AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ

ಏಪ್ರಿಲ್​ 14ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್​ 2’ ಸಿನಿಮಾ ತೆರೆಗೆ ಬರುತ್ತಿದೆ. ಭಾನುವಾರ ನಡೆದ ಗ್ರ್ಯಾಂಡ್​ ಇವೆಂಟ್​ನಲ್ಲಿ ಐದೂ ಭಾಷೆಗಳಲ್ಲಿ ಟ್ರೇಲರ್ ಲಾಂಚ್​ ಆಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದೆ.

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ
ಕೆಜಿಎಫ್ 2ನಲ್ಲಿ ಯಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 28, 2022 | 2:06 PM

Share

‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್ (KGF Chapter 2) ಯೂಟ್ಯೂಬ್​ನಲ್ಲಿ ಅಬ್ಬರಿಸಿದೆ. ಈ ಟ್ರೇಲರ್​ಅನ್ನು ಎಲ್ಲರೂ ಮರಳಿಮರಳಿ ನೋಡುತ್ತಿದ್ದಾರೆ. ಈ ಕಾರಣಕ್ಕೆ ಎಲ್ಲಾ ಭಾಷೆಯಲ್ಲಿ ರಿಲೀಸ್​ ಆದ ಟ್ರೇಲರ್ ಕೋಟಿಕೋಟಿ ವೀಕ್ಷಣೆ ಕಂಡಿದೆ. ಕನ್ನಡದ ಟ್ರೇಲರ್ ಟ್ರೆಂಡಿಂಗ್​ನಲ್ಲಿ ನಂಬರ್ ಒನ್​ ಸ್ಥಾನದಲ್ಲಿದೆ. ‘ಕೆಜಿಎಫ್ 2’​ ಸಿನಿಮಾದ (KGF 2 Movie) ಟ್ರೇಲರ್​ಗೆ ಇಷ್ಟು ದೊಡ್ಡ ಮಟ್ಟದ ರೆಸ್ಪಾನ್ಸ್ ಬಂದಿರುವ ವಿಚಾರ ಕರ್ನಾಟಕದ ಸಿನಿಪ್ರಿಯರಿಗೆ ಸಖತ್​ ಖುಷಿ ನೀಡಿದೆ. ಸೋಶಿಯಲ್​ ಮೀಡಿಯಾದಲ್ಲಿ (Social Media) ಈ ಬಗ್ಗೆ ಸಂತಸ ಹಂಚಿಕೊಳ್ಳಲಾಗುತ್ತಿದೆ. ‘ಕೆಜಿಎಫ್​’ ಟೀಂ ಕೂಡ ಟ್ರೇಲರ್​ಗೆ ಸಿಕ್ಕ ಪ್ರತಿಕ್ರಿಯೆಗೆ ಸಖತ್​ ಖುಷಿಯಾಗಿದೆ.

ಏಪ್ರಿಲ್​ 14ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್​ 2’ ಸಿನಿಮಾ ತೆರೆಗೆ ಬರುತ್ತಿದೆ. ಭಾನುವಾರ ನಡೆದ ಗ್ರ್ಯಾಂಡ್​ ಇವೆಂಟ್​ನಲ್ಲಿ ಐದೂ ಭಾಷೆಗಳಲ್ಲಿ ಟ್ರೇಲರ್ ಲಾಂಚ್​ ಆಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದೆ. ಇಂದು (ಮಾರ್ಚ್​ 28) ಮಧ್ಯಾಹ್ನ 1 ಗಂಟೆ ವೇಳೆಗೆ ಕನ್ನಡದಲ್ಲಿ ಈ ಸಿನಿಮಾದ ಟ್ರೇಲರ್ 1.7 ಕೋಟಿ (17 ಮಿಲಿಯನ್​) ವೀಕ್ಷಣೆ ಕಂಡಿದೆ. ಹಿಂದಿಯಲ್ಲಿ ಅತಿ ಹೆಚ್ಚು ಅಂದರೆ, 3.3 (33 ಮಿಲಿಯನ್​) ಕೋಟಿ ವೀವ್ಸ್​ ಆಗಿದೆ. ತಮಿಳಿನಲ್ಲಿ 1 ಕೋಟಿ (10 ಮಿಲಿಯನ್​), ತೆಲುಗಿನಲ್ಲಿ 1.2 ಕೋಟಿ (12 ಮಿಲಿಯನ್​) ವೀಕ್ಷಣೆ ಕಂಡಿದೆ. ಮಲಯಾಳಂನಲ್ಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ಸೂಚನೆ ಸಿಕ್ಕಿದೆ. ಮಲಯಾಳಂನಲ್ಲಿ ಈ ಸಿನಿಮಾದ ಟ್ರೇಲರ್​ 58 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’, ‘ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣಹದ್ದುಗಳನ್ನು ಕೇಳು’ ಎಂಬಿತ್ಯಾದಿ ಡೈಲಾಗ್​ಗಳು ಟ್ರೇಲರ್​ನಲ್ಲಿ ಹೈಲೈಟ್​ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಟ್ರೇಲರ್​ನ ತೂಕವನ್ನು ಹೆಚ್ಚಿಸಿದೆ.

‘ಕೆಜಿಎಫ್​’ ಸಿನಿಮಾ ಸೃಷ್ಟಿಸಿದ ಹೈಪ್​ ತುಂಬಾನೇ ದೊಡ್ಡಮಟ್ಟದ್ದು. ಈ ಕಾರಣಕ್ಕೆ ‘ಕೆಜಿಎಫ್​ 2’ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ತೆರೆಗೆ ಬಂದು ಅಬ್ಬರಿಸಬೇಕಿತ್ತು. ಮೊದಲ ಚಾಪ್ಟರ್​ ಪೂರ್ಣಗೊಳ್ಳುತ್ತಿದ್ದಂತೆ ಎರಡನೇ ಚಾಪ್ಟರ್​ ಕೆಲಸಗಳು ಆರಂಭಗೊಂಡಿದ್ದವು. ಆದರೆ, ಕೊವಿಡ್​ ಮೂರು ಅಲೆಗಳಿಂದ ಸಿನಿಮಾ ಕೆಲಸಗಳು ವಿಳಂಬ ಆದವು. ಈಗ ಮೂರನೇ ಅಲೆ ತಣ್ಣಗಾಗಿದೆ. ಹೀಗಾಗಿ, ಸಿನಿಮಾ ಏಪ್ರಿಲ್​ 14ರಂದು ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್​

‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ