ಹೌಸ್​ಫುಲ್​ ಪ್ರದರ್ಶನಕ್ಕೆ ಸರ್ಕಾರದ ಗ್ರೀನ್​ ಸಿಗ್ನಲ್​; ಶ್ರೀನಿ, ಡಾರ್ಲಿಂಗ್​ ಕೃಷ್ಣ ಮೊದಲ ಪ್ರತಿಕ್ರಿಯೆ ಇಲ್ಲಿದೆ..

ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ನೀಡಿರುವುದು ‘ಓಲ್ಡ್​ ಮಾಂಕ್​’, ‘ಲವ್​ ಮಾಕ್ಟೇಲ್​ 2’ ಮುಂತಾದ ಚಿತ್ರತಂಡಗಳಿಗೆ ಖುಷಿ ನೀಡಿದೆ. ಆ ಬಗ್ಗೆ ಶ್ರೀನಿ, ಡಾರ್ಲಿಂಗ್​ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.

TV9kannada Web Team

| Edited By: Madan Kumar

Feb 04, 2022 | 4:15 PM

ಕೊರೊನಾ ವೈರಸ್ ಕಾರಣದಿಂದ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಚಿತ್ರಮಂದಿರದಲ್ಲಿ ಕೇವಲ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈಗ ಮೂರನೇ ಅಲೆಯ ಹಾವಳಿ ಕಡಿಮೆ ಆಗುತ್ತಿರುವುದರಿಂದ ಆ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹೌಸ್​ಫುಲ್​ ಪ್ರದರ್ಶನಕ್ಕೆ ಸರ್ಕಾರದಿಂದ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಈ ಸಂಭ್ರಮದಲ್ಲಿ ‘ಓಲ್ಡ್​ ಮಾಂಕ್​’ ಸಿನಿಮಾದ ನಿರ್ದೇಶಕ/ನಟ ಶ್ರೀನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ‘ಲವ್​ ಮಾಕ್ಟೇಲ್​ 2’ ಚಿತ್ರದ ನಟ ಕಮ್​ ನಿರ್ದೇಶಕ ಡಾರ್ಲಿಂಗ್​ ಕೃಷ್ಣ ಅವರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಫೆ.11ರಂದು ‘ಲವ್​ ಮಾಕ್ಟೇಲ್​ 2’ ಬಿಡುಗಡೆ ಆಗುತ್ತಿದೆ. ‘ಓಲ್ಡ್​ ಮಾಂಕ್​’ ಚಿತ್ರ ಫೆ.25ರಂದು ಎಲ್ಲಡೆ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರಗಳು ತುಂಬ ಸೇಫ್​ ಆಗಿವೆ ಎಂದು ಶ್ರೀನಿ ಹೇಳಿದ್ದಾರೆ. ‘ನೆಮ್ಮದಿಯಿಂದ ಜನರು ಸಿನಿಮಾ ನೋಡಬಹುದು. ಶೇ.100 ಆಕ್ಯುಪೆನ್ಸಿಗೆ ಅವಕಾಶ ನೀಡಿದ್ದಾರೆ ಎಂದರೆ ಕೇಸ್​ ಕಡಿಮೆ ಆಗಿದೆ ಎಂದೇ ಅರ್ಥ. ಪಿವಿಆರ್​ ಚಿತ್ರಮಂದಿರದಲ್ಲಿ ವೈರಸ್​ ಬಾರದಂತೆ ವ್ಯವಸ್ಥೆ ಮಾಡಿರುವುದನ್ನು ನಾನು ಕಂಡಿದ್ದೇನೆ’ ಎಂದು ಶ್ರೀನಿ ಹೇಳಿದ್ದಾರೆ.

ಇದನ್ನೂ ಓದಿ:

‘ಓಲ್ಡ್ ಮಾಂಕ್​’ ಬಿಡುಗಡೆಗೆ ದಿನಾಂಕ ಫಿಕ್ಸ್​; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ

ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​; ಇದರಲ್ಲಿದೆ ಹತ್ತಾರು ವಿಶೇಷತೆ

Follow us on

Click on your DTH Provider to Add TV9 Kannada