‘ಮೋದಿ’ಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ನಮೀಬಿಯಾ ಸಂಸತ್ತಿನಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದಂತೆ ಸದನದಲ್ಲಿದ್ದ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಅಲ್ಲಿ ನೆರೆದಿದ್ದ ಪ್ರೇಕ್ಷಕರು 'ಮೋದಿ, ಮೋದಿ' ಎಂಬ ಘೋಷಣೆಗಳನ್ನು ಕೂಗಿದ್ದಾರೆ. 5 ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ಮೋದಿ ನಮೀಬಿಯಾದ ವಿಂಡ್‌ಹೋಕ್‌ನಲ್ಲಿದ್ದಾರೆ. 27 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನಮೀಬಿಯಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದ್ದು, ಭಾರತ-ನಮೀಬಿಯಾ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ವಿಂಡ್‌ಹೋಕ್, ಜುಲೈ 9: ನಮೀಬಿಯಾ ಸಂಸತ್ತಿನಲ್ಲಿ ಭಾಷಣ ಮಾಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ (PM Modi in Namibia) ಅವರಿಗೆ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಅಲ್ಲಿದ್ದ ಪ್ರೇಕ್ಷಕರು ‘ಮೋದಿ, ಮೋದಿ’ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಭಾಷಣ ಶುರು ಮಾಡುವ ಮುನ್ನ ಪ್ರಧಾನಿ ಮೋದಿ ನಮೀಬಿಯಾದ ಸ್ಥಳೀಯ ಭಾಷೆಯನ್ನು ಬಳಸಿದ್ದು, ಇದಕ್ಕೆ ಭಾರೀ ಕರತಾಡನ ಕೇಳಿಬಂದಿತು. ಜಾಗತಿಕ ದಕ್ಷಿಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ 5 ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ಮೋದಿ ನಮೀಬಿಯಾದ ವಿಂಡ್‌ಹೋಕ್‌ನಲ್ಲಿದ್ದಾರೆ. 27 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ನಮೀಬಿಯಾಕ್ಕೆ ನೀಡಿದ ಮೊದಲ ಭೇಟಿ ಇದಾಗಿದ್ದು, ಭಾರತ-ನಮೀಬಿಯಾ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಇಂದು ಪ್ರಧಾನಿ ಮೋದಿ ಅವರಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ಪ್ರದಾನ ಮಾಡಲಾಯಿತು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ. ಕಳೆದ ಒಂದು ವಾರದಲ್ಲಿ ಪ್ರಧಾನಿ ಮೋದಿ ಅವರು ವಿದೇಶದ ಸಂಸತ್ತಿನಲ್ಲಿ ಮಾಡಿದ ಮೂರನೇ ಭಾಷಣ ಇದಾಗಿದೆ. ಪ್ರಧಾನಿ ಮೋದಿ ಇದುವರೆಗೆ ನಮೀಬಿಯಾ ಸೇರಿದಂತೆ 16 ದೇಶಗಳ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವಿಷಯದಲ್ಲಿ ಅವರು ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ (7), ಇಂದಿರಾ ಗಾಂಧಿ (4), ಜವಾಹರಲಾಲ್ ನೆಹರು (3), ಅಟಲ್ ಬಿಹಾರಿ ವಾಜಪೇಯಿ (2), ರಾಜೀವ್ ಗಾಂಧಿ (2), ಪಿ.ವಿ. ನರಸಿಂಹ ರಾವ್ (1) ಮತ್ತು ಮೊರಾರ್ಜಿ ದೇಸಾಯಿ (1) ಅವರಿಗಿಂತ ಬಹಳ ಮುಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

