Statue of Equality: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಮೂರ್ತಿ ಬಗ್ಗೆ ನಿಮಗೆಷ್ಟು ತಿಳಿದಿದೆ?

Statue of Equality: ಭಗವದ್ ಶ್ರೀ ರಾಮಾನುಜಾಚಾರ್ಯರು 1,000 ವರ್ಷಗಳಿಂದ ಸಮಾನತೆಯ ನಿಜ ಪ್ರತಿಮೆಯಾಗಿ ನಮ್ಮ ಮುಂದಿದ್ದಾರೆ. ಹಾಗೂ ಈ ಮೂಲಕ ಅವರ ಪಾಠಗಳು ಕನಿಷ್ಠ ಮುಂದಿನ 1,000 ವರ್ಷಗಳಿಗೆ ಉಳಿದುಕೊಳ್ಳುವಂತೆ ಆಗಲಿದೆ ಎಂದು ಚಿನ್ನ ಜೀಯರ್ ಸ್ವಾಮೀಜಿ ಹೇಳಿದ್ದಾರೆ.

Statue of Equality: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಮೂರ್ತಿ ಬಗ್ಗೆ ನಿಮಗೆಷ್ಟು ತಿಳಿದಿದೆ?
ಸಮಾನತೆಯ ಮೂರ್ತಿ
Follow us
TV9 Web
| Updated By: ganapathi bhat

Updated on:Jan 21, 2022 | 12:57 PM

ಹೈದರಾಬಾದ್: ಸಮಾಜ ಸುಧಾರಕ ಹಾಗೂ 11ನೇ ಶತಮಾನದ ಸಂತ ಶ್ರೀ ರಾಮಾನುಜಾಚಾರ್ಯರ (Ramanujacharya) 216 ಅಡಿ ಎತ್ತರದ ಪ್ರತಿಮೆಯನ್ನು ಫೆಬ್ರವರಿ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಲೋಕಾರ್ಪಣೆ ಮಾಡಲಿದ್ದಾರೆ. ಈ ಬೃಹತ್ ಪ್ರತಿಮೆಗೆ ಸಮಾನತೆಯ ಮೂರ್ತಿ (Statue of Equality) ಎಂದು ಹೆಸರಿಸಲಾಗಿದ್ದು, ಉದ್ಘಾಟನೆಯ ಬಗ್ಗೆ ಚಿನ್ನ ಜೀಯರ್ ಆಶ್ರಮದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಎರಡನೇ ಅತಿ ದೊಡ್ಡ ಪ್ರತಿಮೆ ಇದಾಗಿದೆ ಎಂಬ ಖ್ಯಾತಿಯನ್ನು ಸಮಾನತೆಯ ಮೂರ್ತಿ ಹೊಂದಿದೆ.

ಬಳಿಕ, ಫೆಬ್ರವರಿ 13 ರಂದು ರಾಷ್ಟ್ರಪತಿ ರಾಮ್​ನಾತ್ ಕೋವಿಂದ್ ಅವರು ಒಳಗಿನ ಭಾಗದಲ್ಲಿ ಇರುವ 120 ಕೆಜಿ ತೂಕದ ರಾಮಾನುಜಾಚಾರ್ಯರ ಮತ್ತೊಂದು ಮೂರ್ತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಭಗವದ್ ಶ್ರೀ ರಾಮಾನುಜಾಚಾರ್ಯರು 1,000 ವರ್ಷಗಳಿಂದ ಸಮಾನತೆಯ ನಿಜ ಪ್ರತಿಮೆಯಾಗಿ ನಮ್ಮ ಮುಂದಿದ್ದಾರೆ. ಹಾಗೂ ಈ ಮೂಲಕ ಅವರ ಪಾಠಗಳು ಕನಿಷ್ಠ ಮುಂದಿನ 1,000 ವರ್ಷಗಳಿಗೆ ಉಳಿದುಕೊಳ್ಳುವಂತೆ ಆಗಲಿದೆ ಎಂದು ಚಿನ್ನ ಜೀಯರ್ ಸ್ವಾಮೀಜಿ ಹೇಳಿದ್ದಾರೆ.

ಸಮಾನತೆಯ ಮೂರ್ತಿಯ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಅಂಶಗಳು ಇಲ್ಲಿದೆ:

  • ಹೊರಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿರುವ 216 ಅಡಿಯ ಬೃಹತ್ ಸಮಾನತೆಯ ಮೂರ್ತಿ, ಕುಳಿತ ಭಂಗಿಯಲ್ಲಿ ಇರುವ ವಿಶ್ವದ ಎರಡನೇ ಅತಿ ಎತ್ತರದ ಮೂರ್ತಿ ಆಗಿರಲಿದೆ. ಥಾಯ್ಲೆಂಡ್​ನ ಕುಳಿತ ಭಂಗಿಯ ಬುದ್ಧನ ಪ್ರತಿಮೆ ಮೊದಲನೇ ಎತ್ತರದ ಪ್ರತಿಮೆ ಆಗಿದೆ.
  • ಈ ವಿಗ್ರಹವನ್ನು ಪಂಚಲೋಹ ಬಳಸಿ ನಿರ್ಮಾಣ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ ಎಂಬ ಐದು ಲೋಹಗಳಿಂದ ಈ ಪ್ರತಿಮೆ ತಯಾರಾಗಿದೆ.
  • ಇಲ್ಲಿರುವ ರಾಮಾನುಜಾಚಾರ್ಯರ ಗರ್ಭಗುಡಿಯನ್ನು 120 ಕಿಲೋ ಗ್ರಾಂ ಬಂಗಾರದಿಂದ ನಿರ್ಮಿಸಲಾಗಿದೆ.
  • ಒಂದು ಸಾವಿರ ಕೋಟಿ ಮೊತ್ತದ ಈ ಯೋಜನೆಯನ್ನು ಜಾಗತಿಕವಾಗಿ ಇರುವ ಭಕ್ತಜನರ, ದಾನಿಗಳ ನಿಧಿ ಸಂಗ್ರಹಣೆಯ ಮೊತ್ತದಿಂದ ನಿರ್ಮಿಸಲಾಗಿದೆ.
  • ಇಲ್ಲಿ 108 ದಿವ್ಯ ದೇಶ, 108 ಸುಂದರ ವಿಷ್ಣು ದೇಗುಲಗಳು ಇರಲಿದೆ. ತಮಿಳು ಸಂತರಾದ ಆಳ್ವರ್ಸರ ಕೆಲಸಗಳಲ್ಲಿ ಉಲ್ಲೇಖಿಸಿರುವ ರೂಪದಲ್ಲಿ ಇದು ಇರಲಿದೆ.

ಶ್ರೀ ರಾಮಾನುಜಾಚಾರ್ಯರು 11ನೇ ಶತಮಾನದ ಹಿಂದು ಧರ್ಮಶಾಸ್ತ್ರಜ್ಞ ತತ್ವಜ್ಞಾನಿ ಹಾಗೂ ಭಕ್ತಿ ಚಳುವಳಿಯನ್ನು ನಡೆಸಿದ ಸಮಾಜ ಸುಧಾರಕರೂ ಆಗಿದ್ದಾರೆ. ರಾಮಾನುಜಾಚಾರ್ಯರ 1000ನೇ ಜನ್ಮೋತ್ಸವವನ್ನು ಹೈದರಾಬಾದ್​ನ ಶಮ್ಸಾಬಾದ್​ನ ಆಶ್ರಮದಲ್ಲಿ ರಾಮಾನುಜರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಗುವುದು. ಈ ಪ್ರತಿಮೆಯು 216 ಅಡಿ ಎತ್ತರವಿದ್ದು, ಸಮಾನತೆಯ ಪ್ರತಿಮೆ ಎಂದು ಹೆಸರಿಸಲಾಗಿದೆ. ಜಾತಿಬೇಧ ಇಲ್ಲದೆ, ಮಾನವಸಂಕುಲದ ಉನ್ನತಿಗೆ ಕೆಲಸ ಮಾಡಿದ ರಾಮಾನುಜರ ನೆನಪಿಗೆ ಈ ಪ್ರತಿಮೆ ನಿರ್ಮಿಸಲಾಗಿದೆ.

ಫೆಬ್ರವರಿ 2 ರಿಂದ ಫೆಬ್ರವರಿ 14 ರವರೆಗೆ ಈ ಕಾರ್ಯಕ್ರಮಗಳು ನಡೆಯಲಿದೆ. ಸಮಾನತೆಯ ಪ್ರತಿಮೆಯನ್ನು 200 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಹೈದರಾಬಾದ್​ನ ಹೊರವಲಯದಲ್ಲಿ ಇರುವ ಶಮ್ಸಾಬಾದ್​ನ ಮುಚಿಂತಾಲ್ ಎಂಬಲ್ಲಿ ಇದೆ. ಕಾರ್ಯಕ್ರಮದ ವಿಶೇಷವಾಗಿ ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗುವುದು. ಎರಡು ಲಕ್ಷ ಹಸುವಿನ ಕೆಜಿ ತುಪ್ಪದಿಂದ ಹೋಮ ನೆರವೇರಲಿದೆ ಎಂದು ತಿಳಿಸಲಾಗಿದೆ. ಈ ಸ್ಥಳವು ಶೀಘ್ರವೇ ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂಬುದು ಚಿನ್ನ ಜೀಯರ್ ಸ್ವಾಮೀಜಿಗಳ ಆಶಯವಾಗಿದೆ.

ರಾಮಾನುಜಾಚಾರ್ಯರ ಸಮಾನತೆಯ ಮೂರ್ತಿ ಹಾಗೂ 1000ನೇ ಜನ್ಮೋತ್ಸವದ ಕುರಿತ ಮಾಹಿತಿ ಹಾಗೂ ಇನ್ನಿತರ ವಿಚಾರಗಳಿಗೆ ಈ ಸಂಪರ್ಕ ಸಂಖ್ಯೆ, ವೆಬ್​ಸೈಟ್ ಅಥವಾ ಇಮೈಲ್ ವಿಳಾಸ ಬಳಸಬಹುದು.

Contact: +91 790 14 2 2022

Website: statueofequality.org

Email: srs.samaroham@statueofequality.org

ಇದನ್ನೂ ಓದಿ: ಸಮಾನತೆಯ ಮೂರ್ತಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ ಚಿನ್ನ ಜೀಯರ್ ಸ್ವಾಮೀಜಿ

ಇದನ್ನೂ ಓದಿ: ಸಮಾನತೆಯ ಮೂರ್ತಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರನ್ನು ಆಮಂತ್ರಿಸಿದ ಚಿನ್ನ ಜೀಯರ್ ಸ್ವಾಮಿ

Published On - 12:56 pm, Fri, 21 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ