ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಯಾವಾಗ?; ಸಿಎಂ ಬೊಮ್ಮಾಯಿ ನೀಡಿದ್ರು ಉತ್ತರ
ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಘೋಷಣೆ ಮಾಡಿದ್ದರು. ಆದರೆ, ಈ ಪ್ರಶಸ್ತಿಯನ್ನು ಯಾವಾಗ ನೀಡಲಾಗುತ್ತದೆ ಎನ್ನುವ ಬಗ್ಗೆ ಸರ್ಕಾರ ಘೋಷಣೆ ಮಾಡಿಲ್ಲ. ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಕನ್ನಡ ಚಿತ್ರರಂಗಕ್ಕೆ ಹಾಗೂ ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಪುನೀತ್ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ (Karnataka Ratna Award) ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕಳೆದ ವರ್ಷ ಘೋಷಣೆ ಮಾಡಿದ್ದರು. ಆದರೆ, ಈ ಪ್ರಶಸ್ತಿಯನ್ನು ಯಾವಾಗ ನೀಡಲಾಗುತ್ತದೆ ಎನ್ನುವ ಬಗ್ಗೆ ಸರ್ಕಾರ ಘೋಷಣೆ ಮಾಡಿಲ್ಲ. ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ. ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಬೊಮ್ಮಾಯಿ ಚಾಲನೆ ನೀಡಿದರು. ಈ ವೇಳೆ ಅವರು ಮಾತನಾಡಿದರು. ‘ಪುನೀತ್ ರಾಜ್ಕುಮಾರ್ ಅಗಲಿದ ನಂತರ ಅವರ ಅಭಿಮಾನಿಗಳನ್ನು ನೋಡುತ್ತಿದ್ದೇವೆ. ಪುನೀತ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ದಿನವನ್ನು ಆದಷ್ಟು ಬೇಗ ಪ್ರಕಟಿಸುತ್ತೇನೆ. ಪುನಿತ್ ಸ್ಮಾರಕದ ನಿರ್ಮಾಣವನ್ನೂ ಆದಷ್ಟು ಬೇಗ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು ಅವರು.
ಇದನ್ನೂ ಓದಿ: ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ; ಅವರು ಸಂಪಾದಿಸಿದ್ದು ಹಣವನ್ನಲ್ಲ, ಅಭಿಮಾನಿಗಳನ್ನು ಎಂದ ಸುಮಲತಾ
‘ಅಂಬರೀಷ್ ಜತೆ ಸೇರಿ ಮಾಡಬೇಕಾಗಿದ್ದು, ಮಾಡಬಾರದ್ದು ಎರಡನ್ನೂ ಮಾಡಿದ್ದೇವೆ’; ಸಿಎಂ ಬೊಮ್ಮಾಯಿ