Narendra Modi ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಗ್ರ ಸ್ಥಾನ

ಟಾ ಇಂಟೆಲಿಜೆನ್ಸ್ ಕಂಪನಿ ಮಾರ್ನಿಂಗ್ ಕನ್ಸಲ್ಟ್‌ನ ಇತ್ತೀಚಿನ ಅನುಮೋದನೆ ರೇಟಿಂಗ್‌ಗಳಲ್ಲಿ ನರೇಂದ್ರ ಮೋದಿ ಅವರು ಹೆಚ್ಚಿನ ಅನುಮೋದನೆ ರೇಟಿಂಗ್ ಅನ್ನು ಹೊಂದಿದ್ದಾರೆ.

Narendra Modi ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಗ್ರ ಸ್ಥಾನ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 21, 2022 | 11:24 AM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕದ  ಅಧ್ಯಕ್ಷ ಜೋ ಬಿಡೆನ್ (Joe Biden) ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಹಿಂದೆ ತಳ್ಳಿ ಹೆಚ್ಚಿನ ಅನುಮೋದನೆ ರೇಟಿಂಗ್​​ಗಳೊಂದಿಗೆ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಡೇಟಾ ಇಂಟೆಲಿಜೆನ್ಸ್ ಕಂಪನಿ ಮಾರ್ನಿಂಗ್ ಕನ್ಸಲ್ಟ್‌ನ (Morning Consult) ಇತ್ತೀಚಿನ ಅನುಮೋದನೆ ರೇಟಿಂಗ್‌ಗಳಲ್ಲಿ ನರೇಂದ್ರ ಮೋದಿ ಅವರು ಹೆಚ್ಚಿನ ಅನುಮೋದನೆ ರೇಟಿಂಗ್ ಅನ್ನು ಹೊಂದಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 71 ಪ್ರತಿಶತದಷ್ಟು ಜನರು ಅನುಮೋದನೆಗೆ ಮತ ಹಾಕಿದರೆ 21 ಪ್ರತಿಶತದಷ್ಟು ಜನರು ಅಸಮ್ಮತಿ ಸೂಚಿಸಿದ್ದಾರೆ.  ಮಾರ್ನಿಂಗ್ ಕನ್ಸಲ್ಟ್, ಪ್ರತಿ ನಾಯಕನನ್ನು ಪತ್ತೆಹಚ್ಚಲು ಪ್ರಾರಂಭಿಸಿದ ಸಮಯದಿಂದ, ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯ ಅಂದರೆ ಮೇ 2020ರಲ್ಲಿ ಮೋದಿ ಅವರ ಅನುಮೋದನೆ ರೇಟಿಂಗ್ ಗರಿಷ್ಠ ಮಟ್ಟದಲ್ಲಿತ್ತು, ಆದರೆ ಕಳೆದ ವರ್ಷ ಎರಡನೇ ಕೊವಿಡ್ ಅಲೆಯ ಸಮಯದಲ್ಲಿ ಅದು ಕನಿಷ್ಠ ಮಟ್ಟಕ್ಕೆ ಇಳಿಯಿತು.  ಕಂಪನಿಯು ಪ್ರಸ್ತುತ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಅಮೆರಿಕದ ಸರ್ಕಾರಿ ನಾಯಕರ ಅನುಮೋದನೆ ರೇಟಿಂಗ್‌ಗಳನ್ನು ಟ್ರ್ಯಾಕ್ ಮಾಡುತ್ತಿದೆ.  ಲಾಕ್‌ಡೌನ್‌ನಲ್ಲಿ ಪಾರ್ಟಿ ಮಾಡಿದ ಆರೋಪಗಳನ್ನು ಎದುರಿಸುತ್ತಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು 69 ಪ್ರತಿಶತದಷ್ಟು ಪ್ರತಿಕ್ರಿಯಿಸಿದವರು ನಿರಾಕರಿಸಿದ್ದರಿಂದ -43 ಅನುಮೋದನೆ ರೇಟಿಂಗ್ ಅನ್ನು ಪಡೆದಿದ್ದಾರೆ.

ಹೆಚ್ಚು ನಕಾರಾತ್ಮಕ ಅನುಮೋದನೆ ರೇಟಿಂಗ್ ಹೊಂದಿರುವ ಇತರ ನಾಯಕರು ಬಿಡೆನ್, ಟ್ರುಡೊ, ಬ್ರೆಜಿಲ್‌ನ ಜೈರ್ ಬೋಲ್ಸನಾರೊ, ಫ್ರಾನ್ಸ್‌ನ ಎಮ್ಯಾನುಯೆಲ್ ಮ್ಯಾಕ್ರನ್, ದಕ್ಷಿಣ ಕೊರಿಯಾದ ಮೂನ್ ಜೇ-ಇನ್, ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್ ಮತ್ತು ಸ್ಪೇನ್‌ನ ಪೆಡ್ರೊ ಸಾಚೆಜ್.  ರೇಟಿಂಗ್‌ಗಳು ವಯಸ್ಕ ನಿವಾಸಿಗಳ ಏಳು-ದಿನದ ಸರಾಸರಿಯನ್ನು ಆಧರಿಸಿವೆ, ಮಾದರಿ ಪ್ರಮಾಣಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ.

ವಿಶ್ವ ನಾಯಕರ ಜಾಗತಿಕ ಅನುಮೋದನೆ ರೇಟಿಂಗ್‌ಗಳ ಪಟ್ಟಿ:

ನರೇಂದ್ರ ಮೋದಿ: ಶೇ 71

ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್: ಶೇ 66

ಮಾರಿಯೋ ಡ್ರಾಘಿ: ಶೇ 60

ಫ್ಯೂಮಿಯೊ ಕಿಶಿಡಾ: ಶೇ 48

ಓಲಾಫ್ ಸ್ಕೋಲ್ಜ್: ಶೇ 44

ಜೋ ಬಿಡೆನ್: ಶೇ 43

ಜಸ್ಟಿನ್ ಟ್ರುಡೊ: ಶೇ 43

ಸ್ಕಾಟ್ ಮಾರಿಸನ್: ಶೇ 41

ಪೆಡ್ರೊ ಸ್ಯಾಂಚೆಜ್: ಶೇ 40

ಮೂನ್ ಜೇ-ಇನ್: ಶೇ 38

ಜೈರ್ ಬೋಲ್ಸನಾರೊ: ಶೇ 37

ಎಮ್ಯಾನುಯೆಲ್ ಮ್ಯಾಕ್ರನ್: ಶೇ 34

ಬೋರಿಸ್ ಜಾನ್ಸನ್: ಶೇ 26

ವಿಶ್ವ ನಾಯಕರ ಜಾಗತಿಕ ಅಸಮ್ಮತಿ ರೇಟಿಂಗ್‌ಗಳ ಪಟ್ಟಿ

ಬೋರಿಸ್ ಜಾನ್ಸನ್: ಶೇ 69

ಎಮ್ಯಾನುಯೆಲ್ ಮ್ಯಾಕ್ರನ್: ಶೇ 59

ಜೈರ್ ಬೋಲ್ಸನಾರೊ: ಶೇ 56

ಮೂನ್ ಜೇ-ಇನ್: ಶೇ 54

ಪೆಡ್ರೊ ಸ್ಯಾಂಚೆಜ್: ಶೇ 53

ಸ್ಕಾಟ್ ಮಾರಿಸನ್: ಶೇ 52

ಜಸ್ಟಿನ್ ಟ್ರುಡೊ: ಶೇ 51

ಜೋ ಬಿಡೆನ್: ಶೇ 49

ಓಲಾಫ್ ಸ್ಕೋಲ್ಜ್: ಶೇ 40

ಫ್ಯೂಮಿಯೊ ಕಿಶಿಡಾ: ಶೇ 36

ಮಾರಿಯೋ ಡ್ರಾಘಿ: ಶೇ 33

ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್: ಶೇ 26

ನರೇಂದ್ರ ಮೋದಿ: ಶೇ 21

ಇದನ್ನೂ ಓದಿ: Coronavirus Cases in India: ದೇಶದಲ್ಲಿಂದು 3.47 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಪ್ರಕರಣಗಳು 9,692ಕ್ಕೆ ಏರಿಕೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ