AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರ ವಿರುದ್ಧ ವರಿಷ್ಠರಿಗೆ, ಸಿಎಂಗೆ ದೂರು ಕೊಟ್ಟಿರುವುದು ನಿಜ: ರೇಣುಕಾಚಾರ್ಯ

MP Renukacharya: ಈ ದೂರವಾಣಿ ಕರೆಯ ಬಗ್ಗೆ ಸಹ ಮಾಹಿತಿ ನೀಡಿರುವೆ. ಈ ವಿಚಾರದ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.

ಸಚಿವರ ವಿರುದ್ಧ ವರಿಷ್ಠರಿಗೆ, ಸಿಎಂಗೆ ದೂರು ಕೊಟ್ಟಿರುವುದು ನಿಜ: ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ (ಸಂಗ್ರಹ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 30, 2022 | 3:31 PM

Share

ಬೆಂಗಳೂರು: ನಾನು 15ಕ್ಕೂ ಹೆಚ್ಚು ದುರಹಂಕಾರಿ ಸಚಿವರ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ (CM Basavaraj Bommai) ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ದೂರು ಕೊಟ್ಟಿರುವುದು ನಿಜ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ  (Honnali MLA Renukacharya) ಹೇಳಿದರು. ನಾನು ಲಿಖಿತ ರೂಪದಲ್ಲಿ ದೂರು ನೀಡಿಲ್ಲ. ಜ.27ರಂದು ಒಬ್ಬ ಸಚಿವರಿಗೆ ನಾನು ಕರೆ ಮಾಡಿದ್ದೆ, ಅವರು ನನ್ನ ಕರೆ ಸ್ವೀಕರಿಸಿರಲಿಲ್ಲ. ಅವರ ಆಪ್ತಸಹಾಯಕರು ಕರೆ ಸ್ವೀಕರಿಸಿ ಸಚಿವರಿಗೆ ಕೊರೊನಾ ಎಂದರು. ನಾನು ಸುಮ್ಮನಾಗಿದ್ದೆ. ಆದರೆ ಮರುದಿ‌ನ ಅವರು ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಸಚಿವರು ಈ ರೀತಿಯಾಗಿ ಮಾಡಿರುವುದು ಸರಿಯಲ್ಲ. ನಾನು ಈ ದೂರವಾಣಿ ಕರೆಯ ಬಗ್ಗೆ ಸಹ ಮಾಹಿತಿ ನೀಡಿರುವೆ. ಈ ವಿಚಾರದ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.

ಹೊನ್ನಾಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರ ಮನವಿಗೆ ಸ್ಪಂದಿಸದ ಹಾಗೂ ಕ್ಷೇತ್ರದ ಕೆಲಸ ಮಾಡಿಕೊಡದ ಕೆಲ ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಕೆಲವು ಸಚಿವರು ತಮ್ಮಿಂದಲೇ ಸರ್ಕಾರ ಬಂದಿದೆ. ತಮ್ಮಿಂದಲೇ ಎಲ್ಲವೂ ನಡೆಯುತ್ತದೆ ಎಂಬ ಅಹಂನಲ್ಲಿದ್ದಾರೆ. ನಾನು ಎಲ್ಲ ಸಚಿವರ ಬಗ್ಗೆ ಟೀಕೆ ಮಾಡುವುದಿಲ್ಲ. ಕೆಲವು ಸಚಿವರು ನಮ್ಮ ಮನವಿಗೆ ಸ್ಪಂದಿಸಿ ನಮ್ಮನ್ನು ಗೌರವದಿಂದ ಕಾಣುತ್ತಾರೆ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಾರೆ. ಅಂಥವರ ಬಗ್ಗೆ ನಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು.

ದುರಹಂಕಾರಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಪಕ್ಷನಿಷ್ಠರಿಗೆ ಅವಕಾಶ ಕೊಡಬೇಕು. 15ಕ್ಕೂ ಹೆಚ್ಚು ಸಚಿವರು ನಮ್ಮ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಕಡೆಪಕ್ಷ ನಮ್ಮನ್ನು ಗೌರವದಿಂದಲೂ ಕಾಣುವುದಿಲ್ಲ. ಕ್ಷೇತ್ರದ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದೇನೆ. ನಾಲ್ಕು ದಿನದೊಳಗೆ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆ ಇದೆ ಎಂದರು.

ನಮಗೆ ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಬಗ್ಗೆ ಅಪಾರ ಗೌರವವಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಗಮನಕ್ಕೂ ಇದನ್ನು ತರಲಿದ್ದೇವೆ. ನಾನು ಸರ್ಕಾರ ಅಥವಾ ಸಂಘಟನೆ ವಿರುದ್ಧವಾಗಿ ಮಾತನಾಡುತ್ತಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಐದು ನಿಮಿಷದಲ್ಲೇ ಭೇಟಿಯಾಗಿ ನಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳು, ಅನುದಾನ ಬಿಡುಗಡೆ ಸೇರಿದಂತೆ ಯಾವುದೇ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಬಹುದಿತ್ತು. ಈಗಲೂ ಕೂಡ ಬೊಮ್ಮಾಯಿ ಅವರು ನಮ್ಮನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. ಆದರೆ ಕೆಲವು ದುರಹಂಕಾರಿ ಸಚಿವರಿಂದ ಮುಜುಗರ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಹಾಗೂ ಡಿಕೆಶಿ ಪಟ್ಟಿ ಬಿಡುಗಡೆ ಮಾಡಲಿ: ರೇಣುಕಾಚಾರ್ಯ ಸವಾಲು ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಕಾಂಗ್ರೆಸ್ ಶಾಸಕರೇ ಬಿಜೆಪಿ ನಾಯಕರ ಸಂಪರ್ಕದಲ್ಲಿ ಇದ್ದಾರೆ. ಬೆಳಗಾವಿ ಅಧಿವೇಶನ ವೇಳೆ ಮಾತಾಡಿದ್ದಾರೆ ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಹೇಳಿದರು. ಯಾವ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಹೇಳಲಿ. ಸಿದ್ದರಾಮಯ್ಯ ಹಾಗೂ ಡಿಕೆಶಿ ಪಟ್ಟಿಯನ್ನು ಬಿಡುಗಡೆ ಮಾಡಲಿ. ಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ ಶಾಸಕರೆಲ್ಲ ಒಟ್ಟಾಗಿದ್ದೇವೆ ಎಂದು ರೇಣುಕಾಚಾರ್ಯ ತಿರುಗೇಟು ಕೊಟ್ಟರು.

ನನಗೆ ಸಚಿವ ಸ್ಥಾನ ಬೇಕು ಎಂದು ನಾನು ಹಠ ಹಿಡಿದಿಲ್ಲ. ನನಗೆ ಸಚಿವ ಸ್ಥಾನ ಬೇಕು ಎಂದು ನಾನು ಹಟ ಹಿಡಿದಿಲ್ಲ. ಹಾಗೆ ಹಟ ಹಿಡಿದಿದ್ದರೆ ಯಾವಾಗಲೋ ಸಚಿವನಾಗುತ್ತಿದ್ದೆ. ಒಂದೂವರೆ ತಿಂಗಳಿಂದ ಯತ್ನಾಳ್, ನಾನು ಆತ್ಮೀಯರಾಗಿದ್ದೇವೆ. ಸಚಿವ ಸ್ಥಾನಕ್ಕೆ ಹೋರಾಟ ಮಾಡಲ್ಲ, ಪಕ್ಷಕ್ಕೆ ಮುಜುಗರ ತರಲ್ಲ. ನಾನು ಆಡಳಿತ ಪಕ್ಷದ ಶಾಸಕ‌ ಯಾರ ವಿರುದ್ಧ ಹೋರಾಟ ಮಾಡಲಿ. ಮೇಲಾಗಿ ನನಗೆ ಸಚಿವ ಸ್ಥಾನ ನೀಡಿ ಎಂದು ಎಲ್ಲೂ ಕೇಳಿಲ್ಲ. ಈ ಬಗ್ಗೆ ನಾಲ್ಕು ಗೋಡೆಗಳ ನಡುವೆ ಪಕ್ಷದ ವರಿಷ್ಠರಿಗೆ ಏನು ಹೇಳಬೇಕೋ ಅದನ್ನ ಹೇಳುವೆ ಎಂದರು.

 ಇದನ್ನೂ ಓದಿ: ಯಾವ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಹೇಳಲಿ, ಸಿದ್ದರಾಮಯ್ಯ ಹಾಗೂ ಡಿಕೆಶಿ ಪಟ್ಟಿಯನ್ನು ಬಿಡುಗಡೆ ಮಾಡಲಿ -ರೇಣುಕಾಚಾರ್ಯ ಇದನ್ನೂ ಓದಿ: ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಚಿವರಾಗಬೇಕಾ? ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವಾ? ರೇಣುಕಾಚಾರ್ಯ ಗರಂ

Published On - 3:21 pm, Sun, 30 January 22

ದರ್ಶನ್​​ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ದರ್ಶನ್​​ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ