‘ಸಲಗ ಗೆದ್ದಿದೆ. ಈ ಕಾರ್ಯಕ್ರಮಕ್ಕೆ ನನ್ನ ಇಡೀ ತಂಡ ಬಂದಿದೆ. ನನ್ನ ಕುಟುಂಬದವರು ಬಂದಿದ್ದಾರೆ. ಚಿತ್ರರಂಗದ ಸ್ನೇಹಿತರು ಬಂದಿದ್ದಾರೆ. ಇದು ನನಗೆ ತುಂಬ ಎಮೋಷನಲ್ ವಿಷಯ. ನನಗೆ, ಕೀರ್ತಿಗೆ, ಸಾಮ್ರಾಟ್ಗೆ ಮತ್ತು ಮೊಹಮ್ಮದ್ಗೆ ಮಾತ್ರ ಗೊತ್ತಿರುವುದು ಇದು. ಸಲಗ ಶುರು ಆಗುವುದಕ್ಕೂ ಮುನ್ನ ನಿರ್ಮಾಪಕ ಶ್ರೀಕಾಂತ್ ಅವರು ಎಸ್ಎಲ್ವಿ ಮುಂದೆ ಇರುತ್ತಾರೆ ಅಂತ ಗೊತ್ತಿತ್ತು. ಅಲ್ಲಿಗೆ ನಾನು ಹೋದೆ. ನನ್ನ ಸಿನಿಮಾ ನಿರ್ಮಾಣ ಮಾಡಿ ಅಂತ ಕೇಳಿಕೊಳ್ಳೋಕೆ ಅಲ್ಲಿಗೆ ಹೋದೆ. ದೇವರಾಣೆ, ಅಂದು ನನ್ನ ಜೇಬಲ್ಲಿ ಇದ್ದಿದ್ದು 40 ರೂಪಾಯಿ ಮಾತ್ರ. ಆ 40 ರೂಪಾಯಿಯನ್ನು ಫೋಟೋ ತೆಗೆದು ಇಟ್ಟಿದ್ದೇನೆ. ಮುಂದೆ ಈ ಜರ್ನಿಯಲ್ಲಿ ಅದರ ಬಗ್ಗೆ ಹೇಳುತ್ತೇನೆ’ ಎಂದು ದುನಿಯಾ ವಿಜಯ್ ಕಣ್ಣೀರು ಹಾಕಿದರು.
‘ನಾನು ನಡೆಯೋಕೆ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನನ್ನನ್ನು ಗೆಲ್ಲುವಂತೆ ಮಾಡಿದ್ದು ಕೆ.ಪಿ. ಶ್ರೀಕಾಂತ್ ಅವರು. ನನ್ನ ಬದುಕಿನಲ್ಲಿ ಒಂದಷ್ಟು ವಿಷಯಗಳು ನಡೆದವು. ನಮ್ಮ ಅಮ್ಮ ತೀರಿ ಹೋಗೋದಕ್ಕಿಂತ ಮುಂಚೆ ಕೀರ್ತಿಗೆ ಒಂದು ಮಾತು ಹೇಳಿದ್ದರು. ಮನೆಯಲ್ಲಿ ಒಂದು ಶಿವಲಿಂಗ ಇದೆ, ಅದಕ್ಕೆ ಪೂಜೆ ಮಾಡು. ಮತ್ತೆ ತುಂಬ ಒಳ್ಳೆಯದಾಗುತ್ತೆ ಅಂತ ಹೇಳಿದ್ದರು. ಶಿವಣ್ಣನ ಮೂಲಕವೇ ನನಗೆ ಒಳ್ಳೆಯದು ಆಗಿರಬಹುದು. ನಾನು ಎರಡು ವರ್ಷ ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಸಿಕ್ಕಿರುವ ಯಶಸ್ಸನ್ನು ಅಪ್ಪ-ಅಮ್ಮ, ಅಪ್ಪು ಮತ್ತು ಅಭಿಮಾನಿಗಳಿಗೆ ಸಲ್ಲಿಸುತ್ತೇನೆ’ ಎಂದು ದುನಿಯಾ ವಿಜಯ್ ಭಾವುಕವಾಗಿ ಮಾತನಾಡಿದರು.
ಇದನ್ನೂ ಓದಿ:
‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್ಡೇ ಆಚರಣೆಗೆ ದುನಿಯಾ ವಿಜಯ್ ಬ್ರೇಕ್
ಟಾಲಿವುಡ್ಗೆ ಎಂಟ್ರಿ ನೀಡಿದ ದುನಿಯಾ ವಿಜಯ್; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್ ಚಾನ್ಸ್