Viral News: 3 ವರ್ಷ ಸಿಗರೇಟ್ ಸೇದುವುದು ಬಿಟ್ಟಿದ್ದಕ್ಕೆ ಲಕ್ಷಾಧಿಪತಿಯಾದ; ಹೇಗೆ ಅಂತೀರಾ?

ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ಸಿಗರೆಟ್ ಸೇದುವ ಚಟವನ್ನು ಬಿಟ್ಟಿದ್ದಕ್ಕೆ 3 ವರ್ಷದಲ್ಲಿ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ.

Viral News: 3 ವರ್ಷ ಸಿಗರೇಟ್ ಸೇದುವುದು ಬಿಟ್ಟಿದ್ದಕ್ಕೆ ಲಕ್ಷಾಧಿಪತಿಯಾದ; ಹೇಗೆ ಅಂತೀರಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 03, 2022 | 4:16 PM

ಧೂಮಪಾನ ಮತ್ತು ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರ ಎಂದು ಗೊತ್ತಿದ್ದರೂ ಬಹುತೇಕ ಜನರು ಅದಕ್ಕೆ ಅಡಿಕ್ಟ್​ ಆಗಿಬಿಟ್ಟಿರುತ್ತಾರೆ. ಎಲ್ಲ ಸಿಗರೇಟ್ ಪ್ಯಾಕ್​ಗಳ ಮೇಲೂ ಧೂಮಪಾನ (Smoking) ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬರೆದಿರುತ್ತಾರೆ. ಆದರೂ ಅದೇ ಸಿಗರೇಟ್ ಪ್ಯಾಕೆಟ್ ಖರೀದಿಸಿ ಸೇದುವವರೇನೂ ಕಡಿಮೆಯಿಲ್ಲ. ಸಿಗರೇಟ್ ಸೇದುವುದು ಬಿಟ್ಟರೆ ಏನು ಲಾಭ? ಎಂದು ನೀವು ಕೇಳಬಹುದು. ಧೂಮಪಾನ ಮಾಡುವುದನ್ನು ಬಿಟ್ಟರೆ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ ನಿಮ್ಮ ಹಣವೂ ಉಳಿಯುತ್ತದೆ. ಇಂಗ್ಲೆಂಡ್​ನ ವ್ಯಕ್ತಿಯೊಬ್ಬರು 3 ವರ್ಷ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಕ್ಕೆ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ!

ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ಸಿಗರೆಟ್ ಸೇದುವ ಚಟವನ್ನು ಬಿಟ್ಟಿದ್ದಕ್ಕೆ 3 ವರ್ಷದಲ್ಲಿ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. 3 ವರ್ಷದ ಹಿಂದೆ ಅರ್ಧ ತಿಂಗಳಾಗುತ್ತಿದ್ದಂತೆ ಬೇರೆಯವರ ಬಳಿ ಸಾಲ ಮಾಡುವ ಪರಿಸ್ಥಿತಿಯಲ್ಲಿದ್ದ ವ್ಯಕ್ತಿ ಇದೀಗ ಧೂಮಪಾನ ಬಿಟ್ಟಿರುವುದರಿಂದ ಲಕ್ಷಾಂತರ ರೂ. ಉಳಿತಾಯ ಮಾಡಿದ್ದಾರೆ. ಅಂದಹಾಗೆ, ಈ ವ್ಯಕ್ತಿ ತನ್ನ 13ನೇ ವರ್ಷದಿಂದ ಸಿಗರೇಟ್ ಸೇದಲು ಶುರು ಮಾಡಿದ್ದರು.

ಸುಮಾರು 20 ವರ್ಷಗಳ ಕಾಲ ಸಿಗರೇಟ್ ಸೇದಿದ ಆ ವ್ಯಕ್ತಿ ಕಳೆದ 3 ವರ್ಷಗಳ ಹಿಂದೆ ಧೂಮಪಾನ ಬಿಡಬೇಕೆಂದು ನಿರ್ಧರಿಸಿದ್ದರು. ಚೈನ್ ಸ್ಮೋಕರ್ ಆಗಿದ್ದ ಅವರು 3 ವರ್ಷಗಳ ಕಾಲ ಸಿಗರೇಟ್ ತ್ಯಜಿಸಿದ್ದರಿಂದ 17 ಲಕ್ಷ ರೂ. ಉಳಿತಾಯ ಮಾಡಿದ್ದಾರೆ. ಸಿಗರೇಟ್ ಸೇದುವುದನ್ನು ಬಿಟ್ಟಿದ್ದರಿಂದ ಹಣ ಉಳಿತಾಯ ಆಗಿರುವುದು ಮಾತ್ರವಲ್ಲದೆ ಸಮಾಜದಲ್ಲಿ ಅವರಿಗೆ ಗೌರವವೂ ಜಾಸ್ತಿಯಾಗಿದೆ.

ಈ ಕುರಿತು ಇಂಗ್ಲೆಂಡ್​ನ ಮಾಧ್ಯಮ ವರದಿ ಮಾಡಿದ್ದು, ಇಂಗ್ಲೆಂಡ್ ಮೂಲದ ವ್ಯಕ್ತಿಯೊಬ್ಬರು ತಮ್ಮ 13ನೇ ವಯಸ್ಸಿನಲ್ಲಿ ಸಿಗರೇಟ್ ಚಟಕ್ಕೆ ಅಂಟಿಕೊಂಡಿದ್ದರು. ತನ್ನ ಕಾಲೇಜಿನಲ್ಲಿದ್ದ ಸೀನಿಯರ್​​ಗಳ ಸಹವಾಸದಿಂದ ಧೂಮಪಾನ, ಮದ್ಯಪಾನವನ್ನು ಶುರು ಮಾಡಿಕೊಂಡಿದ್ದ ಆತ ಸಿಗರೇಟ್​ಗೆ ದಾಸನಾಗಿದ್ದ ಎಂದು ನ್ಯೂಸ್​18 ವರದಿ ಮಾಡಿದೆ.

ಸಿಗರೇಟ್​ ಸೇವನೆಯಿಂದ ಆತನ ಆರೋಗ್ಯ ಹದಗೆಡೊಡಗಿತು. ಹೀಗಾಗಿ, ಸಿಗರೆಟ್​​ನಿಂದ ಮುಕ್ತಿ ಹೊಂದಲು ಬಯಸಿದ ಆತ 2018ರಲ್ಲಿ ಧೂಮಪಾನ ಮಾಡುವುದನ್ನು ನಿಲ್ಲಿಸಿದ. ಈ ಮೊದಲು ಆತನಿಗೆ ಸಿಗರೆಟ್ ಖರೀದಿಸಲು 1 ವಾರಕ್ಕೆ 11,000 ರೂ. ಬೇಕಾಗುತ್ತಿತ್ತು. ಆದರೆ, ಸಿಗರೇಟ್ ಸೇದುವುದು ಬಿಟ್ಟಿದ್ದರಿಂದ ಕಳೆದ 3 ವರ್ಷದಲ್ಲಿ ಆತ 17 ಲಕ್ಷ ರೂ. ಉಳಿಸಿದ್ದಾನೆ. ತನ್ನ ನಿರ್ಧಾರದ ಬಗ್ಗೆ ಆತ ಬಹಳ ಖುಷಿಯಾಗಿದ್ದಾನೆ.

ಇದನ್ನೂ ಓದಿ: Viral News: ಮದುವೆಯಾಗಿ 11 ವರ್ಷ ಕಾದರೂ ಮೊದಲ ರಾತ್ರಿಗೆ ಸಿಗಲೇ ಇಲ್ಲ ಮುಹೂರ್ತ; ಆಮೇಲೇನಾಯ್ತು?

Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್