- Kannada News Photo gallery Kamaal R Khan Vulgar Comment against Deepika Padukone After Watching Gehraiyaan
‘ಗೆಹರಾಯಿಯಾ’ ನೋಡಿ ದೀಪಿಕಾ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ನಟ; ಅಭಿಮಾನಿಗಳಿಂದ ತರಾಟೆ
ದೀಪಿಕಾ ಪಡುಕೋಣೆ ಬಗ್ಗೆ ಕಮಾಲ್ ಕೀಳುಮಟ್ಟದಲ್ಲಿ ಟೀಕೆಗಳನ್ನು ಮಾಡಿದ್ದಾರೆ. ಈ ಬಗ್ಗೆ ನಟನ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅವರು ಈ ರೀತಿ ಹೇಳಿಕೆ ನೀಡಿದ್ದು ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ.
Updated on:Feb 12, 2022 | 8:32 PM

ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಚಿತ್ರಕ್ಕೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾಗೆ ಸಾಕಷ್ಟು ಮಂದಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ದೀಪಿಕಾ ಪಡುಕೋಣೆ ನಟನೆ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದಾರೆ. ಆದರೆ, ಕಮಾಲ್ ಆರ್. ಖಾನ್ ಈ ಸಿನಿಮಾವನ್ನು ಟೀಕೆ ಮಾಡಿದ್ದಾರೆ.

ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಅವರು ಎಲ್ಲರಿಗಿಂತ ಭಿನ್ನ. ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಕಲಾವಿದರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಾರೆ. ಈ ಹಿಂದೆ ಅನೇಕ ಬಾರಿ ಸಲ್ಮಾನ್ ಖಾನ್ ವಿರುದ್ಧ ಕಮಾಲ್ ಆರ್. ಖಾನ್ ಗುಡುಗಿದ್ದುಂಟು.

ಈ ಬಾರಿ ದೀಪಿಕಾ ಪಡುಕೋಣೆ ಬಗ್ಗೆ ಕಮಾಲ್ ಕೀಳುಮಟ್ಟದಲ್ಲಿ ಟೀಕೆಗಳನ್ನು ಮಾಡಿದ್ದಾರೆ. ಈ ಬಗ್ಗೆ ನಟನ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅವರು ಈ ರೀತಿ ಹೇಳಿಕೆ ನೀಡಿದ್ದು ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ.

ಈ ಸಿನಿಮಾ ಸಾಫ್ಟ್ ಪೋರ್ನ್ ಎಂದು ಹೀಗಳೆದಿರುವ ಕಮಾಲ್ ಆರ್ ಖಾನ್ ಅವರು, ದೀಪಿಕಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ಬಗ್ಗೆ ಕೆಲವರು ಕಿಡಿಕಾರಿದ್ದಾರೆ. ‘ಸಿನಿಮಾದ ಕಥೆ ನಿಜಕ್ಕೂ ಅದ್ಭುತವಾಗಿದೆ. ನಿಮ್ಮ ತಲೆಯಲ್ಲಿರುವ ದ್ವೇಷವನ್ನು ಬದಿಗಿಟ್ಟು ನೋಡಿ’ ಎಂದು ಕೆಲವರು ಕಮೆಂಟ್ನಲ್ಲಿ ಬುದ್ಧಿವಾದ ಹೇಳಿದ್ದಾರೆ.

‘ಗೆಹರಾಯಿಯಾ ದೀಪಿಕಾ ಪಡುಕೋಣೆ ಅವರ ಬಯೋಪಿಕ್. ಏಕೆಂದರೆ ಅವರು ಹಣವನ್ನು ಮಾತ್ರ ಇಷ್ಪಡುತ್ತಾರೆ’ ಎಂದು ಕಮಾಲ್ ಆರ್ ಖಾನ್ ಬರೆದುಕೊಂಡಿದ್ದಾರೆ. ಇದಕ್ಕೆ ಕೆಲವರು, ಕಮಾಲ್ ವಿರುದ್ಧ ದೂರು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಗೆಹರಾಯಿಯಾ’ ಚಿತ್ರದಲ್ಲಿ ಕೆಲವು ಟ್ವಿಸ್ಟ್ಗಳಿವೆ. ಆ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕ್ಲೈಮ್ಯಾಕ್ಸ್ನ ದೃಶ್ಯ ಸಾಕಷ್ಟು ಜನರಿಗೆ ಖುಷಿ ನೀಡಿದೆ. ದೀಪಿಕಾ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
Published On - 7:19 pm, Sat, 12 February 22




