ಟೋಯಿಂಗ್ ವಿಚಾರಕ್ಕೆ ನಡುರಸ್ತೆಯಲ್ಲಿ ಅಂಗವಿಕಲೆಯ ಮೇಲೆ ಹಲ್ಲೆ ಮಾಡಿದ್ದ ASI ನಾರಾಯಣ್ ಅಮಾನತು
ಟೋಯಿಂಗ್ ವಾಹನದಲ್ಲಿದ್ದ ಕರ್ತವ್ಯ ನಿರತ ಎಎಸ್ಐಗೆ ಕಲ್ಲಿನಿಂದ ಹೊಡೆದಿದ್ದ ವಿಕಲಚೇತನ ಮಹಿಳೆ ಮಂಜುಳಾ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜ.24ರಂದು ಸಂಜೆ ಹಲಸೂರು ಗೇಟ್ ಸಂಚಾರಿ ಠಾಣೆ ಎಎಸ್ಐ ನಾರಾಯಣ್ ಮೇಲೆ ಮಹಿಳೆ ಮಂಜುಳಾ ಕಲ್ಲಿನಿಂದ ಹಲ್ಲೆ ಮಾಡಿದ್ದರು.
ಬೆಂಗಳೂರು: ಮಹಿಳೆ ಮೇಲೆ ಹಲ್ಲೆ ಮಾಡಿದ್ದ ASI ನಾರಾಯಣ್ ಅಮಾನತು ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಹಲಸೂರು ಗೇಟ್ ಸಂಚಾರಿ ಠಾಣೆಯ ಎಎಸ್‌ಐ ನಾರಾಯಣ್ ಅಂಗವಿಕಲ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಎಎಸ್ಐ ನಾರಾಯಣ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿದೆ. ಸದ್ಯ ಟೋಯಿಂಗ್ ವಾಹನದಲ್ಲಿದ್ದ ಕರ್ತವ್ಯ ನಿರತ ಎಎಸ್ಐಗೆ ಕಲ್ಲಿನಿಂದ ಹೊಡೆದಿದ್ದ ವಿಕಲಚೇತನ ಮಹಿಳೆ ಮಂಜುಳಾ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜ.24ರಂದು ಸಂಜೆ ಹಲಸೂರು ಗೇಟ್ ಸಂಚಾರಿ ಠಾಣೆ ಎಎಸ್ಐ ನಾರಾಯಣ್ ಮೇಲೆ ಮಹಿಳೆ ಮಂಜುಳಾ ಕಲ್ಲಿನಿಂದ ಹಲ್ಲೆ ಮಾಡಿದ್ದರು. ಎಎಸ್ ಐ ಮುಖಕ್ಕೆ ಕಲ್ಲುತಾಗಿ ರಕ್ತ ಬಂದಿತ್ತು. ಈ ವೇಳೆ ಕೂಡಲೇ ವಾಹನದಿಂದ ಕೆಳಗಿಳಿದ ಎಎಸ್ಐ ನಾರಾಯಣ್ ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದರು. ವಿಕಲಚೇತನ ಮಹಿಳೆ ಮೇಲೆ ಥಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ಕಲ್ಲೇಟು ಹೊಡೆದ ವಿಕಲಚೇತನ ಮಹಿಳೆ ಮಂಜುಳಾಗೆ ಎಎಸ್ಐ ನಾರಾಯಣ್ ಬೂಟಿನಿಂದ ಒದ್ದಿದ್ದರು. ಕೂದಲೆಳೆದು ಎಳೆದಾಡಿ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದರು. ಘಟನೆ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಹಿಳೆಗೆ ಟೋಯಿಂಗ್ ಮಾಡೋರು ಕಂಡ್ರೆ ಆಗಲ್ವಂತೆ. ಹೀಗಾಗಿ ಟೋಯಿಂಗ್ ನವರು ಕಂಡ್ರೆ ಸಾಕು ಕಲ್ಲಿನಿಂದ ಹಲ್ಲೆ ಮಾಡ್ತಿದ್ದರಂತೆ. ಅದೇ ರೀತಿ ಎಎಸ್ ಐ ನಾರಾಯಣ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಸಿಟ್ಟಿಗೆದ್ದು ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೂಟಿನಿಂದ ಎಎಸ್ಐ ಹಲ್ಲೆ ನಡೆಸಿದ್ದಾರೆ. ಘಟನೆ ಬಳಿಕ ಎಎಸ್ಐ ಗೆ ಕಲ್ಲೇಟು ಹೊಡೆದಿದ್ದ ಮಂಜುಳಾನನ್ನು ಎಸ್ಜೆ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆ ಸಂಬಂಧ ಮಂಜುಳಾ ವಿರುದ್ದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಕಲ್ಲೆಸೆದಿದ್ದಕ್ಕೆ ವಿಕಲಚೇತನ ಮಹಿಳೆ ಮೇಲೆ ASI ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಿನ ಟೋಯಿಂಗ್ ವ್ಯವಸ್ಥೆಯನ್ನ ಪುನರ್ ಪರಿಶೀಲಿಸುತ್ತೇವೆ. ಪೊಲೀಸ್ ಅಧಿಕಾರಿಗಳ ಜೊತೆ ನಾಳೆ ಸಭೆ ನಡೆಸುತ್ತೇನೆ. ಹಲವಾರು ಬದಲಾವಣೆಗಳನ್ನು ತರುತ್ತೇವೆ. ಪೊಲೀಸರು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಪೊಲೀಸರು ಜನರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು. ಜನರೂ ಸಹ ಪೊಲೀಸರಿಗೆ ಸಹಕಾರ ನೀಡಬೇಕು. ಟೋಯಿಂಗ್ ಸಿಬ್ಬಂದಿ ಕಾನೂನು ಪ್ರಕಾರ ನಡೆದುಕೊಳ್ಳಲಿ. ಜನರ ಜತೆ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ; 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು