ಮೇಕೆದಾಟು ಪಾದಯಾತ್ರೆಗೆ ನಟ ಪ್ರೇಮ್ ಬೆಂಬಲ; ನಗಾರಿ ಬಾರಿಸಿ ಹುರಿದುಂಬಿಸಿದ ‘ಲವ್ಲಿ ಸ್ಟಾರ್’
ಮೇಕೆದಾಟು ಪಾದಯಾತ್ರೆಯಲ್ಲಿ ಸ್ಯಾಂಡಲ್ವುಡ್ ನಟ ‘ನೆನಪಿರಲಿ’ ಪ್ರೇಮ್ ಭಾಗಿ ಆಗಿದ್ದಾರೆ. ರಾಮನಗರದಲ್ಲಿ ಪ್ರೇಮ್ ಅವರು ನಗಾರಿ ಬಾರಿಸುವ ಮೂಲಕ ಎಲ್ಲರನ್ನೂ ಹುರಿದುಂಬಿಸಿದರು.
ಮೇಕೆದಾಟು (Mekedatu) ಅಣೆಕಟ್ಟು ನಿರ್ಮಾಣಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ. ಅನೇಕ ರಾಜಕೀಯ ಗಣ್ಯರು ಇದರಲ್ಲಿ ಭಾಗಿ ಆಗಿದ್ದಾರೆ. ಚಂದನವನದ ಕೆಲವು ಸೆಲೆಬ್ರಿಟಿಗಳು ಕೂಡ ಈ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಕಳೆದ ಬಾರಿ ಮೇಕೆದಾಟು ಪಾದೆಯಾತ್ರೆ (Mekedatu Padayatra) ಆರಂಭಿಸಿದ್ದಾಗ ಅದಕ್ಕೆ ಕೊರೊನಾ ಅಡ್ಡಗಾಲು ಹಾಕಿತ್ತು. ಕೊವಿಡ್ ನಿರ್ಬಂಧಗಳ ಕಾರಣದಿಂದ ಪಾದಯಾತ್ರೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೆ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಅದರಲ್ಲಿ ಸ್ಯಾಂಡಲ್ವುಡ್ ನಟ ‘ನೆನಪಿರಲಿ’ ಪ್ರೇಮ್ (Nenapirali Prem) ಕೂಡ ಭಾಗಿ ಆಗಿದ್ದಾರೆ. ರಾಮನಗರದಲ್ಲಿ ಪ್ರೇಮ್ ಅವರು ನಗಾರಿ ಬಾರಿಸುವ ಮೂಲಕ ಎಲ್ಲರನ್ನೂ ಹುರಿದುಂಬಿಸಿದರು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಬ್ಬ ಎಸ್‌ಪಿ, ಇಬ್ಬರು ಎಎಸ್‌ಪಿಗಳು, 4 ಡಿವೈಎಸ್ಪಿಗಳು, 12 ಇನ್ಸ್‌ಪೆಕ್ಟರ್‌ಗಳು, 38 ಪಿಎಸ್‌ಐ, 37 ಎಎಸ್‌ಐ, 600 ಪೊಲೀಸ್ ಸಿಬ್ಬಂದಿ, 50 ಮಹಿಳಾ ಪಿಸಿಗಳು, 100 ಹೋಮ್‌ಗಾರ್ಡ್, 20 ಕೆಎಸ್‌ಆರ್‌ಪಿ ತುಕಡಿ, 12 ಡಿಎಆರ್ ಸೇರಿದಂತೆ 1,200 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ:
ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆಯ ನೇರ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
‘ನೆನಪಿರಲಿ’ ಪ್ರೇಮ್ ಮಗಳ ಜನ್ಮದಿನ; ಮುದ್ದಿನ ಪುತ್ರಿಯ ಫೋಟೋ ಹಂಚಿಕೊಂಡು ಶುಭಕೋರಿದ ನಟ