‘ಕೆಜಿಎಫ್​ 2’ ಮತ್ತು ‘ಬೀಸ್ಟ್​’ ನಿರ್ದೇಶಕರ ನಡುವೆ ದೋಸ್ತಿ ಹೇಗಿದೆ ನೋಡಿ; ಕ್ಲ್ಯಾಶ್​ ವಿಷಯ ಬಿಟ್ಟುಬಿಡಿ

TV9kannada Web Team

TV9kannada Web Team | Edited By: Madan Kumar

Updated on: Mar 30, 2022 | 3:08 PM

KGF Chapter 2 | Beast Movie: ‘ಕೆಜಿಎಫ್​ 2’ ಟ್ರೇಲರ್ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ತಿಳಿಸಿದ್ದಾರೆ. ಅದಕ್ಕೆ ಪ್ರಶಾಂತ್​ ನೀಲ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಕೆಜಿಎಫ್​ 2’ ಮತ್ತು ‘ಬೀಸ್ಟ್​’ ನಿರ್ದೇಶಕರ ನಡುವೆ ದೋಸ್ತಿ ಹೇಗಿದೆ ನೋಡಿ; ಕ್ಲ್ಯಾಶ್​ ವಿಷಯ ಬಿಟ್ಟುಬಿಡಿ
ಪ್ರಶಾಂತ್​ ನೀಲ್​, ನೆಲ್ಸನ್​ ದಿಲೀಪ್​ ಕುಮಾರ್​

ಏಪ್ರಿಲ್​ ತಿಂಗಳಲ್ಲಿ ಸಿನಿಪ್ರಿಯರಿಗೆ ಮಸ್ತ್​ ಮನರಂಜನೆ ಸಿಗಲಿದೆ. ಹಲವು ಬಿಗ್​ ಬಜೆಟ್​ ಸಿನಿಮಾಗಳು ಒಟ್ಟೊಟ್ಟಿಗೆ ತೆರೆ ಕಾಣುತ್ತಿವೆ. ಆ ಪೈಕಿ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಮತ್ತು ದಳಪತಿ ವಿಜಯ್​ ಅಭಿನಯದ ‘ಬೀಸ್ಟ್​’ ಸಿನಿಮಾಗಳು ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಈ ಎರಡೂ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಚರ್ಚೆಯ ವಿಷಯ ಆಗಿದೆ. ‘ಬೀಸ್ಟ್​’ ಸಿನಿಮಾಗೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್​ ನೀಲ್ (Prashanth Neel)​ ಅವರ ಬತ್ತಳಿಕೆಯಿಂದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬರುತ್ತಿದೆ. ಏ.13ರಂದು ‘ಬೀಸ್ಟ್’ ತೆರೆಕಂಡರೆ, ಮರುದಿನ ಅಂದರೆ ಏ.14ರಂದು ‘ಕೆಜಿಎಫ್​ 2’ ಚಿತ್ರ ಅಬ್ಬರಿಸಲಿದೆ. ಇಬ್ಬರು ಸ್ಟಾರ್​ ಕಲಾವಿದರ ಸಿನಿಮಾಗಳು ಹೀಗೆ ಏಕಕಾಲಕ್ಕೆ ತೆರೆ ಕಾಣುತ್ತಿರುವುದರಿಂದ ಚಿತ್ರಮಂದಿರಗಳ ಹಂಚಿಕೆ ವಿಚಾರದಲ್ಲಿ ಪೈಪೋಟಿ ಏರ್ಪಡಲಿದೆ. ಯಾವ ಚಿತ್ರ ಎಷ್ಟು ಕಲೆಕ್ಷನ್​ ಮಾಡುತ್ತದೆ ಎಂಬ ಕೌತುಕ ಕೂಡ ನಿರ್ಮಾಣ ಆಗಿದೆ. ಈ ನಡುವೆ ‘ಬೀಸ್ಟ್​’ ಚಿತ್ರದ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ (Nelson Dilipkumar) ಹಾಗೂ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಪರಸ್ಪರ ವಿಶ್​ ಮಾಡಿಕೊಂಡಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಅದನ್ನು ಕಂಡು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಇಷ್ಟಪಟ್ಟಿದ್ದಾರೆ. ಟ್ರೇಲರ್​ ನೋಡಿ ಮೆಚ್ಚಿಕೊಂಡಿರುವ ಸೆಲೆಬ್ರಿಟಿಗಳ ಪೈಕಿ ‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಕೂಡ ಪ್ರಮುಖರು. ‘ಕೆಜಿಎಫ್​ 2’ ಟ್ರೇಲರ್ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ಅವರು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರಶಾಂತ್​ ನೀಲ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಇದು ತುಂಬ ದೊಡ್ಡದಾಗಿದೆ ಮತ್ತು ಚೆನ್ನಾಗಿದೆ. ನಿರೀಕ್ಷೆಯಲ್ಲಿದ್ದೇನೆ’ ಎಂದು ನೆಲ್ಸನ್​ ದಿಲೀಪ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದಾರೆ. ಅದನ್ನು ರಿಟ್ವೀಟ್​ ಮಾಡಿರುವ ಪ್ರಶಾಂತ್​ ನೀಲ್​ ಅವರು, ‘ಧನ್ಯವಾದಗಳು ನೆಲ್ಸನ್​ ದಿಲೀಪ್​ ಕುಮಾರ್​. ಎಂದಿನಂತೆ ವಿಜಯ್​ ಸರ್​ ಅವರನ್ನು ದೊಡ್ಡ ಪರೆದ ಮೇಲೆ ನೋಡಲು ಕಾಯುತ್ತಿದ್ದೇನೆ. ಬೀಸ್ಟ್​ ಚಿತ್ರಕ್ಕೆ ಆಲ್​ ದಿ ಬೆಸ್ಟ್​’ ಎಂದು ಬರೆದುಕೊಂಡಿದ್ದಾರೆ. ಈ ನಿರ್ದೇಶಕರಿಬ್ಬರ ಟ್ವೀಟ್​ ಮಾತುಕಥೆ ಕಂಡು ಅಭಿಮಾನಿಗಳು ಖುಷಿ ಆಗಿದ್ದಾರೆ.

‘ಬೀಸ್ಟ್​’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾಗಳ ನಡುವೆ ಕ್ಲ್ಯಾಶ್​ ಆಗಲಿದ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ ಇದನ್ನು ಕ್ಲ್ಯಾಶ್​ ಎಂದು ಹೇಳಲು ಈ ಚಿತ್ರತಂಡಗಳು ಸಿದ್ಧವಿಲ್ಲ. ಈ ಕುರಿತಂತೆ ಟ್ರೇಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಯಶ್​ ಮಾತನಾಡಿದರು. ಅವರು ಹೇಳಿದ ಮಾತು ಕೇಳಿ ಫ್ಯಾನ್ಸ್​ ಕೂಡ ಇಂಪ್ರೆಸ್​ ಆದರು. ‘ಬೀಸ್ಟ್​’ ಮತ್ತು ‘ಕೆಜಿಎಫ್​ 2’ ಸಿನಿಮಾಗಳು ಬಹುಭಾಷೆಯಲ್ಲಿ ತೆರೆಕಾಣುತ್ತಿವೆ. ಎಲ್ಲ ರಾಜ್ಯದಲ್ಲೂ ಪೈಪೋಟಿ ಇರಲಿದೆ.

ಯಶ್​ ಹೇಳಿದ್ದಿಷ್ಟು..

‘ನಾವು ತುಂಬ ಮುಂಚೆಯೇ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಕೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2’ ಸಿನಿಮಾ ಇಷ್ಟ ಆಗಲಿದೆ’ ಎಂದು ಟ್ರೇಲರ್​ ಲಾಂಚ್​ ಸಂದರ್ಭದಲ್ಲಿ ಯಶ್​ ಹೇಳಿದರು.

ಇದನ್ನೂ ಓದಿ:

 ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ

‘ಕೆಜಿಎಫ್​ 2’ ವೀಕ್ಷಿಸಿದ್ದಾರೆ ರಾಧಿಕಾ ಪಂಡಿತ್​; ಸಿನಿಮಾ ಬಗ್ಗೆ ಅವರು ಹೇಳಿದ್ದಿಷ್ಟು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada