LPG Cylinder Price: ಬಜೆಟ್ ಮಂಡನೆಗೂ ಮೊದಲು ಗುಡ್ನ್ಯೂಸ್; ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಮತ್ತೆ 91.50 ರೂ. ಇಳಿಕೆ
Commercial Cylinder Price: ಡಿಸೆಂಬರ್ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2101 ರೂಪಾಯಿ ಆಗಿದ್ದು ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿತ್ತು. 2012-13ರಲ್ಲಿ 2,200ರೂ.ಗೆ ತಲುಪಿದ ಮೇಲೆ ಅಷ್ಟೆಲ್ಲ ಏರಿಕೆಯಾಗಿರಲಿಲ್ಲ.
LPG Gas Cylinder Price | ಕೇಂದ್ರ ಬಜೆಟ್ ಮಂಡನೆಗೆ ಕೆಲವೇ ಹೊತ್ತುಗಳ ಮೊದಲು ದೇಶದ ಜನರಿಗೆ ಒಂದು ಗುಡ್ನ್ಯೂಸ್ ನೀಡಲಾಗಿದೆ. ಎಲ್ಪಿಜಿ ಸಿಲಿಂಡರ್ಗಳ ನವೀಕೃತ ಬೆಲೆಯನ್ನು ತೈಲು ಮಾರುಕಟ್ಟೆ ಕಂಪನಿಗಳು (OMCs)ಬಿಡುಗಡೆ ಮಾಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು 91.50 ರೂಪಾಯಿ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,907 ರೂಪಾಯಿ ಆಗಿದೆ. ಡಿಸೆಂಬರ್ವರೆಗೂ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು. ಇದೀಗ ಫೆಬ್ರವರಿಯಲ್ಲಿ ಕೂಡ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನಿರಾಳತೆ ಮೂಡಿಸಿದೆ. ಡಿಸೆಂಬರ್ 1ರಂದು 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಏರಿಕೆಯಾಗಿತ್ತು. ಅಲ್ಲಿಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2101 ರೂಪಾಯಿ ಆಗಿತ್ತು.
National Oil Marketing companies have reduced commercial 19-kg LPG cylinder cost by Rs 91.50 effective from today, 1st February. 19 kg commercial cylinder will cost Rs 1907 in Delhi from today: Sources
— ANI (@ANI) February 1, 2022
ಡಿಸೆಂಬರ್ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2101 ರೂಪಾಯಿ ಆಗಿದ್ದು ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿತ್ತು. 2012-13ರಲ್ಲಿ 2,200ರೂ.ಗೆ ತಲುಪಿದ ಮೇಲೆ ಅಷ್ಟೆಲ್ಲ ಏರಿಕೆಯಾಗಿರಲಿಲ್ಲ. ಆದರೆ ಜನವರಿ 1 ರಂದು ತೈಲ ಮಾರುಕಟ್ಟೆ ಕಂಪನಿಗಳು 102.50 ರೂಪಾಯಿ ಕಡಿತಗೊಳಿಸಿದರೂ, ಸಿಲಿಂಡರ್ ಬೆಲೆ 2 ಸಾವಿರ ರೂಪಾಯಿ ಮೇಲ್ಪಟ್ಟೇ ಇತ್ತು. ಇನ್ನು ಸಬ್ಸಿಡಿ ರಹಿತ (14.KG) ಇಂಡೇನ್ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 899.50 ರೂಪಾಯಿ ಇದೆ. ಮುಂಬೈನಲ್ಲಿ ಈ ಬೆಲೆ ದೆಹಲಿಯಲ್ಲದ್ದಷ್ಟೇ ಇದ್ದರೆ, ಕೋಲ್ಕತ್ತದಲ್ಲಿ 14 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ 926 ರೂಪಾಯಿ ಇದೆ.
ಇದನ್ನೂ ಓದಿ: Budget 2022 Download Pdf; ಬಜೆಟ್ ಪ್ರತಿಯ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳವ ವಿಧಾನ ಇಲ್ಲಿದೆ
Published On - 11:08 am, Tue, 1 February 22