ಎಂ.ಎಸ್ ​ಧೋನಿಯನ್ನು ಭೇಟಿಯಾದ ನಟ ಚಿಯಾನ್​ ವಿಕ್ರಮ್​; ಫೋಟೋ ನೋಡಿ ಸಂತಸಗೊಂಡ ಅಭಿಮಾನಿಗಳು

TV9kannada Web Team

TV9kannada Web Team | Edited By: Pavitra Bhat Jigalemane

Updated on: Feb 01, 2022 | 5:38 PM

ಧೋನಿಯೊಂದಿಗಿನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್​ ಹಂಚಿಕೊಂಡಿದ್ದಾರೆ. ಸದ್ಯ ಫೋಟೋಗಳು ಸಖತ್​ ವೈರಲ್​ ಆಗಿದೆ.

ಎಂ.ಎಸ್ ​ಧೋನಿಯನ್ನು ಭೇಟಿಯಾದ ನಟ ಚಿಯಾನ್​ ವಿಕ್ರಮ್​; ಫೋಟೋ ನೋಡಿ ಸಂತಸಗೊಂಡ ಅಭಿಮಾನಿಗಳು
ಎಂಎಸ್​ ಧೋನಿ, ಚಿಯಾನ್​ ವಿಕ್ರಮ್​

ತಮ್ಮದೇ ವಿಭಿನ್ನ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ತಮಿಳು ನಟ ಚಿಯಾನ್ ವಿಕ್ರಮ್ (Chiyan Vikram) ​​ ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ ಎಸ್​ ಧೋನಿ (MS Dhoni) ಅವರನ್ನು ಭೇಟಿಯಾಗಿದ್ದಾರೆ. ಧೋನಿಯೊಂದಿಗಿನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್​ ಹಂಚಿಕೊಂಡಿದ್ದಾರೆ. ಸದ್ಯ ಫೋಟೋಗಳು ಸಖತ್​ ವೈರಲ್ (Viral Photo)​ ಆಗಿದೆ. ಟ್ವಿಟರ್​ನಲ್ಲಿ ಹೊಂಚಿಕೊಂಡ ಫೋಟೋಗಳು ವೈರಲ್​ ಆಗಿದೆ.

ಐಪಿಎಲ್​ ನಲ್ಲಿ  ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿರುವ ಧೋನಿ ಅವರಿಗೆ ಚೆನ್ನೈನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಚೆನ್ನೈ ಅಭಿಮಾನಿಗಳು ಅವರನ್ನು ಥಾಲಾ ಎಂದೇ ಕರೆಯುತ್ತಾರೆ. ಇತ್ತೀಚೆಗೆ ಧೋನಿ ಸ್ಟಾರ್ ಹೊಟೇಲ್​ವೊಂದಕ್ಕೆ ತೆರಳಿದ್ದ ವೇಳೆ ಆಕಸ್ಮಾತ್​ ಆಗಿ ನಟ ಚಿಯಾನ್​ ವಿಕ್ರಮ್​ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಫೋಟೊವನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫೋಟೋ ನೋಡಿ ಸಂತಸಗೊಂಡಿದ್ದಾರೆ.  ಜೀವಕರಣ ಎನ್ನುವ ಟ್ವಿಟರ್​ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.

ಈ ಹಿಂದೆ ಎಂಎಸ್​ ಧೋನಿ ಅವರು ವಿಜಯ್  ಅವರನ್ನು ಭೇಟಿಯಾಗಿದ್ದರು. ಈ ವೇಳೆಯೂ ಹಂಚಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಸದ್ಯ ವಿಕ್ರಮ್​ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಮಹಾನ್​, ಕೋಬ್ರಾ ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್​ನಲ್ಲಿ ವಿಕ್ರಮ್​ ಸಖತ್​ ಬ್ಯಸಿಯಾಗಿದ್ದಾರೆ.

ಇದನ್ನೂ ಓದಿ:

ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ಟ್ರೇಲರ್; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada