ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
‘ರಾಕಿಂಗ್ ಸ್ಟಾರ್’ ಯಶ್ ತಾಯಿ ಪುಷ್ಪ ಅರುಣ್ಕುಮಾರ್ ಅವರು ‘ಕೊತ್ತಲವಾಡಿ’ ಸಿನಿಮಾ ಮೂಲಕ ನಿರ್ಮಾಪಕಿ ಆಗಿದ್ದಾರೆ. ಈ ಸಿನಿಮಾ ಕುರಿತು ಮಾತನಾಡುವಾಗ ಅನೇಕ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ಟಿವಿ9 ವಿಶೇಷ ಸಂದರ್ಶನದಲ್ಲಿ ಪುಷ್ಪ ಅವರು ‘ಕೊತ್ತಲವಾಡಿ’ ಸಿನಿಮಾ ಹಾಗೂ ಯಶ್-ರಾಧಿಕಾ ಪಂಡಿತ್ ದಂಪತಿ ಬಗ್ಗೆ ಮಾತನಾಡಿದ್ದಾರೆ.
ಯಶ್ ತಾಯಿ ಪುಷ್ಪ ಅರುಣ್ಕುಮಾರ್ (Pushpa Arun Kumar) ಅವರು ‘ಕೊತ್ತಲವಾಡಿ’ ಸಿನಿಮಾ ಮೂಲಕ ನಿರ್ಮಾಪಕಿ ಆಗಿದ್ದಾರೆ. ಈ ಸಿನಿಮಾ ಕುರಿತು ಮಾತನಾಡುವಾಗ ಅನೇಕ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ಟಿವಿ9 ವಿಶೇಷ ಸಂದರ್ಶನದಲ್ಲಿ ಪುಷ್ಪ ಅವರು ಮಾತನಾಡಿದ್ದಾರೆ. ‘ಯಶ್ (Yash) ನಮಗೆ ಸಿನಿಮಾ ವಿಚಾರದಲ್ಲಿ ಅನೇಕ ವಿಷಯ ಹೇಳಿಕೊಟ್ಟಿದ್ದಾನೆ. ನಾವು ಭಯ-ಭಕ್ತಿಯಿಂದ ಸಿನಿಮಾ ಮಾಡಬೇಕು. ನಮ್ಮ ಸೊಸೆ (Radhika Pandit) ಕೂಡ ಸ್ಟಾರ್. ಅವಳು ತುಂಬ ಹೆಸರು ಮಾಡಿದ್ದಾಳೆ. ಒಳ್ಳೊಳ್ಳೆಯ ಸಿನಿಮಾ ಕೊಟ್ಟಿದ್ದಾಳೆ. ಎಲ್ಲೋ ಇಂದು ಕಡೆ ಅವಳಿಗೆ ಕೆಟ್ಟ ಹೆಸರು ಬರಬಾರದು. ನಿಮ್ಮ ಅತ್ತೆ ಎಂಥಾ ಪಿಕ್ಚರ್ ಮಾಡಿದ್ದಾರೆ ನೋಡು ಅಂತ ಆಕೆಗೆ ಯಾರೂ ಹೇಳಬಾರದು’ ಎಂದಿದ್ದಾರೆ ಯಶ್ ತಾಯಿ ಪುಷ್ಪ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos