ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ಟ್ರೇಲರ್; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್

‘ಲವ್​ ಮಾಕ್ಟೇಲ್​’ ಯಶಸ್ಸಿನ ಬಳಿಕ ಡಾರ್ಲಿಂಗ್​ ಕೃಷ್ಣ ಮತ್ತು ವಿಲನಾ ನಾಗರಾಜ್​ ಅವರ ಚಾರ್ಮ್​ ಹೆಚ್ಚಿತು. ಹಲವು ಕಾಲದಿಂದ ಪ್ರೀತಿಸುತ್ತಿದ್ದ ಅವರು ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ.

ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ಟ್ರೇಲರ್; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್
ಲವ್ ಮಾಕ್ಟೇಲ್​ 2 ಟ್ರೇಲರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 01, 2022 | 4:39 PM

2020ರ ಆರಂಭದಲ್ಲಿ ತೆರೆಗೆ ಬಂದಿದ್ದ ‘ಲವ್​ ಮಾಕ್ಟೇಲ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈಗ ಈ ಚಿತ್ರದ ಸೀಕ್ವೆಲ್​ ಸಿದ್ಧಗೊಂಡಿದೆ. ಇಂದು (ಫೆಬ್ರವರಿ 1) ಚಿತ್ರದ ಟ್ರೇಲರ್ ರಿಲೀಸ್​ ಆಗಿದೆ. ಟ್ರೇಲರ್​ ನೋಡಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಡಾರ್ಲಿಂಗ್​ ಕೃಷ್ಣ ಹಾಗೂ ರಚೇಲ್​ ಡೇವಿಡ್​ ನಟನೆಯ ಈ ಸಿನಿಮಾದ ಟ್ರೇಲರ್​ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾಗೆ ಮಿಲನಾ ನಾಗರಾಜ್​ ಬಂಡವಾಳ ಹೂಡಿದ್ದಾರೆ. ಡಾರ್ಲಿಂಗ್​ ಕೃಷ್ಣ ಅವರೇ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ವಿಶೇಷ. ಈ ಸಿನಿಮಾದ ಟ್ರೇಲರ್ ಹೇಗಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.

‘ಲವ್​ ಮಾಕ್ಟೇಲ್​​’ ಚಿತ್ರದಲ್ಲಿ ಆದಿ (ಡಾರ್ಲಿಂಗ್​ ಕೃಷ್ಣ) ಹಾಗೂ ನಿಧಿ (ಮಿಲನಾ ನಾಗರಾಜ್​) ಮದುವೆ ಆಗಿತ್ತು. ಆದರೆ, ನಿಧಿ ಕ್ಯಾನ್ಸರ್​ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿ ಆಗುತ್ತಾನೆ. ಈಗ ನಿಧಿ ಸತ್ತು ಎರಡು ವರ್ಷ ಆಗಿದೆ. ಆದಿಗೆ ಹೊಸಹೊಸ ಜನರ ಭೇಟಿ ಆಗಿದೆ. ಟ್ರೇಲರ್ ಉದ್ದಕ್ಕೂ ನಿಧಿಯನ್ನು ನೆನಪು ಮಾಡಿಕೊಂಡು ಆದಿ ಕೊರಗಿದ್ದಾನೆ. ‘ಲವ್​ ಮಾಕ್ಟೇಲ್​ 2’ ಟ್ರೇಲರ್​ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲ ಪಾರ್ಟ್​ನಲ್ಲಿ ಜೋ ಆಗಿ ಕಾಣಿಸಿಕೊಂಡಿದ್ದ ಅಮೃತಾ ಅಯ್ಯಂಗಾರ್​ ಎರಡನೇ ಪಾರ್ಟ್​ನಲ್ಲೂ ಕಾಣಿಸಿಕೊಂಡಿದ್ದಾರೆ. ಟ್ರೇಲರ್​ನಲ್ಲಿ ಅವರು ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಆದಿ ಲೈಫ್​ಗೆ ಜೋ ರಿ ಎಂಟ್ರಿ ಆಗುತ್ತಾಳಾ ಎನ್ನುವ ಕುತೂಹಲವೂ ಮೂಡಿದೆ. ‘ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್’ ಎಂದು ಆದಿ ಗೆಳೆಯ ಹೇಳೋದು ಕೂಡ ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ.

‘ಲವ್​ ಮಾಕ್ಟೇಲ್​’ ಯಶಸ್ಸಿನ ಬಳಿಕ ಡಾರ್ಲಿಂಗ್​ ಕೃಷ್ಣ ಮತ್ತು ವಿಲನಾ ನಾಗರಾಜ್​ ಅವರ ಚಾರ್ಮ್​ ಹೆಚ್ಚಿತು. ಹಲವು ಕಾಲದಿಂದ ಪ್ರೀತಿಸುತ್ತಿದ್ದ ಅವರು ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಈಗ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ಅದರ ನಡುವೆ ಅವರು ‘ಲವ್​ ಮಾಕ್ಟೇಲ್​ 2’ ಚಿತ್ರದ ಕೆಲಸಗಳನ್ನು ಮುಗಿಸಿದ್ದಾರೆ. ರಚನಾ ಇಂದರ್​, ರೇಚಲ್​ ಡೇವಿಡ್​ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಲವ್ ಮಾಕ್ಟೇಲ್ 2’ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು,ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ.

ಇದನ್ನೂ ಓದಿ: ‘ಲವ್​ ಮಾಕ್ಟೇಲ್’​ ನೋಡುವಂತೆ ರವಿ ಡಿ. ಚನ್ನಣ್ಣನವರ್​ಗೆ​ ಪತ್ನಿಯ ಒತ್ತಾಯ; ದಕ್ಷ ಅಧಿಕಾರಿಗೆ ಸಿನಿಮಾ ಇಷ್ಟ ಆಯ್ತಾ?

‘ಲವ್​ ಮಾಕ್ಟೇಲ್​ 2’ ಸಿನಿಮಾ ಸುದ್ದಿಗೋಷ್ಠಿ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published On - 4:13 pm, Tue, 1 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ