Budget 2022: ಶೀಘ್ರದಲ್ಲೇ ಆರ್ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ; 2023ಕ್ಕೆ 5ಜಿ ಸ್ಪೆಕ್ಟ್ರಂ ಹರಾಜು
Budget 2022 Highlights: ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ 2023ರ ಆರ್ಥಿಕ ವರ್ಷದಿಂದ ಬಿಡುಗಡೆ ಮಾಡಲಿದೆ. ಡಿಜಿಟಲ್ ಆಸ್ತಿ ವರ್ಗಾವಣೆಯ ಮೇಲೆ 30 ಪ್ರತಿಶತ ತೆರಿಗೆ ವಿಧಿಸಲಾಗುವುದು. ಡಿಜಿಟಲ್ ಸ್ವತ್ತುಗಳ ಉಡುಗೊರೆಗಳಿಗೂ ತೆರಿಗೆ ವಿಧಿಸಲಾಗುತ್ತದೆ.
ನವದೆಹಲಿ: ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ ವಿತರಣೆಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ಬ್ಲಾಕ್‌ಚೈನ್ ಟೆಕ್ನಾಲಜಿ ಮೂಲಕ ಆರ್ಬಿಐನಿಂದ ಡಿಜಿಟಲ್ ರೂಪಾಯಿ (Digital Rupee) ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ 2022-23ರಲ್ಲಿ ರಿಸರ್ವ್ ಬ್ಯಾಂಕ್ನಿಂದ (Reserve Bank) ಡಿಜಿಟಲ್ ಕರೆನ್ಸಿ ಬಿಡುಗಡೆಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಡಿಜಿಟಲ್ ಕರೆನ್ಸಿ, ದೇಶದ ಹಳ್ಳಿ-ಹಳ್ಳಿಯಲ್ಲೂ ಅಂಚೆ ಕಚೇರಿ ಮೂಲಕ ಡಿಜಿಟಲ್ ಬ್ಯಾಂಕಿಂಗ್ (Digital Banking), ಇ- ಪಾಸ್ಪೋರ್ಟ್, ಡಿಜಿಟಲ್ ಪೇಮೆಂಟ್ ಮುಂತಾದ ಯೋಜನೆಗಳನ್ನು ಘೋಷಿಸಲಾಗಿದೆ. ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ 2023ರ ಆರ್ಥಿಕ ವರ್ಷದಿಂದ ಬಿಡುಗಡೆ ಮಾಡಲಿದೆ. ಡಿಜಿಟಲ್ ಆಸ್ತಿ ವರ್ಗಾವಣೆಯ ಮೇಲೆ 30 ಪ್ರತಿಶತ ತೆರಿಗೆ ವಿಧಿಸಲಾಗುವುದು. ಡಿಜಿಟಲ್ ಸ್ವತ್ತುಗಳ ಉಡುಗೊರೆಗಳಿಗೂ ತೆರಿಗೆ ವಿಧಿಸಲಾಗುತ್ತದೆ.
ಮುಂದಿನ 50 ವರ್ಷಗಳ ಕಾಲ ರಾಜ್ಯ ಸರ್ಕಾರಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ರಾಜ್ಯ ಸರ್ಕಾರಗಳಿಗೆ 1 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ರೂಪಿಸಲಾಗಿದೆ. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. ಈಗಾಗಲೇ 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
2022ರಲ್ಲಿ ಎಲ್ಲ ಪೋಸ್ಟ್ ಆಫೀಸ್‌ಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಲಾಗುವುದು. ದೇಶದ ಮೂಲೆಮೂಲೆಯಲ್ಲೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಲಾಗುವುದು. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಯುನಿಟ್ ನಿರ್ಮಾಣ ಮಾಡಲಾಗುವುದು. ಇ- ಪಾಸ್ ಪೋರ್ಟ್ಗೆ ಅವಕಾಶ ನೀಡಲಾಗುವುದು. ಅಂಚೆ ಕಚೇರಿ ಮೂಲಕ ಕೋರ್ ಬ್ಯಾಂಕಿಂಗ್ ಗೆ ಅವಕಾಶ ಕಲ್ಪಿಸಲಾಗುವುದು. ರೈತರಿಗೆ ಇದರಿಂದ ಸಹಕಾರಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
I propose to provide that any income from transfer of any virtual digital asset shall be taxed at the rate of 30%. No deduction in respect of any expenditure or allowance shall be allowed while computing such income, except cost of acquisition: FM Nirmala Sitharaman#Budget2022 pic.twitter.com/DHQvZsRyeN
— ANI (@ANI) February 1, 2022
ಡಿಜಿಟಲ್ ಪೇಮೆಂಟ್, ಡಿಜಿಟಲ್ ಬ್ಯಾಂಕಿಂಗ್ ಗೆ ಹೆಚ್ಚಿನ ಒತ್ತು ನೀಡಲಾಗುವುದು. ಗ್ರೀನ್ ಟ್ರಾನ್ಸ್ಪೋರ್ಟ್ಗೆ ಆದ್ಯತೆ ನೀಡಲಾಗುವುದು. ನಗರ ವಲಯದ ನೀತಿ, ಸಾಮರ್ಥ್ಯ ನಿರ್ಮಾಣ ಮತ್ತು ಆಡಳಿತದ ಕುರಿತು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ನಗರಗಳನ್ನು ಆಧುನೀಕರಣಗೊಳಿಸಲು ರಾಜ್ಯಗಳಿಗೆ ಬೆಂಬಲ ನೀಡಬೇಕು. ಜನರು ಸಮೂಹ ಸಾರಿಗೆ ಬಳಸಲು ಉತ್ತೇಜನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ: EV (ಎಲೆಕ್ಟ್ರಿಕ್ ವಾಹನ) ಚಾರ್ಜಿಂಗ್ ಕೇಂದ್ರಗಳಿಗಾಗಿ ವಿಶೇಷ ವಲಯಗಳನ್ನು ಸ್ಥಾಪಿಸಲಾಗುವುದು. ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ವಲಯಗಳ ಅಭಿವೃದ್ಧಿ ಮಾಡಲಾಗುವುದು. ಬ್ಯಾಟರಿ ವಿನಿಮಯ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
5ಜಿ ಸ್ಪೆಕ್ಟ್ರಂ ಹರಾಜು: 2023ರ ವೇಳೆಗೆ ಟೆಲಿಕಾಂ ಆಪರೇಟರ್‌ಗಳ ಸೇವೆಗಳನ್ನು ಒದಗಿಸಲು 5Gಗಾಗಿ ಸ್ಪೆಕ್ಟ್ರಂ ಹರಾಜನ್ನು ನಡೆಸಲಾಗುವುದು. ಖಾಸಗಿ ಸಂಸ್ಥೆಗಳಿಂದ 2022-23 ರೊಳಗೆ 5G ಮೊಬೈಲ್ ಸೇವೆಗಳನ್ನು ಹೊರತರಲು ಸ್ಪೆಕ್ಟ್ರಮ್ ಹರಾಜು ನಡೆಸಲಾಗುವುದು. ಡಿಜಿಟಲ್ ಪಾವತಿಗಳು ತ್ವರಿತ ಗತಿಯಲ್ಲಿ ಬೆಳೆದಿವೆ. ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ಮೂಲೆ ಮೂಲೆಯನ್ನು ತಲುಪಬೇಕು. ಈ ಕಾರ್ಯಸೂಚಿಯನ್ನು ಮುಂದಕ್ಕೆ ತೆಗೆದುಕೊಂಡು, ನಾವು 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಶೆಡ್ಯೂಲ್ ವಾಣಿಜ್ಯ ಬ್ಯಾಂಕ್‌ಗಳಿಂದ ಸ್ಥಾಪಿಸುತ್ತೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದನ್ನೂ ಓದಿ: Budget 2022 Speech LIVE: ಬಜೆಟ್ ಮಂಡನೆ ಆರಂಭ; ಡಿಜಿಟಲ್ ಕರೆನ್ಸಿ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಧಾರ
Published On - 12:29 pm, Tue, 1 February 22