AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ; ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದ ಸಿಎಂ ಬೊಮ್ಮಾಯಿ

ವಿಧಾನಸೌಧ ಹಾಗೂ ವಿಕಾಸ ಸೌಧದ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗಾಂಧೀಜಿ ಪ್ರತಿಮೆಯ ಬಳಿ 2 ನಿಮಿಷ ಮೌನಾಚರಣೆ ಮಾಡಿದ್ದಾರೆ. ಸ್ಪೀಕರ್ ಕಾಗೇರಿ, ಸಚಿವ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ; ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಆಯೇಷಾ ಬಾನು

Updated on: Jan 30, 2022 | 11:57 AM

ಬೆಂಗಳೂರು: ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ(Mahatma Gandhi Punyathithi) ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ವಿಧಾನಸೌಧ ಹಾಗೂ ವಿಕಾಸ ಸೌಧದ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗಾಂಧೀಜಿ ಪ್ರತಿಮೆಯ ಬಳಿ 2 ನಿಮಿಷ ಮೌನಾಚರಣೆ ಮಾಡಿದ್ದಾರೆ. ಸ್ಪೀಕರ್ ಕಾಗೇರಿ, ಸಚಿವ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಇನ್ನು ಇದೇ ವೇಳೆ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಜನವರಿ 30 ಗಾಂಧೀಜಿ ಅವರ ಬಲಿದಾನ ದಿನ. ಮಹಾತ್ಮ ಗಾಂಧಿ ವಿಶ್ವದ ನಾಯಕರು. ಅಹಿಂಸೆ ಸಿದ್ದಾಂತದಲ್ಲಿ ಜೀವನ ನಡೆಸಿದರು. ನನ್ನ ಜೀವನವೇ ಒಂದು ಸಂದೇಶ ಎಂದು ಹೇಳಿದ್ರು. ನಮಗೆ ಆದರ್ಶಪ್ರಿಯರಾಗಿದ್ದಾರೆ. ಅವರ ಬದುಕು, ವಿಚಾರ ನಮಗೆ ದಾರಿ ದೀಪ. ಭಾರತದ ಗಣತಂತ್ರ ಆಧಾರಸ್ತಂಭ. ಗಾಂಧಿಯವರ ಜೊತೆ ಸುಭಾಸ್ ಚಂದ್ರ್ ಬೋಸ್, ಭಗತ್ ಸಿಂಗ್ ಅವರು ಹುತಾತ್ಮರು. ಇವರುಗಳು ಜೊತೆ ಅನೇಕ ಜನ ಹುತಾತ್ಮರಾಗಿದ್ದಾರೆ.

ಅವರಿಗೆಲ್ಲ ನಾನು ನಮನ ಸಲ್ಲಿಸುತ್ತೇನೆ. ದೇಶದಕ್ಕೆ ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ ಎಂದು ಅವಲೋಕನ ಮಾಡಿದ್ದೇವೆ. ಹಲವಾರು ರಂಗದಲ್ಲಿ ನಾವು ಸಾಧನೆ ಮಾಡಿದ್ದೇವೆ. 75 ವರ್ಷ ಗಳಲ್ಲಿ ನಾವು ಮತ್ತಷ್ಟು ಸಾಧನೆ ಮಾಡಬಹುದಿತ್ತು. ಈ ಬಗ್ಗೆ ಅವಲೋಕನ ಮಾಡಲಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಜಾರಿ ಮಾಡಿದ್ದಾರೆ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಗಾಂಧೀಜಿ ಪುಣ್ಯಸ್ಮರಣೆ ಇನ್ನು ಮತ್ತೊಂದೆಡೆ ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಗಾಂಧಿ ಪ್ರಗತಿಪರ ಚಿಂತನೆ ವಿರುದ್ಧ ಸಂಘ ಪರಿವಾರದವರು ಕೊಲೆ ಮಾಡಿದ್ದು. ನಿಜವಾದ ಕಾರಣ, ಸಂಘ ಪರಿವಾರದವರು ಸಾಮಾಜಿಕ ನ್ಯಾಯದ ಸಂವಿಧಾನ ವಿರೋಧಿಗಳು. ಸಂಘ ಪರಿವಾರದವರು ವೈಜ್ಞಾನಿಕ ಚಿಂತನೆ ವಿರೋಧಿಗಳು. ಸಂಘ ಪರಿವಾರದವರಿಗೆ ದೇಶದ ಬೆಳವಣಿಗೆ ಸಹಿಸಲಿಕ್ಕಾಗದೇ ನಾಥೂರಾಮ್ ಗೋಡ್ಸೆ ಎಂಬ ಉಗ್ರವಾದಿ ಕೊಲೆ ಮಾಡ್ತಾನೆ. ನಾವು ದೇಶದ ಮೊಟ್ಟ ಮೊದಲ ಉಗ್ರಗಾಮಿ ಗೋಡ್ಸೆ ಎನ್ನುವುದನ್ನು ಒತ್ತಿ ಒತ್ತಿ ಹೇಳಬೇಕು. ಗಾಂಧಿ ಆದರ್ಶ ಸಿದ್ದಾಂತ ಪ್ರಚಾರ ಮಾಡಿ ಜನರಿಗೆ ತಲುಪಿಸುವ ಜವಾಬ್ದಾರಿ ಕಾಂಗ್ರೆಸ್ ನವರದ್ದು ಎಂದರು.

‘ರಾಷ್ಟ್ರಪಿತ ಗಾಂಧೀಜಿ ಕೊಂದಿದ್ದು ಒಬ್ಬ ಹಿಂದುತ್ವವಾದಿ’ ಸ್ವತಂತ್ರ ಭಾರತದಲ್ಲಿ ಗಾಂಧೀಜಿಯನ್ನು ಗುಂಡಿಟ್ಟು ಕೊಂದರು. ಇದು ಸಾಧಾರಣ, ಮಾಮೂಲಿ ಕೊಲೆಯಲ್ಲ. ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕನ ಕಗ್ಗೊಲೆ. ಗಾಂಧೀಜಿಯನ್ನ ದೇಶದ್ರೋಹಿ ಗೋಡ್ಸೆ ಕೊಲೆ ಮಾಡಿದ್ದಾನೆ. ಗಾಂಧೀಜಿಯನ್ನು ಕೊಲೆ ಮಾಡುವುದಕ್ಕೆ ಗೋಡ್ಸೆಗೆ ಸದ್ಯ ರಾಜಕಾರಣದಲ್ಲಿರುವ ಬಿಜೆಪಿಯವರಿಂದ ಪ್ರೇರಣೆ. ಪ್ರೇರಣೆ ಪಡೆದು ಹತ್ಯೆ ಮಾಡಿದ ಮೊದಲ ಉಗ್ರ ಗೋಡ್ಸೆ. ಗಾಂಧಿಯನ್ನು ಕೊಲೆಮಾಡಿದ್ದು ಯಾರೋ ಪಾಕಿಸ್ತಾನದವರಲ್ಲ. ಗಾಂಧಿ ಕೊಂದಿದ್ದು ಒಬ್ಬ ಹಿಂದುತ್ವವಾದಿ. ಗಾಂಧಿಗಿಂತ ದೊಡ್ಡ ಹಿಂದೂ ವಿಶ್ವದಲ್ಲಿ ಯಾರೊಬ್ಬರೂ ಇಲ್ಲ. ಅವರನ್ನ ಕೊಂದಿದ್ದು ಮುಸ್ಲಿಂ ಅಲ್ಲ, ಸಿಖ್ ಅಲ್ಲ, ಹಿಂದುತ್ವವಾದಿ. ಇವರಿಗೆ ನಿಜವಾದ ಹಿಂದುತ್ವ ಇದ್ದರೆ ಜಿನ್ನಾ ಕೊಲೆ ಮಾಡಬೇಕಿತ್ತು. ಸಂಘ ಪರಿವಾರದ ಸದಸ್ಯರೇ ಗಾಂಧಿ ಹತ್ಯೆಗೆ ನಾಂದಿ ಹಾಕಿಕೊಟ್ಟರು ಎಂದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ. ನಾವೆಲ್ಲ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ ಗಾಂಧಿ ತತ್ವ ಆದರ್ಶ ಸಿದ್ದಾಂತ ಮುಂದೆ ಬೇರೆ ಯಾವ ಪ್ರೇರಣೆಯೂ ಇಲ್ಲ ಅಂತ ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಹೇ ರಾಂ ಅಂತ ಗಾಂಧಿ ಕೊನೆ ಉಸಿರಲ್ಲೂ ಕೂಡ ಹೇಳಿದ್ದರು. ರಘುಪತಿ ರಾಘವ ರಾಜಾರಾಂ ಎಂಬ ಪದಗಳು ಅವರ ಕೊನೆ ಕ್ಷಣದಲ್ಲೂ ಇತ್ತು. ಈ ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧ್ವಜ ಕಾಂಗ್ರೆಸ್ ಧ್ವಜ, ಅದರಲ್ಲೇ ಗಾಂಧಿಜಿಯವರ ಚರಕ ಇದೆ ಎಂದರು.

ಇದನ್ನೂ ಓದಿ: Mann Ki Baat: ಇಂದು ವರ್ಷದ ಮೊದಲ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಮಾತು, ಬೆಳಗ್ಗೆ 11.30ಕ್ಕೆ ಪ್ರಸಾರ

ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ