
— Reuters (@Reuters) January 31, 2022
ಜನವರಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 24 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅವರಲ್ಲಿ 8 ಮಹಿಳೆಯರು ಮತ್ತು 16 ಮಂದಿ ಪುರುಷರು ಭಾಗವಹಿಸಿದ್ದರು. ವಿಡಿಯೋದಲ್ಲಿ ಈ ದಿಂಬಿನ ಕುಸ್ತಿಯನ್ನು ಹೇಗೆ ಮಾಡಿದ್ದಾರೆ ಎನ್ನುವುದನ್ನು ಕಾಣಬಹುದು. ವಿಡಿಯೋದಲ್ಲಿ ಬಣ್ಣ ಬಣ್ಣದ ದಿಂಬುಗಳನ್ನು ಹಿಡಿದುಕೊಂಡು ಇಬ್ಬರು ಸ್ಪರ್ಧಾಳುಗಳು ಕುಸ್ತಿ ಅಂಗಳದಲ್ಲಿ ಹೊಡೆದಾಡುವುದನ್ನು ಕಾಣಬಹುದು.
ಈ ಸ್ಪರ್ಧೆಯಲ್ಲಿ ಇಸ್ಟೆಲಾ ನ್ಯೂನ್ಸ್ ಎನ್ನುವ ಮಹಿಳೆ ಕೆಂಡಾಲ್ ವೋಲ್ಕರ್ ಎನ್ನುವ ಸ್ಪರ್ಧಿಯನ್ನು ಸೋಲಿಸಿ ಗೆಲುವು ಪಡೆದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಮಾರ್ಕಸ್ ಬ್ರಿಮೇಜ್ ಅವರನ್ನು ಸೋಲಿಸಿ ಹೌಲಿ ಟಿಲ್ಮನ್ ಎನ್ನುವವರು ಗೆಲುವನ್ನು ಸಾಧಿಸಿದ್ದಾರೆ. ಇಬ್ಬರೂ ವಿನ್ನರ್ಗಳು 5 ಸಾವಿರ ಯುಎಸ್ ಡಾಲರ್ ಮತ್ತು ಒಂದು ಬೆಲ್ಟ್ಅನ್ನು ಬಹುಮಾನವಾಗಿ ಪಡೆದಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ.
ಸದ್ಯ ವಿಡಿಯೋ ನೋಡಿ ಬಳಕೆದಾರರೊಬ್ಬರು ಮುಂದಿನ ದಿನಗಳಲ್ಲಿ ದಿಂಬಿನ ಕುಸ್ತಿ ಅಧಿಕೃತವಾಗಿ ಜಾರಿಗೆ ಬರಬಹುದು. ಏಕೆಂದರೆ ಜನ ಈ ಹೊಸ ಕ್ರೀಡೆಯನ್ನು ಮೆಚ್ಚಿಕೊಂಡಿದ್ದು, ತಾವೂ ಆಡಲು ಆಸಕ್ತಿ ತೋರಿಸುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:
ನಾಯಿಗೆ ಕೆಂಪು ಬಣ್ಣ ಬಳಿದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಯುವತಿ; ವಿಡಿಯೋ ವೈರಲ್