Amar Jawan Jyoti: ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನವಾಗಲಿದೆ ಅಮರ್ ಜವಾನ್ ಜ್ಯೋತಿ
Amar Jawan Jyoti: ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ ಮಾಡುತ್ತಿದ್ದೇವೆ. ಅಮರ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಉರಿಯಲಿದೆ ಎಂದು ಈ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಹಾಗೂ ಜ್ಯೋತಿಯನ್ನು ಆರಿಸುತ್ತಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದೆ.
ದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯ ಇಂಡಿಯಾ ಗೇಟ್ ಬಳಿ ಅಮರ್ ಜವಾನ್ ಎಂಬ ಘೋಷಣೆ ಹಾಗೂ ಅದರ ಪಕ್ಕದಲ್ಲಿ ನಿರಂತರವಾಗಿ ಉರಿಯುತ್ತಿದ್ದ ಜ್ಯೋತಿಯ ಚಿತ್ರಣ ನಿಮ್ಮ ಕಣ್ಣಮುಂದೆಯೇ ಇರಬಹುದು. ನೆನಪಿಸಿಕೊಂಡರೆ ಆ ಚಿತ್ರ ಹಾಗೇ ಪಟ್ಟನೆ ಬರಬಹುದು. ಅಮರರಾಗಿರುವ ದೇಶದ ಹೆಮ್ಮೆಯ ಸೈನಿಕರಿಗೆ ಗೌರವ ಸೂಚಕವಾಗಿ ಕಳೆದ 50 ವರ್ಷದಿಂದ ನಿರಂತರವಾಗಿ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿ (Amar Jawan Jyoti) ಇನ್ನು ಮುಂದೆ ಆ ಸ್ಥಳದಲ್ಲಿ ಕಾಣಸಿಗುವುದಿಲ್ಲ. ಗಣರಾಜ್ಯೋತ್ಸವಕ್ಕೆ (Republic Day) ಕೆಲವೇ ದಿನಗಳಿರುವ ವೇಳೆ ಈ ಹೊಸ ಬೆಳವಣಿಗೆಯೊಂದು ಘಟಿಸಲಿದೆ.
ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲಿನ ರಾಷ್ಟ್ರೀಯ ಯುದ್ಧ ಸ್ಮಾರಕ (National War Memorial Flame) ಜ್ಯೋತಿಯಲ್ಲಿ ಅಮರ್ ಜವಾನ್ ಜ್ಯೋತಿ ಲೀನವಾಗಲಿದೆ. ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ ಮಾಡುತ್ತಿದ್ದೇವೆ. ಅಮರ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಉರಿಯಲಿದೆ ಎಂದು ಈ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಹಾಗೂ ಜ್ಯೋತಿಯನ್ನು ಆರಿಸುತ್ತಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದೆ.
ಶುಕ್ರವಾರ (ಜನವರಿ 21) ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಸಮಗ್ರ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ, ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಸಮ್ಮುಖದಲ್ಲಿ ಈ ಕಾರ್ಯ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಇರುವ ಸಂದರ್ಭ ಅಮರ ಸೈನಿಕರಿಗೆ ಎರಡು ಪ್ರತ್ಯೇಕ ಜ್ಯೋತಿ ಸರಿ ಕಾಣುವುದಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Delhi | The Amar Jawan Jyoti flame at India Gate will be merged with the flame at the National War Memorial tomorrow in a ceremony: Indian Army officials
(File pic) pic.twitter.com/dNl3BJGyXY
— ANI (@ANI) January 20, 2022
ಅಷ್ಟೇ ಅಲ್ಲದೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಈಗಾಗಲೇ ಇಂಡಿಯಾ ಗೇಟ್ ನಲ್ಲಿ ಕೆತ್ತಲಾಗಿರುವ ಹುತಾತ್ಮರ ಹೆಸರುಗಳನ್ನೂ ಸಹ ಹೊಂದಿದೆ. ಅದರೊಂದಿಗೆ 1947-48ರ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯವರೆಗೆ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಕ್ಷಣಾ ಸಿಬ್ಬಂದಿಯ ಹೆಸರು, ಭಯೋತ್ಪಾದಕ ವಿರೋಧಿ ಚಟುವಟಿಕೆಯಲ್ಲಿ ಹುತಾತ್ಮರಾದ ಸೈನಿಕರ ಹೆಸರನ್ನೂ ಯುದ್ಧ ಸ್ಮಾರಕದಲ್ಲಿ ಕೆತ್ತಲಾಗಿದೆ.
ಇದನ್ನೂ ಓದಿ: ಸೈನಿಕರ ನೆನಪಿಗೆ ದಾವಣಗೆರೆಯಲ್ಲಿ ನಿರ್ಮಾಣವಾಗುತ್ತಿದೆ ಅಮರ್ ಜವಾನ್ ಪಾರ್ಕ್
ಇದನ್ನೂ ಓದಿ: ಚಳಿ, ಮಳೆ, ಬಿಸಿಲು ಯಾವುದನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುವ ಭಾರತೀಯ ಸೈನಿಕರು; ಇಲ್ಲಿವೆ ಮೈ ನವಿರೇಳಿಸುವ ಫೋಟೋಗಳು
Published On - 12:04 pm, Fri, 21 January 22