1 ಕೋಟಿ ದಾಟಿದ ಪ್ರಧಾನಿ ಮೋದಿ ಯುಟ್ಯೂಬ್ ಚಂದಾದಾರರ ಸಂಖ್ಯೆ; ನಂತರದ ಸ್ಥಾನಗಳಲ್ಲಿ ಇರುವವರು ಯಾರು?

PM Narendra Modi: ಪ್ರಧಾನಿ ನರೇಂದ್ರ ಮೋದಿ ಯುಟ್ಯೂಬ್​ನಲ್ಲಿ 1 ಕೋಟಿ ಚಂದಾದಾರರನ್ನು ಹೊಂದಿದ್ದಾರೆ. ಈ ಮೂಲಕ ಅತ್ಯಂತ ಹೆಚ್ಚು ಸಬ್​ಸ್ಕ್ರೈಬರ್ ಹೊಂದಿರುವ ಜಾಗತಿಕ ನಾಯಕ ಎಂಬ ಖ್ಯಾತಿ ಅವರಿಗೆ ಲಭ್ಯವಾಗಿದೆ.

1 ಕೋಟಿ ದಾಟಿದ ಪ್ರಧಾನಿ ಮೋದಿ ಯುಟ್ಯೂಬ್ ಚಂದಾದಾರರ ಸಂಖ್ಯೆ; ನಂತರದ ಸ್ಥಾನಗಳಲ್ಲಿ ಇರುವವರು ಯಾರು?
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Feb 01, 2022 | 12:58 PM

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ದೊಡ್ಡ ಅನುಯಾಯಿ ಬಳಗವಿದೆ. ಇದೀಗ ಅಭಿಮಾನಿಗಳನ್ನು ಹೊಂದುವಲ್ಲಿ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಯುಟ್ಯೂಬ್​ನಲ್ಲಿ ಪ್ರಧಾನಿ ಮೋದಿಯವರ ಚಾನಲ್​​ನ ಸಬ್​​ಸ್ಕ್ರೈಬರ್​​ಗಳ (YouTube Subscribers) ಸಂಖ್ಯೆ ಮಂಗಳವಾರದಂದು 1 ಕೋಟಿ ದಾಟಿದೆ. ಅತ್ಯಂತ ಹೆಚ್ಚು ಚಂದಾದಾರರನ್ನು ಹೊಂದಿರುವ ಜಾಗತಿಕ ನಾಯಕ (World Leader) ಎಂಬ ದಾಖಲೆ ಈಗಾಗಲೇ ಅವರ ಹೆಸರಿನಲ್ಲಿತ್ತು. ಇದೀಗ ಆ ಸಂಖ್ಯೆ 1 ಕೋಟಿ ದಾಟಿದ್ದು ಹೊಸ ಮೈಲಿಗಲ್ಲನ್ನು ಮುಟ್ಟಿದಂತಾಗಿದೆ. ಅಚ್ಚರಿಯ ವಿಷಯವೆಂದರೆ ಪ್ರಧಾನಿ ಮೋದಿ ನಂತರ ಎರಡನೇ ಸ್ಥಾನದಲ್ಲಿರುವವರು ಹೊಂದಿರುವುದು 36 ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಮಾತ್ರ! ಬ್ರೆಜಿಲ್‌ನ ಜೈರ್ ಬೋಲ್ಸನಾರೊ 36 ಲಕ್ಷ ಚಂದಾದಾರರನ್ನು ಹೊಂದಿದ್ದು, ನರೇಂದ್ರ ಮೋದಿ ನಂತರವಿರುವ ಜಾಗತಿಕ ನಾಯಕರಾಗಿದ್ದಾರೆ.

ನಂತರದ ಸ್ಥಾನಗಳಲ್ಲಿ ಇರುವವರು ಯಾರ್ಯಾರು? 30.7 ಲಕ್ಷ ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ಮೆಕ್ಸಿಕೋದ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರು ಬೋಲ್ಸನಾರೊ ಅವರ ನಂತರ ಅಂದರೆ ಮೂರನೇ ಸ್ಥಾನದಲ್ಲಿದ್ದಾರೆ. 28.8 ಲಕ್ಷ ಚಂದಾದಾರರನ್ನು ಹೊಂದಿರುವ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಅಮೇರಿಕಾದ ಶ್ವೇತಭವನವು 19 ಲಕ್ಷ ಚಂದಾದಾರರನ್ನು ಹೊಂದಿದೆ ಮತ್ತು ಅಮೇರಿಕಾ ಅಧ್ಯಕ್ಷ ಜೋ ಬಿಡನ್ 7.043 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.

ಭಾರತದ ನಾಯಕರು ಯುಟ್ಯೂಬ್​ನಲ್ಲಿ ಎಷ್ಟು ಚಂದಾದಾರರನ್ನು ಹೊಂದಿದ್ದಾರೆ? ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿದರೆ ಭಾರತದ ರಾಜಕೀಯ ನಾಯಕರ ಯುಟ್ಯೂಬ್ ಚಂದಾದಾರರ ಸಂಖ್ಯೆ ಕಡಿಮೆ ಇದೆ. 5.25 ಲಕ್ಷ ಯೂಟ್ಯೂಬ್ ಚಂದಾದಾರರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಂದಿದ್ದಾರೆ. ಅವರ ನಂತರ ಶಶಿ ತರೂರ್ 4.39 ಲಕ್ಷ, ಅಸಾದುದ್ದೀನ್ ಓವೈಸಿ 3.73 ಲಕ್ಷ ಸಬ್​ಸ್ಕ್ರೈಬರ್ ಹೊಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ 2.12 ಲಕ್ಷ ಮತ್ತು ಮನೀಶ್ ಸಿಸೋಡಿಯಾ 1.37 ಲಕ್ಷ ಸಬ್​​ಸ್ಕ್ರೈಬರ್ ಹೊಂದಿದ್ದಾರೆ.

ಪ್ರಧಾನಿ ಮೋದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅನುಯಾಯಿಗಳೆಷ್ಟು? ಪ್ರಧಾನಿ ಮೋದಿಯವರು ಪ್ರಸ್ತುತ ಟ್ವಿಟರ್‌ನಲ್ಲಿ 7.53 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 6.5 ಕೋಟಿ ಮತ್ತು ಫೇಸ್‌ಬುಕ್‌ನಲ್ಲಿ 4.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಮೋದಿಯವರ YouTube ಚಾನಲ್ ಪ್ರಾರಂಭವಾಗಿದ್ದು 2007ರ ಅಕ್ಟೋಬರ್ 26ರಂದು. ಈ ಚಾನಲ್​ ಇದುವರೆಗೆ 1,643,140,189 ವೀಕ್ಷಣೆಗಳನ್ನು ಕಂಡಿದೆ.

ಇದನ್ನೂ ಓದಿ:

Budget 2022: ಶೀಘ್ರದಲ್ಲೇ ಆರ್​ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ; 2023ಕ್ಕೆ 5ಜಿ ಸ್ಪೆಕ್ಟ್ರಂ ಹರಾಜು

ಏನಿದು ಬಾರ್ಬೆಲ್ ಸ್ಟ್ರಾಟಜಿ ? ಕೊವಿಡ್ ಸವಾಲು ಎದುರಿಸಲು ಮೋದಿ ಸರ್ಕಾರ ಅದನ್ನು ಹೇಗೆ ಬಳಸಿತು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್