ಕೇರಳದ ಸ್ನೇಕ್ ಮ್ಯಾನ್ ವಾವಾ ಸುರೇಶ್ ಅವರ ಆರೋಗ್ಯದಲ್ಲಿ ಚೇತರಿಕೆ; ಇನ್ನೂ ಎರಡು ದಿನ ನಿಗಾ
ನಾಗರಹಾವು ಕಡಿತದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೇರಳದ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರನ್ನು ಗುರುವಾರ ವೆಂಟಿಲೇಟರ್‌ನಿಂದ ಹೊರತೆಗೆಯಲಾಗಿದೆ.
ನಾಗರಹಾವು ಕಡಿತದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೇರಳದ ಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರನ್ನು ಗುರುವಾರ ವೆಂಟಿಲೇಟರ್‌ನಿಂದ ಹೊರತೆಗೆಯಲಾಗಿದೆ. ಕೊಟ್ಟಾಯಂ ವೈದ್ಯಕೀಯ ಕಾಲೇಜು ಅಧೀಕ್ಷಕ ಟಿ.ಕೆ.ಜಯಕುಮಾರ್ ಅವರು ಮಾತನಾಡಿ, ಸುರೇಶ್ ಅವರು ಸ್ವತಃ ಉಸಿರಾಡಲು ಪ್ರಾರಂಭಿಸಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ. ಇನ್ನು ಎರಡು ದಿನಗಳ ಕಾಲ ಸುರೇಶ್ ಅವರನ್ನು ನಿಗಾದಲ್ಲಿರಿಸಲಾಗುದು ಎಂದು ವೈದ್ಯರು ತಿಳಿಸಿದ್ದಾರೆ. ವಾವಾ ಸುರೇಶ್ ಆರೋಗ್ಯದ ಮೇಲೆ ನಿಗಾ ಇಡಲು ರಾಜ್ಯ ಆರೋಗ್ಯ ಇಲಾಖೆ ವಿಶೇಷ ವೈದ್ಯಕೀಯ ತಂಡವನ್ನು ರಚಿಸಲಾಗಿದೆ.
ಕೇರಳದಲ್ಲಿ ಮನೆಮಾತಾಗಿರುವ ಸುರೇಶ್, ಇದುವರೆಗೆ 50,000ಕ್ಕೂ ಹೆಚ್ಚು ಸರೀಸೃಪಗಳನ್ನು ರಕ್ಷಿಸಿದ್ದಾರೆ. ಅವರು ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಅನಿಮಲ್ ಪ್ಲಾನೆಟ್ ಚಾನೆಲ್‌ಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದಾರೆ. ಸುರೇಶ್ ಅವರನ್ನು ಪ್ರೀತಿಯಿಂದ ‘ಕೇರಳದ ಸ್ನೇಕ್ ಮ್ಯಾನ್’ (Snake man of Kerala) ಎಂದು ಕರೆಯಲಾಗುತ್ತೆ. 190 ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ರಕ್ಷಿಸಿದ್ದಾರೆ. 48 ವರ್ಷದವರಾದ ವಾವಾ ಸುರೇಶ್ ಜನವರಿ 31 ರಂದು ಕೊಟ್ಟಾಯಂನ ಕುಚರಿ ಗ್ರಾಮಯೊಂದರಲ್ಲಿ ಹಾವನ್ನು ಹಿಡಿಯಲು ಹೋದಾಗ, ಗೋಣಿ ಚೀಲದಲ್ಲಿ ಹಾಕಲು ಯತ್ನಿಸುತ್ತಿದ್ದಾಗ ಬಲತೊಡೆಗೆ ಕಚ್ಚಿದೆ. ಹಾವು ಕಚ್ಚಿದರೂ ಸಹ ಸುರಕ್ಷಿತವಾಗಿ ಗೋಣಿಚೀಲದಲ್ಲಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಕೆಲವು ನಿಮಿಷಗಳ ನಂತರ ಅವರು ಪ್ರಜ್ಞಾಹೀನರಾದರು, ”ಎಂದು ಗ್ರಾಮಸ್ಥರು ಹೇಳಿದ್ದಾರೆ.
250ಕ್ಕೂ ಹೆಚ್ಚು ಹಾವು ಕಡಿತಕ್ಕೆ ಒಳಗಾಗಿದ್ದೇನೆ ಎಂದು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುರೇಶ್ ಹೇಳಿಕೊಂಡಿದ್ದಾರೆ. ಹಾವು ಕಡಿತದಿಂದ ಅವರು ತಮ್ಮ ತೋರುಬೆರಳು ಮತ್ತು ಬಲ ಮಣಿಕಟ್ಟಿನ ಚಲನೆಯನ್ನು ಸಹ ಕಳೆದುಕೊಂಡಿದ್ದಾರೆ. ಕೇರಳ ಅರಣ್ಯ ಇಲಾಖೆಯು ಅವರಿಗೆ ಉದ್ಯೋಗವನ್ನು ನೀಡುತ್ತೇವೆ ಎಂದು ಹೇಳಿದ್ದರು. ಆದರೆ ಅವರೇ ಅದನ್ನು ನಿರಾಕರಿಸಿದ್ದಾರಂತೆ.
ಇದನ್ನೂ ಓದಿ;
Allu Arjun: ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ ಅಲ್ಲು ಅರ್ಜುನ್; ಇಲ್ಲಿವೆ ಫೋಟೋಗಳು