AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​

KGF Chapter 3: ‘ಕೆಜಿಎಫ್​ 3’ ಬಗ್ಗೆ ಹತ್ತು ಹಲವು ಸುದ್ದಿಗಳು ಹಬ್ಬಿವೆ. ಅದು ‘ಹೊಂಬಾಳೆ ಫಿಲ್ಮ್ಸ್​’ ಗಮನಕ್ಕೆ ಬಂದಿದೆ. ಅದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.

‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​
ಯಶ್​
TV9 Web
| Edited By: |

Updated on:May 15, 2022 | 3:11 PM

Share

‘ಕೆಜಿಎಫ್​’ ಸಿನಿಮಾ ಮೊದಲು ಅನೌನ್ಸ್​ ಆದಾಗ ಆ ಚಿತ್ರ ಎರಡು ಪಾರ್ಟ್​ಗಳಲ್ಲಿ ಬರಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ನಂತರ ಆ ಸುದ್ದಿ ಬ್ರೇಕ್​ ಆದಾಗ ಪ್ರೇಕ್ಷಕರು ಎಗ್ಸೈಟ್​ ಆದರು. ‘ಕೆಜಿಎಫ್​: ಚಾಪ್ಟರ್​ 1’ ಸೂಪರ್​ ಹಿಟ್​ ಆಯಿತು. ಈ ವರ್ಷ ತೆರೆಕಂಡ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ‘ಕೆಜಿಎಫ್​ 2’ ಚಿತ್ರದ ಕ್ಲೈಮ್ಯಾಕ್ಸ್​ ನೋಡಿದವರಿಗೆ ‘ಕೆಜಿಎಫ್​ 3’ (KGF 3) ಬಗ್ಗೆ ಸುಳಿವು ಸಿಕ್ಕಿತು. ಮೂರನೇ ಪಾರ್ಟ್​ ಯಾವಾಗ ಶುರುವಾಗಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಆ ಕಾತರವನ್ನೇ ಬಂಡವಾಳ ಮಾಡಿಕೊಂಡು ಕೆಲವರು ಗಾಸಿಪ್​ ಹಬ್ಬಿಸುತ್ತಿದ್ದಾರೆ. ಶೀಘ್ರದಲ್ಲೇ ‘ಕೆಜಿಎಫ್​: ಚಾಪ್ಟರ್ 3​’ ಸಿನಿಮಾದ ಕೆಲಸಗಳು ಶುರು ಆಗಲಿವೆ ಎಂದು ಕೆಲವೆಡೆ ವರದಿ ಪ್ರಕಟ ಆಗಿತ್ತು. ಹೊಂಬಾಳೆ ಫಿಲ್ಮ್ಸ್​ (Hombale Films) ನಿರ್ಮಾಪಕ ವಿಜಯ್​ ಕಿರಗಂದೂರು ಅವರು ಹೇಳಿದ್ದಾರೆ ಎಂಬುದಾಗಿಯೇ ಸುದ್ದಿ ಹರಡಿಸಲಾಗಿತ್ತು. ಅದಕ್ಕೆ ಈಗ ಎಕ್ಸಿಕ್ಯೂಟೀವ್​ ಪ್ರೊಡ್ಯೂಸರ್​ ಕಾರ್ತಿಕ್ ಗೌಡ (Karthik Gowda) ಸ್ಪಷ್ಟನೆ ನೀಡಿದ್ದಾರೆ. ಹರಿದಾಡುತ್ತಿರುವ ಎಲ್ಲ ಅಂತೆ-ಕಂತೆಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಫುಲ್​ ಸ್ಟಾಪ್​​ ಹಾಕಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹವಾ ಇನ್ನೂ ಕಮ್ಮಿ ಆಗಿಲ್ಲ. ಅನೇಕ ಕಡೆಗಳಲ್ಲಿ ಈ ಚಿತ್ರ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ‘ಕೆಜಿಎಫ್​ 3’ ಬಗ್ಗೆ ಹತ್ತು ಹಲವು ಸುದ್ದಿಗಳು ಹಬ್ಬಿವೆ. ಅದು ‘ಹೊಂಬಾಳೆ ಫಿಲ್ಮ್ಸ್​’ ಗಮನಕ್ಕೆ ಬಂದಿದೆ. ಅದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ‘ಹರಿದಾಡುತ್ತಿರುವುದು ಬರೀ ಗಾಳಿ ಸುದ್ದಿ. ನಮ್ಮ ಮುಂದೆ ಸಾಕಷ್ಟು ಪ್ರಾಜೆಕ್ಟ್​ಗಳು ಇವೆ. ನಮ್ಮ ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಸದ್ಯಕ್ಕಂತೂ ‘ಕೆಜಿಎಫ್​ 3’ ಸಿನಿಮಾ ಕೆಲಸಗಳು ಶುರು ಆಗುವುದಿಲ್ಲ. ಆ ಕೆಲಸ ಶುರು ಆದಾಗ ನಾವೇ ದೊಡ್ಡದಾಗಿ ನಿಮಗೆ ತಿಳಿಸುತ್ತೇವೆ’ ಎಂದು ಕಾರ್ತಿಕ್​ ಗೌಡ ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಅವರು ಗಾಸಿಪ್​ಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ
Image
1200 ಕೋಟಿ ರೂ. ಕಲೆಕ್ಷನ್​ ಮಾಡುವತ್ತ ‘ಕೆಜಿಎಫ್​ 2’; ಇನ್ನೂ ಒಂದಷ್ಟು ದಾಖಲೆ ಬರೆಯಲಿದೆ ಯಶ್​ ಚಿತ್ರ
Image
‘ಕೆಜಿಎಫ್​ 2’ ನೋಡಿದ್ಮೇಲೆ ‘ಕೆಜಿಎಫ್​ 3’ ಬಗ್ಗೆ ಶಿವಣ್ಣ ಹೇಳಿದ್ದೇನು? ಇಲ್ಲಿದೆ ‘ಸೆಂಚುರಿ ಸ್ಟಾರ್​’ ಮಾತು
Image
‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’
Image
‘ಕೆಜಿಎಫ್​ ರೀತಿಯ ಕ್ವಾಲಿಟಿ ಸಿನಿಮಾಗಳ ಸಂಖ್ಯೆ ಹೆಚ್ಚಿಸಿ’: ಕನ್ನಡ ಚಿತ್ರರಂಗಕ್ಕೆ ಸಿಎಂ ಬೊಮ್ಮಾಯಿ ಸಲಹೆ

ಹರಿದಾಡಿದ್ದ ಗಾಸಿಪ್​ ಏನು?

‘ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ಶೇ. 30-35 ಚಿತ್ರೀಕರಣ ಮುಗಿದಿದೆ. ಮುಂದಿನ ಶ್ಯೆಡ್ಯೂಲ್ ಮುಂದಿನ ವಾರ ಆರಂಭವಾಗಲಿದೆ. ಈ ವರ್ಷ ಅಕ್ಟೋಬರ್-ನವೆಂಬರ್ ವೇಳೆಗೆ ಶೂಟಿಂಗ್ ಪೂರ್ಣಗೊಳ್ಳಲಿದೆ. ಆ ಬಳಿಕ ‘ಕೆಜಿಎಫ್ 3’ ಶೂಟಿಂಗ್ ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. 2024ರ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಆಶಯ ಇದೆ’ ಎಂದು ವಿಜಯ್​ ಕಿರಗಂದೂರು ಹೇಳಿದ್ದಾರೆ ಅಂತ ಸುದ್ದಿ ಪ್ರಕಟ ಆಗಿತ್ತು.

‘ನಾವು ಮಾರ್ವೆಲ್ ರೀತಿಯ ವಿಶ್ವವನ್ನು ರಚಿಸಲಿದ್ದೇವೆ. ಬೇರೆಬೇರೆ ಸಿನಿಮಾಗಳಲ್ಲಿ ಬರುವ ಪಾತ್ರಗಳನ್ನು ಈ ಸಿನಿಮಾದಲ್ಲಿ ತರಲು ಚಿಂತಿಸಿದ್ದೇವೆ. ಸ್ಪೈಡರ್ ಮ್ಯಾನ್ ಹಾಗೂ ಡಾಕ್ಟರ್ ಸ್ಟ್ರೇಂಜ್​ನಲ್ಲಿ ಬೇರೆ ಸಿನಿಮಾಗಳ ಪಾತ್ರಗಳು ಬಂದಿದ್ದವು. ನಾವು ಅದೇ ರೀತಿ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ಜನರನ್ನು ನಾವು ತಲುಪಬಹುದು’ ಅಂತ ವಿಜಯ್​ ಕಿರಗಂದೂರು ಅವರು ಹೇಳಿದ್ದಾರೆ ಎಂದು ಗಾಸಿಪ್​ ಹಬ್ಬಿತ್ತು.

ವೈರಲ್​ ಆಗಿವೆ ‘ಕೆಜಿಎಫ್​ 3’ ನಕಲಿ ಟ್ರೇಲರ್​ಗಳು:

‘ಕೆಜಿಎಫ್​ 3’ ಟ್ರೇಲರ್ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಟಾಕ್​ ಕ್ರಿಯೇಟ್​ ಆಗಿದೆ. ಹಾಗಂತ ಚಿತ್ರತಂಡದಿಂದ ಅಧಿಕೃತ ಟ್ರೇಲರ್​ ಹೊರಬಂದಿಲ್ಲ. ಇದೇನಿದ್ದರೂ ನಕಲಿ ಟ್ರೇಲರ್​. ಆದರೆ ಪ್ರೇಕ್ಷಕರನ್ನು ಯಾಮಾರಿಸುವ ಸಲುವಾಗಿ ‘KGF Chapter 3 Official Trailer’ ಎಂಬ ಹೆಸರಿನಲ್ಲೇ ಇದನ್ನು ಹರಿಬಿಡಲಾಗಿದೆ. ‘ಕೆಜಿಎಫ್​ 1’, ‘ಕೆಜಿಎಫ್​ 2’, ಯಶ್​ ನಟಿಸಿದ ಕೆಲವು ಜಾಹೀರಾತು ಸೇರಿದಂತೆ ಅನೇಕ ಕಡೆಗಳಿಂದ ದೃಶ್ಯಗಳನ್ನು ಕಾಪಿ ಮಾಡಿಕೊಂಡು, ಅದಕ್ಕೆ ಬೇರೆ ಬೇರೆ ಸಿನಿಮಾಗಳ ಶಾಟ್​ಗಳನ್ನು ಸೇರಿಸಿ, ಹಿನ್ನೆಲೆ ಸಂಗೀತವನ್ನೂ ಜೋಡಿಸಿ ಇಂಥ ವಿಡಿಯೋಗಳನ್ನು ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:11 pm, Sun, 15 May 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ