ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯ ಪ್ರಾಣವನ್ನೇ ತೆಗೆದಳು..!
ದೇಶ ಎಷ್ಟೊಂದು ಅಭಿವೃದ್ಧಿ ಹೊಂದಿದರು ಗ್ರಾಮೀಣ ಭಾಗದಲ್ಲಿ ಮಾತ್ರ ಇನ್ನೂ ಮೂಡನಂಬಿಕೆ ಮೌಢ್ಯ ಜೀವಂತವಾಗಿವೆ. ಇನ್ನೂ ಮೈಮೇಲೆ ದೇವರು ಬರುತ್ತದೆ ಅಂತಾ ಜನರನ್ನು ನಂಬಿಸಿ ಮೋಸ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೊಸ ಹೊಸ ಅವತಾರಗಳು ಹುಟ್ಟಿಕೊಳ್ಳುತ್ತಿರುತ್ತವೆ. ಭೂತ ಬಿಡಿಸುತ್ತೇನೆಂದು ಮಹಿಳೆಯ ಜೀವವನ್ನೇ ತೆಗೆದಿದ್ದಾಳೆ.
ಶಿವಮೊಗ್ಗ, (ಜುಲೈ 09): ದೇಶ ಎಷ್ಟೊಂದು ಅಭಿವೃದ್ಧಿ ಹೊಂದಿದರು ಗ್ರಾಮೀಣ ಭಾಗದಲ್ಲಿ ಮಾತ್ರ ಇನ್ನೂ ಮೂಡನಂಬಿಕೆ ಮೌಢ್ಯ ಜೀವಂತವಾಗಿವೆ. ಇನ್ನೂ ಮೈಮೇಲೆ ದೇವರು ಬರುತ್ತದೆ ಅಂತಾ ಜನರನ್ನು ನಂಬಿಸಿ ಮೋಸ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೊಸ ಹೊಸ ಅವತಾರಗಳು ಹುಟ್ಟಿಕೊಳ್ಳುತ್ತಿರುತ್ತವೆ. ಭೂತ ಬಿಡಿಸುತ್ತೇನೆಂದು ಮಹಿಳೆಯ ಜೀವವನ್ನೇ ತೆಗೆದಿದ್ದಾಳೆ.
ಭದ್ರಾವತಿ ತಾಲೂಕಿನ ಜಂಬರಘಟ್ಟ ಗ್ರಾಮದಲ್ಲಿ ಕೆಲವು ತಿಂಗಳನಿಂದ ಆಶಾ ಎನ್ನುವ ಮಹಿಳೆಗೆ ಮೈಮೇಲೆ ದೇವರು ಬರುತ್ತದೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದಳು. ನನಗೆ ದೇವರು ಬರುತ್ತದೆ ಎಂದು ಗ್ರಾಮದಲ್ಲಿ ತನ್ನ ಆಶಾ ತನ್ನ ದಶಾವತಾರ ತೋರಿಸಿದ್ದಳು. ಗ್ರಾಮಸ್ಥರು ಇವಳ ಹಾವ ಭಾವ ಮತ್ತು ನಡವಳಿಕೆ ನೋಡಿ ನಂಬಿ ಬಿಟ್ಟಿದ್ದರು. ಇದನ್ನು ಸಾಬೀತು ಮಾಡಲು ಆಶಾ ಮತ್ತು ಆಕೆ ಪತಿ ಸಂತೋಷ, ಇದೇ ಗ್ರಾಮದ ಸಂಜಯ್ ನ ತಾಯಿ ಗೀತಾ ಮೇಲೆ ಕಣ್ಣು ಬಿದ್ದಿತ್ತು. ಆ ಮಹಿಳೆ ಕೆಲವು ತಿಂಗಳಿನಿಂದ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಳು. ಒಂದಿಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಡಿಪ್ರೇಶನ್ ಗೆ ಹೋದ ತಾಯಿಯನ್ನು ಆಸ್ಪತ್ರೆಗೆ ತೋರಿಸಬೇಕಿತ್ತು. ಆದ್ರೆ ಆಶಾ ಮತ್ತು ಆಕೆಯ ಪತಿ ಸಂತೋಷ್ ಇಬ್ಬರು ಸೇರಿ ಗೀತಾಳ ಮಗ ಸಂಜಯ್ ಬ್ರೇನ್ ವಾಶ್ ಮಾಡಿದ್ದಾರೆ. ತಾಯಿಗೆ ಮೈಯಲ್ಲಿ ದೆವ್ವ ಇದೆ. ಅದರಿಂದ ಇಡೀ ಕುಟುಂಬಕ್ಕೆ ಗಂಡಾಂತರವಾಗುತ್ತದೆ. ಮನೆಯಲ್ಲಿ ಸಾವು ನೋವು ಆಗುತ್ತದೆಂದು ಮೈಮಲೇ ದೇವರು ಬರುತ್ತದೆ ಎಂದು ಆಶಾ ನಂಬಿಸಿದ್ದಳು. ಇದನ್ನು ನಂಬಿದ ಮಗ ಸಂಜಯ್, ತಾಯಿಗೆ ದೆವ್ವ ಬಿಡಿಸಲು ಜು.6ರ ರಾತ್ರಿ ಆಶಾ ಮತ್ತು ಆಕೆಯ ಪತಿಯನ್ನು ಮನೆಗೆ ಕರೆಯಿಸಿದ್ದಾನೆ. ಭೂತ ಬಿಡಿಸುವ ನೆಪದಲ್ಲಿಆಶಾ, ಮೂರು ನಾಲ್ಕು ಗಂಟೆ ನಿರಂತರವಾಗಿ ಗೀತಾಳಿಗೆ ಕೋಲಿನಿಂದ ಹೊಡೆದಿದ್ದಾಳೆ. ಪರಿಣಾಮ ಬೆಳಗ್ಗೆ ಗೀತಾ ಮೃತಪಟ್ಟಿದ್ದಾಳೆ.
