ಇಂಜಿನಿಯರಿಂಗ್‌ ಸೀಟ್ ಕೊಡಿಸುವುದಾಗಿ ಯುವತಿಗೆ ವಂಚಿಸಿದ್ದ ಆರೋಪಿ ಅರೆಸ್ಟ್

ಇಂಜಿನಿಯರಿಂಗ್‌ ಸೀಟ್ ಕೊಡಿಸುವುದಾಗಿ ಯುವತಿಗೆ ವಂಚಿಸಿದ್ದ ಆರೋಪಿ ಅರೆಸ್ಟ್
ಪ್ರಾತಿನಿಧಿಕ ಚಿತ್ರ

ಎಸಿಎಂ ಬ್ರಾಂಚ್ ಪಡೆದಿದ್ದ ಕಂಪ್ಯೂಟರ್ ಸೈನ್ಸ್‌ ಸೀಟ್‌ಗಾಗಿ ಪ್ರಯತ್ನಿಸುತ್ತಿದ್ದಳು. ಬೇರೆಯವರ ಸೀಟ್ ಕ್ಯಾನ್ಸಲ್ ಆಗಿ ಕಂಪ್ಯೂಟರ್ ಸೈನ್ಸ್ ಸೀಟ್ ಸಿಗಬಹುದಾ ಎಂದು ಕಾಯ್ತಿದ್ರು. ಈ ವೇಳೆ ಕಂಪ್ಯೂಟರ್ ಸೈನ್ಸ್ ಸೀಟ್ ಕ್ಯಾನ್ಸಲ್ ಆಗಿದೆ ಎಂದು ಯುವತಿ ಮೊಬೈಲ್‌ ಫೋನ್‌ಗೆ ಸಂದೇಶ ಬಂದಿತ್ತು.

TV9kannada Web Team

| Edited By: Ayesha Banu

Jan 30, 2022 | 9:11 AM

ಬೆಂಗಳೂರು: ಇಂಜಿನಿಯರಿಂಗ್‌ ಸೀಟ್ ಕೊಡಿಸುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಆರೋಪಿ ರಾಜೇಶ್ವರ್ನನ್ನು ಈಶಾನ್ಯ ವಿಭಾಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ರೇವಾ ಕಾಲೇಜಿನಲ್ಲಿ ಯುವತಿಗೆ ಸೀಟ್ ಕೊಡಿಸೋದಾಗಿ ಹೇಳಿ 1 ಲಕ್ಷದ 27 ಸಾವಿರ ಹಣ ಪಡೆದು ವಂಚಿಸಿದ್ದರು. ಯುವತಿ ರೇವಾ ಕಾಲೇಜಿನಲ್ಲಿ ಇಂಜಿನಿಯರಿಂಗ್‌ಗೆ ಸೇರಿದ್ದಳು. ಎಸಿಎಂ ಬ್ರಾಂಚ್ ಪಡೆದಿದ್ದ ಕಂಪ್ಯೂಟರ್ ಸೈನ್ಸ್‌ ಸೀಟ್‌ಗಾಗಿ ಪ್ರಯತ್ನಿಸುತ್ತಿದ್ದಳು. ಬೇರೆಯವರ ಸೀಟ್ ಕ್ಯಾನ್ಸಲ್ ಆಗಿ ಕಂಪ್ಯೂಟರ್ ಸೈನ್ಸ್ ಸೀಟ್ ಸಿಗಬಹುದಾ ಎಂದು ಕಾಯ್ತಿದ್ರು. ಈ ವೇಳೆ ಕಂಪ್ಯೂಟರ್ ಸೈನ್ಸ್ ಸೀಟ್ ಕ್ಯಾನ್ಸಲ್ ಆಗಿದೆ ಎಂದು ಯುವತಿ ಮೊಬೈಲ್‌ ಫೋನ್‌ಗೆ ಸಂದೇಶ ಬಂದಿತ್ತು. ಕರೆ ಮಾಡಿ ವಿಚಾರಿಸಿದಾಗ ಆರೋಪಿಗಳು ಹಣ ಕೊಡಲು ಹೇಳಿದ್ದರು. ಅದರಂತೆ ಯುವತಿಯ ತಂದೆ 1.27 ಲಕ್ಷ ರೂ. ನೀಡಿದ್ದರು. ಜನವರಿ 13ರಂದು ಆರೋಪಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ರು. ಬಳಿಕ ಹಣ ಪಡೆದು ಆರೋಪಿ ಫೋನ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದರು.

ಕಾಲೇಜಿನಲ್ಲಿ ವಿಚಾರಿಸಿದಾಗ ಆತ ಕಾಲೇಜು ಸಿಬ್ಬಂದಿ ಅಲ್ಲ ಎನ್ನುವುದು ತಿಳಿದು ಬಂದಿತ್ತು. ಘಟನೆ ಸಂಬಂಧ ಯುವತಿ ತಂದೆ ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆ ಆರೋಪಿ ರಾಜೇಶ್ವರ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 3 ಮೊಬೈಲ್, 4 ಲ್ಯಾಪ್ಟಾಪ್, 7 ಸಿಮ್ ಕಾರ್ಡ್, 21 ಗ್ರಾಂ ಚಿನ್ನದ ಚೈನ್, ಮೂರು ಚಿನ್ನದ ನಾಣ್ಯ, 1 ಲಕ್ಷದ 72 ಸಾವಿರ ಹಣ ವಶಕ್ಕೆ ಪಡೆದಿದ್ದಾರೆ.

ಉದ್ಯಮಿ ಅಪಹರಣ; 8 ಆರೋಪಿಗಳು ಅರೆಸ್ಟ್ ಬೆಳಗಾವಿ: ನಗರದಲ್ಲಿ ಉದ್ಯಮಿಯನ್ನು ಅಪಹರಣ (Kidnap) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, 8 ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕ್ರಿಪ್ಟೋ ಕರೆನ್ಸಿ (Cryptocurrency) ವ್ಯವಹಾರ ನಡೆಸುತ್ತಿದ್ದ ರವಿಕಿರಣ್ ಎಂಬುವವರನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಹುಬ್ಬಳ್ಳಿಯಿಂದ ಪುಣೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಿಡ್ನ್ಯಾಪ್ ಆಗಿತ್ತು. ಕೆಎಲ್ಇ ಆಸ್ಪತ್ರೆ ಬಳಿ ಕಾರು ತಡೆದು ಅಪಹರಣ ಮಾಡಿದ್ದರು. ಜ.14ಕ್ಕೆ ಅಪಹರಿಸಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದ ಮಾಹಿತಿ ಇದೀಗ ಬೆಳಕಿಗೆ ಬಂದಿದೆ.

ಆರೋಪಿಗಳು ಬೆಳಗಾವಿ ಕೆಎಲ್ಇ ಆಸ್ಪತ್ರೆ ಬಳಿ ಕಾರನ್ನು ತಡೆದಿದ್ದಾರೆ. ಬೈಕ್​ಗೆ ಕಾರು ಟಚ್ ಮಾಡಿ ಎಸ್ಕೇಪ್ ಆಗುತ್ತಿದ್ದೀಯ ಅಂತಾ ನಾಲ್ವರು ವಾಗ್ವಾದ ನಡೆಸಿದ್ದರು. ರವಿಕಿರಣ್ ಜತೆ ಜಗಳವಾಡಿ ಮೂವರು ಕಾರಿನಲ್ಲಿ ಹತ್ತಿದ್ದರು. ಬಳಿಕ ಹಿಂಬದಿಯಿಂದ ರಿವಾಲ್ವರ್ ತೋರಿಸಿ ನಾವು ಹೇಳಿದ ಕಡೆ ಕಾರು ಚಾಲನೆ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಅಲ್ಲಿಂದ ನೇರವಾಗಿ ಖಾನಾಪುರ ಬಳಿ ಕೋಳಿ ಫಾರ್ಮ್​ಗೆ ಕರೆದೊಯ್ದಿದ್ದಾರೆ.

ಬಂಧಿತರು ರವಿಕಿರಣ್ನಣ್​ನ ಕುರ್ಚಿ ಮೇಲೆ ಕೂರಿಸಿ ಕೈ, ಕಾಲು ಕಟ್ಟಿ ಹೊಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಬಳಿಕ ಆತನ ಬಳಿ ಇದ್ದ 55 ಸಾವಿರ ನಗದು, ಆ್ಯಪಲ್ ವಾಚ್, ಮೊಬೈಲ್, ಚಿನ್ನ ಹಾಗೂ ಬೆಳ್ಳಿಯ ನಾಣ್ಯ, 75 ಸಾವಿರ ಮೌಲ್ಯದ ಯುಎಸ್ ಕರೆನ್ಸಿ ಕಿತ್ತುಕೊಂಡಿದ್ದರು. ಬಳಿಕ ರವಿಕಿರಣ್ ಮೊಬೈಲ್​ನಿಂದ ಪತ್ನಿಗೆ ಕರೆ ಮಾಡಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: Aero India 2021: BIAL ಏರ್‌ಪೋರ್ಟ್‌ಗೆ ತೆರಳುವ ಮಾರ್ಗ ಬದಲಾವಣೆ.. ಡಿಟೇಲ್ಸ್ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada