Budget 2022 Download PDF: ಬಜೆಟ್ ಪ್ರತಿಯ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ
ಬಜೆಟ್ ಪಿಡಿಎಫ್ಅನ್ನು ನೀವು ನಿಮ್ಮ ಮೊಬೈಲ್ ಆ್ಯಪ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ನೀವೂ ಕೂಡ ಯುನಿಯನ್ ಬಜೆಟ್ ಮೊಬೈಲ್ ಆ್ಯಪ್ ಮೂಲಕ ಬಜೆಟ್ ಪ್ರತಿಯ ಪಿಡಿಎಫ್ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಬಾರಿಯ ಕೇಂದ್ರ ಮುಂಗಡ ಪತ್ರದ (Union Budget 2022) ಮಂಡನೆ ಆರಂಭವಾಗಿದೆ. ಬಜೆಟ್ ಪಿಡಿಎಫ್ಅನ್ನು ನೀವು ನಿಮ್ಮ ಮೊಬೈಲ್ ಆ್ಯಪ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಕೊರೊನಾ ಕಾರಣದಿಂದ ಡಿಜಿಟಲ್ ಪ್ರತಿ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಹೀಗಾಗಿ ನೀವೂ ಕೂಡ ಯುನಿಯನ್ ಬಜೆಟ್ ಮೊಬೈಲ್ ಆ್ಯಪ್ ಮೂಲಕ ಬಜೆಟ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಎಲ್ಲಾ ಆಂಡ್ರಾಯಿಡ್ ಮೊಬೈಲ್ ಗಳಲ್ಲಿನ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ನೀವೂ ಕೂಡ ಬಜೆಟ್ನ ಪೂರ್ಣ ಪ್ರಮಾಣದ ಪ್ರತಿಯನ್ನು ಪಡೆದುಕೊಳ್ಳಬಹುದು.
ಈ ಆ್ಯಪ್ 2 ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಈ ಅ್ಯಪ್ ಬಳಕೆಗೆ ಲಭ್ಯವಿದೆ. ಬಳಕೆದಾರರಿಗೆ ಅನುಕೂಲವಾಗುವಂತೆ ಇರುವ ಈ ಅ್ಯಪ್ಗೆ ನೀವು ರಿಜಿಸ್ಟರ್ ಅಥವಾ ಲಾಗ್ ಇನ್ ಆಗುವ ಅಗತ್ಯವಿಲ್ಲ. ಆ್ಯಪ್ ಅಲ್ಲದೆ ನೀವು ಯುನಿಯನ್ ಬಜೆಟ್ ವೆಬ್ ಪೋರ್ಟಲ್ ಮೂಲಕವೂ ಮಾಹಿತಿಯನ್ನು ಪಡೆಯಬಹುದು. ಯುನಿಯನ್ ಬಜೆಟ್ ಆ್ಯಪ್ನಲ್ಲಿ ನೀವು ಪ್ರತಿಯನ್ನು ಜೂಮ್ ಮಾಡಿ, ಪ್ರಿಂಟ್ ತೆಗೆದೂ ಕೂಡ ನೋಡಬಹುದಾಗಿದೆ,
ಯುನಿಯನ್ ಬಜೆಟ್ ಆ್ಯಪ್ ಡೌನ್ಲೋಡ್ ಮಾಡುವುದು ಹೇಗೆ?
ಆಂಡ್ರಾಯ್ಡ್ ಫೋನ್ಗಳಲ್ಲಿ ಪ್ಲೇಸ್ಟೋರ್ನಲ್ಲಿ ಯುನಿಯನ್ ಬಜೆಟ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
NIC e-gov ಆ್ಯಪ್ ಮೂಲಕವೂ ಈ ಅ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.
www.indiabudget.gov.in ಮೂಲಕ ಕೂಡ ನೀವು ಬಜೆಟ್ ಪ್ರತಿಯನ್ನು ಪಡೆಯಬಹುದು. ಅ್ಯಪ್ ಇನ್ಸ್ಟಾಲ್ ಮಾಡಿದ ತಕ್ಷಣ ಬಳಕೆದಾರರು ಬಜೆಟ್ ಪ್ರತಿಯ ಪಿಡಿಎಫ್ಅನ್ನು ಪಡೆಯಬಹುದು. ಹಾಗೂ ಡೌನ್ಲೋಡ್ ಮಾಡಬಹುದು.
ಈ ಆ್ಯಪ್ಅನ್ನು 2021ರ ಜನವರಿ 23ರಂದು ಜಾರಿಗೆ ತರಲಾಯಿತು. ಕೊರೋನಾ ಕಾರಣದಿಂದ ಕಾಗದ ರಹಿತ ಬಜೆಟ್ ಮಂಡನೆಗೆ ಒತ್ತು ನೀಡಿದ ಹಿನ್ನಲೆಯಲ್ಲಿ ಈ ಯುನಿಯನ್ ಬಜೆಟ್ ಆ್ಯಪ್ಅನ್ನು ಬಳಕೆದಾರರ ಅನುಕುಲವಾಗುವಂತೆ ಬಿಡುಗಡೆ ಮಾಡಲಾಯಿತು. ಈ ಮೊಬೈಲ್ ಅಪ್ಲಿಕೇಶನ್ 14 ಕೇಂದ್ರ ಬಜೆಟ್ ದಾಖಲೆಗಳಿಗೆ ಸಂಪೂರ್ಣ ಪ್ರವೇಶವನ್ನು ಅನುಮತಿಸುತ್ತದೆ, ಇದರಲ್ಲಿ ಬಜೆಟ್ ಭಾಷಣ, ವಾರ್ಷಿಕ ಹಣಕಾಸು ಹೇಳಿಕೆ, ಅನುದಾನಕ್ಕಾಗಿ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಇತ್ಯಾದಿಗಳನ್ನು ಸೇರಿಸಲಾಗಿದೆ.
Published On - 11:18 am, Tue, 1 February 22