AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಗೆ ಕೆಂಪು ಬಣ್ಣ ಬಳಿದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಯುವತಿ; ವಿಡಿಯೋ ವೈರಲ್​

ಯುವತಿಯೊಬ್ಬಳು ಸಾಕು ನಾಯಿಗೆ (Pet Dog) ಬಣ್ಣ ಬಳಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.

ನಾಯಿಗೆ ಕೆಂಪು ಬಣ್ಣ ಬಳಿದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಯುವತಿ; ವಿಡಿಯೋ ವೈರಲ್​
ನಾಯಿ
TV9 Web
| Updated By: Pavitra Bhat Jigalemane|

Updated on: Feb 02, 2022 | 9:44 AM

Share

ಯುವತಿಯೊಬ್ಬಳು ಸಾಕು ನಾಯಿಗೆ (Pet Dog) ಬಣ್ಣ ಬಳಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ನಾಯಿಯ ಮೈಮೇಲಿನ ಕೂದಲಿಗೆ ಕೆಂಪು ಬಣ್ಣವನ್ನು ಹಚ್ಚಿದ ಯುವತಿ ಟಿಕ್​ ಟಾಕ್ (TikTok)​ ವಿಡಿಯೋ ಮಾಡಿ ಹಂಚಿಕೊಂಡಿದ್ದಳು. ನಾಯಿಗೆ ದಂಡೇಲಿಯನ್ ಎಂದು ಹೆಸರಿಟ್ಟಿದ್ದ ಆಕೆ  ನಾಯಿಯ ಮೈಗೆ ಬಣ್ಣ ಬಳಿದಿದ್ದಾಳೆ.  ಇದರ ವಿಡಿಯೋ ಇನ್ಸ್ಟಾಗ್ರಾಮ್ (Instagram)​ನಲ್ಲೂ ವೈರಲ್​ ಆಗಿದ್ದು, ಪ್ರಾಣಿಗಳಿಗೆ ಬಣ್ಣ ಬಳಿದು ಹಿಂಸೆ ನೀಡುವುದು ಅಪರಾಧ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ವಿಡಿಯೋದಲ್ಲಿ ಆಕೆ ನಾಯಿಗೆ ಬಣ್ಣ ಬಳಿದ ಕಾರಣವನ್ನೂ ಹಂಚಿಕೊಂಡಿದ್ದಾಳೆ ಆದರೆ ಅದಕ್ಕೆ ಸಹಮತ ವ್ಯಕ್ತಪಡಿಸದ ಬಳಕೆದಾರರು ಯುವತಿಯ ಹುಚ್ಚಾಟ ಎಂದು ಸಿಟ್ಟಿಗೆದ್ದಿದ್ದಾರೆ. ಈ ಘಟನೆ ಯುಎಸ್​ನಲ್ಲಿ ನಡೆದಿದೆ.

View this post on Instagram

A post shared by Dandelion (@danthebigreddog)

ವಿಡಿಯೋದಲ್ಲಿ ನಾಯಿ ಕೆಂಪು ಬಣ್ಣದಿಂದ ಕಂಗೊಳಿಸುತ್ತಿರುವುದನ್ನು ಕಾಣಬಹುದು. ನಾಯಿಗೆ ಬಣ್ಣ ಬಳಿದಿದ್ದಕ್ಕೆ ಕಾರಣ ತಿಳಿಸಿದ ಯುವತಿ, ನಾಯಿ ಕೆಂಪು ಬಣ್ಣದಲ್ಲಿದ್ದರೆ ಯಾರೂ ಕದ್ದೊಯ್ಯುವುದಿಲ್ಲ. ಒಂದು ವೇಳೆ ಯಾರಾದರೂ ಕರೆದೊಯ್ದರೂ ಸುಲಭವಾಗಿ ಕಂಡುಹಡಿಯಬಹುದು. ಯಾಕೆಂದರೆ ಕೆಂಪು ಬಣ್ಣ ಎಲ್ಲಿದ್ದರೂ ಕಾಣ್ಣಿಗೆ ಕಾಣಿಸುತ್ತದೆ. ಅದು ಅಲ್ಲದೆ ಕೆಂಪು ಬಣ್ಣದಿಂದ ಕೂಡಿದ್ದಾಗ ಅಪಘಾತಗಳೂ ಸಂಭವಿಸುವುದಿಲ್ಲ ಎಂದಿದ್ದಾಳೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ.  ಪ್ರಾಣಿಗಳಿಗೆ ಬಣ್ಣ ಹಚ್ಚುವುದರಿಂದ ಅವು ಹಿಂಸೆಗೆ ಒಳಗಾಗುತ್ತವೆ ಎಂದು ಎಂದಿದ್ದು,  ನಿಮ್ಮ ಖುಷಿಗೆ ನಾಯಿಗೆ ಬಣ್ಣ ಬಳಿದು ಕಾರಣಗಳನ್ನು ಹೇಳಬೇಡಿ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: 300 ಹಾವುಗಳನ್ನು ಗೋಣಿಚೀಲದಲ್ಲಿ ತುಂಬಿ ಕಾಡಲ್ಲಿ ಸುರಿದ ವ್ಯಕ್ತಿ; ಈ ವಿಡಿಯೋ ನೋಡಿ ಶಾಕ್ ಆಗಬೇಡಿ!

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ