ಶಿವಣ್ಣನ ಕಾಲಿಗೆ ನಮಸ್ಕರಿಸಿದ ದುನಿಯಾ ವಿಜಯ್, ಕೀರ್ತಿ; ‘ಸಲಗ’ ಸಕ್ಸಸ್ ವೇದಿಕೆಯಲ್ಲಿ ‘ಹ್ಯಾಟ್ರಿಕ್ ಹೀರೋ’
ಶಿವರಾಜ್ಕುಮಾರ್ ಬಗ್ಗೆ ದುನಿಯಾ ವಿಜಯ್ ಅವರಿಗೆ ಅಪಾರ ಗೌರವ. ‘ಸಲಗ’ ಸಕ್ಸಸ್ ಮೀಟ್ನಲ್ಲಿ ಪತ್ನಿ ಸಮೇತರಾಗಿ ಅವರು ಶಿವಣ್ಣನ ಆಶೀರ್ವಾದ ಪಡೆದರು.
ಕಳೆದ ವರ್ಷ ಸೂಪರ್ ಹಿಟ್ ಆದ ಕೆಲವೇ ಸಿನಿಮಾಗಳಲ್ಲಿ ‘ಸಲಗ’ (Salaga Movie) ಕೂಡ ಪ್ರಮುಖವಾದದ್ದು. ನಟ ದುನಿಯಾ ವಿಜಯ್ (Duniya Vijay) ಅಭಿನಯಿಸಿ, ನಿರ್ದೇಶಿಸಿದ್ದ ಆ ಚಿತ್ರಕ್ಕೆ ಬಂಡವಾಳ ಹೂಡಿದವರು ಕೆ.ಪಿ. ಶ್ರೀಕಾಂತ್. ಶುಕ್ರವಾರ (ಫೆ.4) ಈ ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಅವರು ವೇದಿಕೆಯಲ್ಲಿ ಮಾತನಾಡಿದರು. ಬಳಿಕ ಅವರ ಕಾಲಿಗೆ ದುನಿಯಾ ವಿಜಯ್ ಮತ್ತು ಪತ್ನಿ ಕೀರ್ತಿ ನಮಸ್ಕರಿಸಿದರು. ಶಿವಣ್ಣನ ಬಗ್ಗೆ ದುನಿಯಾ ವಿಜಯ್ ಅವರಿಗೆ ಅಪಾರ ಗೌರವ. ‘ನಾನು ಹೀರೋ ಆಗೋಕಿಂತ ಮುಂಚಿನಿಂದಲೂ ಶಿವಣ್ಣನ ಆಶೀರ್ವಾದ ಮತ್ತು ಬೆಂಬಲ ನಮಗೆ ಇದೆ. ಈಗ ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಅವರ ಹೆಸರಿಗೆ ಕೆಡುಕು ಆಗದಂತೆ ನಡೆದುಕೊಳ್ಳುತ್ತೇವೆ’ ಎಂದರು ದುನಿಯಾ ವಿಜಯ್.
ಇದನ್ನೂ ಓದಿ:
‘ಸಲಗ’ ಗೆಲುವಿನ ವೇದಿಕೆಯಲ್ಲಿ ದುನಿಯಾ ವಿಜಯ್ ಅಳು; ‘ಕರಿಚಿರತೆ’ ಕಣ್ಣೀರಿಗೆ ಕಾರಣ ಏನು?
‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್ಡೇ ಆಚರಣೆಗೆ ದುನಿಯಾ ವಿಜಯ್ ಬ್ರೇಕ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

