AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikrant Rona: ‘ವಿಕ್ರಾಂತ್​ ರೋಣ’ ಚಿತ್ರದ ಬಿಗ್​ ಅನೌನ್ಸ್​ಮೆಂಟ್​; ಕಾತರದಿಂದ ಕಾಯುತ್ತಿರುವ ಕಿಚ್ಚ ಸುದೀಪ್ ಫ್ಯಾನ್ಸ್​

Kichcha Sudeep: ಕಿಚ್ಚ ಸುದೀಪ್​ ಅಭಿಮಾನಿಗಳು ‘ವಿಕ್ರಾಂತ್​ ರೋಣ’ ಸಿನಿಮಾದಿಂದ ಭರ್ಜರಿ ಮನರಂಜನೆ ನಿರೀಕ್ಷಿಸುತ್ತಿದ್ದಾರೆ. ಆ ಚಿತ್ರದ ಬಗ್ಗೆ ಇಂದು (ಮೇ 16) ಹೊಸ ಅಪ್​ಡೇಟ್​ ಸಿಗುತ್ತಿದೆ.

Vikrant Rona: ‘ವಿಕ್ರಾಂತ್​ ರೋಣ’ ಚಿತ್ರದ ಬಿಗ್​ ಅನೌನ್ಸ್​ಮೆಂಟ್​; ಕಾತರದಿಂದ ಕಾಯುತ್ತಿರುವ ಕಿಚ್ಚ ಸುದೀಪ್ ಫ್ಯಾನ್ಸ್​
ಕಿಚ್ಚ ಸುದೀಪ್
TV9 Web
| Edited By: |

Updated on:May 16, 2022 | 8:23 AM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ವಿಕ್ರಾಂತ್​ ರೋಣ’ (Vikrant Rona Movie) ಕೂಡ ಒಂದಾಗಿದೆ ಅನೇಕ ಕಾರಣಗಳಿಂದಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಹುಟ್ಟಿಕೊಂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ಮತ್ತು ಪ್ರೋಮೋಗಳು ಗಮನ ಸೆಳೆದಿವೆ. ಅದ್ದೂರಿಯಾದ ಮೇಕಿಂಗ್​ ಈ ಸಿನಿಮಾದಲ್ಲಿ ಇರಲಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ‘ವಿಕ್ರಾಂತ್​ ರೋಣ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಜುಲೈ 28ರಂದು ರಿಲೀಸ್​ ಆಗಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಆ ದಿನಾಂಕಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ. ರಿಲೀಸ್​ಗೆ ದಿನಗಣನೆ ಆರಂಭ ಆಗಿರುವಾಗ ಚಿತ್ರದ ಪ್ರಮೋಷನ್​ ಕೂಡ ಭರದಿಂದ ಸಾಗುತ್ತಿದೆ. ಆಗಾಗ ಚಿತ್ರದ ಬಗ್ಗೆ ಅಪ್​ಡೇಟ್​ ನೀಡುವಲ್ಲಿ ನಿರ್ದೇಶಕ ಅನೂಪ್​ ಭಂಡಾರಿ ಮತ್ತು ಅವರ ತಂಡ ನಿರತವಾಗಿದೆ. ಇಂದು (ಮೇ 16) ‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ ದೊಡ್ಡ ಅನೌನ್ಸ್​ಮೆಂಟ್​ ಮಾಡುವುದಾಗಿ ಚಿತ್ರತಂಡ ಹೇಳಿದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು (Kichcha Sudeep Fans) ಕಾಯುತ್ತಿದ್ದಾರೆ. ಇಂದು ಸಂಜೆ 5.05 ಗಂಟೆಗೆ ಆ ಸುದ್ದಿ ಹೊರಬೀಳಲಿದೆ.

‘ವಿಕ್ರಾಂತ್​ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಜೊತೆ ನಿರೂಪ್​ ಭಂಡಾರಿ, ನೀತಾ ಅಶೋಕ್​, ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಕೂಡ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಈ ಸಿನಿಮಾ ರಿಲೀಸ್​ ಆಗುತ್ತಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿರುವುದು ಇನ್ನಷ್ಟು ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ‘ಶಾಲಿನಿ ಆರ್ಟ್ಸ್​’ ಬ್ಯಾನರ್​ ಮೂಲಕ ಜಾಕ್​ ಮಂಜು ನಿರ್ಮಾಣ ಮಾಡಿರುವ ಈ ಸಿನಿಮಾಗೆ ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ
Image
ರಾಷ್ಟ್ರ ಭಾಷೆ ವಿವಾದದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲೂ ಕಿಚ್ಚ ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಪೈಪೋಟಿ
Image
‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕೆ ಕಿಚ್ಚನ ಚಪ್ಪಾಳೆ; ಸುದೀಪ್​ ಬರೆದ ದೀರ್ಘ ಪತ್ರದಲ್ಲಿ ಏನೇನಿದೆ?
Image
ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಚಿತ್ರದ 3ಡಿ ದೃಶ್ಯ ನೋಡಿ ವಿಮರ್ಶೆ ನೀಡಿದ ಆರ್​ಜಿವಿ
Image
ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್​

ಬಿಡುಗಡೆಗೂ ಮುನ್ನ ವಿಕ್ರಾಂತ್​ ರೋಣ ಭರ್ಜರಿ ಬಿಸ್ನೆಸ್​:

ಕನ್ನಡ ಸಿನಿಮಾಗಳು ಹೊರ ರಾಜ್ಯ, ಹೊರ ರಾಷ್ಟ್ರಗಳಲ್ಲಿ ಸಖತ್​ ಸದ್ದು ಮಾಡುತ್ತಿವೆ. ಈಗಾಗಲೇ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಯಶಸ್ಸಿನಿಂದಾಗಿ ಸ್ಯಾಂಡಲ್​​ವುಡ್​ ಮೇಲೆ ಪರಭಾಷೆ ಮಂದಿಗೆ ಭರವಸೆ ಮೂಡಿದೆ. ಮುಂಬರುವ ಕನ್ನಡದ ಎಲ್ಲ ಬಿಗ್​ ಬಜೆಟ್​ ಸಿನಿಮಾಗಳಿಗೆ ಒಳ್ಳೆಯ ಮಾರ್ಕೆಟ್​ ಓಪನ್​ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಮಾತಿಗೆ ಪೂರಕವಾಗಿ ‘ವಿಕ್ರಾಂತ್​ ರೋಣ’ ಸಿನಿಮಾ ರಿಲೀಸ್​ಗೂ ಮುನ್ನವೇ ದೊಡ್ಡ ಮೊತ್ತದ ಬಿಸ್ನೆಸ್​ ಮಾಡಿದೆ. ಅದು ಕೂಡ ವಿದೇಶದಲ್ಲಿ ಎಂಬುದು ವಿಶೇಷ. ಈ ಬಹುನಿರೀಕ್ಷಿತ ಸಿನಿಮಾಗೆ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ. ವಿದೇಶದಲ್ಲಿ ವಿತರಕರು ‘ವಿಕ್ರಾಂತ್​ ರೋಣ’ ಚಿತ್ರದ ಹಕ್ಕುಗಳನ್ನು ಖರೀದಿಸುವಲ್ಲಿ ಉತ್ಸುಕತೆ ತೋರಿಸಿದ್ದಾರೆ. ಅದರ ಪರಿಣಾಮವಾಗಿ ರಿಲೀಸ್​ಗೂ ಮೊದಲೇ ಈ ಸಿನಿಮಾ ಬರೋಬ್ಬರಿ 10 ಕೋಟಿ ರೂ. ಡೀಲ್​ ನಡೆಸಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ವಿಷಯ ಕೇಳಿ ಕಿಚ್ಚ ಸುದೀಪ್​ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

ಸುದೀಪ್​ ಅವರಿಗೆ ಬೇರೆ ಬೇರೆ ಭಾಷೆಯ ಸೆಲೆಬ್ರಿಟಿಗಳ ಜೊತೆಗೆ ನಂಟು ಇದೆ. ಆ ಎಲ್ಲ ಸೆಲೆಬ್ರಿಟಿಗಳು ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಮೊದಲಿನಿಂದಲೂ ಬೆಂಬಲ ನೀಡುತ್ತ ಬಂದಿದ್ದಾರೆ. ಏ.2ರಂದು ಈ ಸಿನಿಮಾದ ಟೀಸರ್ ರಿಲೀಸ್​ ಆಗಿತ್ತು. ತಮಿಳಿನಲ್ಲಿ ಸಿಂಬು, ಮಲಯಾಳಂನಲ್ಲಿ ಮೋಹನ್​ ಲಾಲ್​, ಹಿಂದಿಯಲ್ಲಿ ಸಲ್ಮಾನ್​ ಖಾನ್​, ತೆಲುಗಿನಲ್ಲಿ ಮೆಗಾ ಸ್ಟಾರ್​ ಚಿರಂಜೀವಿ ಹಾಗೂ ಇಂಗ್ಲಿಷ್​ನಲ್ಲಿ ವೀರೇಂದ್ರ ಸೆಹ್ವಾಗ್​ ಅವರು ಟೀಸರ್​ ಬಿಡುಗಡೆ ಮಾಡಿದ್ದರು. ಎಲ್ಲರಿಗೂ ಕಿಚ್ಚ ಸುದೀಪ್​ ಅವರು ಧನ್ಯವಾದ ಅರ್ಪಿಸಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:23 am, Mon, 16 May 22

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್