1200 ಕೋಟಿ ರೂ. ಕಲೆಕ್ಷನ್​ ಮಾಡುವತ್ತ ‘ಕೆಜಿಎಫ್​ 2’; ಇನ್ನೂ ಒಂದಷ್ಟು ದಾಖಲೆ ಬರೆಯಲಿದೆ ಯಶ್​ ಚಿತ್ರ

KGF Chapter 2 Box Office Collection: ಎಷ್ಟೇ ಹೊಸ ಸಿನಿಮಾಗಳು ತೆರೆಕಂಡರೂ ಕೂಡ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರವನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ. ಯಶ್​ ಫ್ಯಾನ್ಸ್​ ಈ ಸಿನಿಮಾವನ್ನು ಅಷ್ಟರಮಟ್ಟಿಗೆ ಮುಗಿಬಿದ್ದು ನೋಡಿದ್ದಾರೆ.

1200 ಕೋಟಿ ರೂ. ಕಲೆಕ್ಷನ್​ ಮಾಡುವತ್ತ ‘ಕೆಜಿಎಫ್​ 2’; ಇನ್ನೂ ಒಂದಷ್ಟು ದಾಖಲೆ ಬರೆಯಲಿದೆ ಯಶ್​ ಚಿತ್ರ
ಯಶ್
Follow us
TV9 Web
| Updated By: ಮದನ್​ ಕುಮಾರ್​

Updated on:May 11, 2022 | 2:51 PM

‘ಕೆಜಿಎಫ್​: ಚಾಪ್ಟರ್​ 2’ (KGF 2 Collection) ಸಿನಿಮಾದ ಕಲೆಕ್ಷನ್​ ನೋಡಿ ಎಲ್ಲರೂ ದಂಗಾಗಿದ್ದಾರೆ. ಹಲವು ಘಟಾನುಘಟಿ ಸ್ಟಾರ್​ ಸಿನಿಮಾಗಳನ್ನೆಲ್ಲ ಹಿಂದಿಕ್ಕಿ ಈ ಚಿತ್ರ ಧೂಳೆಬ್ಬಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ‘ಕೆಜಿಎಫ್​ 2’ ಕಲೆಕ್ಷನ್​ ಇನ್ನೂ ತಗ್ಗಿಲ್ಲ. ಬಿಡುಗಡೆಯಾಗಿ 28 ದಿನ ಕಳೆದಿದೆ. ಆದರೂ ಸಹ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ತನ್ನ ನೆಲೆಯನ್ನು ಬೇರೆ ಸಿನಿಮಾಗೆ ಬಿಟ್ಟುಕೊಟ್ಟಿಲ್ಲ. ಹಾಲಿವುಡ್​ನ ‘ಡಾಕ್ಟರ್​ ಸ್ಟ್ರೇಂಜ್​ ಇನ್​ ದಿ ಮಲ್ಟಿವರ್ಸ್​ ಆಫ್​ ಮ್ಯಾಡ್ನೆಸ್​’ ಸಿನಿಮಾ ಬಂದರೂ ಕೂಡ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕಲೆಕ್ಷನ್​ಗೆ ತೊಂದರೆ ಆಗಿಲ್ಲ. ಯಶ್​ (Yash) ಚಿತ್ರಕ್ಕೆ ಕೆಲವು ಕಡೆಗಳಲ್ಲಿ ಸ್ಕ್ರೀನ್​ ಸಂಖ್ಯೆ ಕಡಿಮೆ ಆಗಿರಬಹುದು. ಆದರೆ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವುದು ಅಚ್ಚರಿಯೇ ಸರಿ. ಈವರೆಗೂ 1160 ಕೋಟಿ ರೂಪಾಯಿ ಗಳಿಸಿರುವ ಈ ಸಿನಿಮಾದಿಂದ ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ‘ಕೆಜಿಎಫ್​ 2’ ಸಿನಿಮಾದ ಕಲೆಕ್ಷನ್​ (KGF Chapter 2 Collection) 1200 ಕೋಟಿ ರೂಪಾಯಿ ಗಡಿ ಮುಟ್ಟಲಿದೆಯೇ ಎಂಬ ಕೌತುಕ ನಿರ್ಮಾಣ ಆಗಿದೆ. ಇನ್ನಷ್ಟು ದಾಖಲೆಗಳನ್ನು ಮುರಿಯುವ ಸಾಧ್ಯತೆ ದಟ್ಟವಾಗಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಯಶಸ್ವಿಯಾಗಿ 25ನೇ ದಿನವನ್ನು ಪೂರೈಸಿತು. ಇಂದಿನ ಕಾಲದಲ್ಲಿ 25 ದಿನಗಳ ಕಾಲ ಸತತವಾಗಿ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುವುದು ಎಂದರೆ ತಮಾಷೆಯ ವಿಷಯವೇ ಅಲ್ಲ. ಈ 25 ದಿನಗಳಲ್ಲಿ ಅನೇಕ ಬೇರೆ ಬೇರೆ ಸಿನಿಮಾಗಳು ಬಿಡುಗಡೆ ಆದವು. ಮೊದಲು ದಳಪತಿ ವಿಜಯ್​ ನಟನೆ ‘ಬೀಸ್ಟ್​’, ನಂತರ ಶಾಹಿದ್​ ಕಪೂರ್​ ಅಭಿನಯದ ‘ಜೆರ್ಸಿ’ ಚಿತ್ರ ಬಂದವು. ಆದರೆ ‘ಕೆಜಿಎಫ್​ 2’ ಚಿತ್ರಕ್ಕೆ ಫೈಟ್​ ನೀಡಲು ಆ ಸಿನಿಮಾಗಳಿಗೆ ಸಾಧ್ಯವಾಗಲೇ ಇಲ್ಲ.

ಅಜಯ್​ ದೇವಗನ್​ ನಟನೆ ಮಾಡಿ ನಿರ್ದೇಶಿಸಿದ ‘ರನ್​ವೇ 34’ ಚಿತ್ರ ಕೂಡ ಬಿಡುಗಡೆ ಆಯಿತು. ಆ್ಯಕ್ಷನ್​ ಹೀರೋ ಆಗಿ ಗುರುತಿಸಿಕೊಂಡಿರುವ ಟೈಗರ್​ ಶ್ರಾಫ್​ ಅವರ ‘ಹೀರೋಪಂತಿ 2’ ಸಿನಿಮಾ ರಿಲೀಸ್​ ಆದರೂ ಕೂಡ ‘ಕೆಜಿಎಫ್​ 2’ ಸಿನಿಮಾವನ್ನು ಅಲ್ಲಾಡಿಸಲು ಆಗಲಿಲ್ಲ. ಈಗ ಹಾಲಿವುಡ್​ನ ‘ಡಾಕ್ಟರ್​ ಸ್ಟ್ರೇಂಜ್​ ಇನ್​ ದಿ ಮಲ್ಟಿವರ್ಸ್​ ಆಫ್​ ಮ್ಯಾಡ್ನೆಸ್​’ ಸಿನಿಮಾ ಬಂದಿದ್ದರೂ ಕೂಡ ಅನೇಕ ಕಡೆಗಳಲ್ಲಿ ಯಶ್​ ಸಿನಿಮಾ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ
Image
‘ಕೆಜಿಎಫ್​ 2’ ನೋಡಿದ್ಮೇಲೆ ‘ಕೆಜಿಎಫ್​ 3’ ಬಗ್ಗೆ ಶಿವಣ್ಣ ಹೇಳಿದ್ದೇನು? ಇಲ್ಲಿದೆ ‘ಸೆಂಚುರಿ ಸ್ಟಾರ್​’ ಮಾತು
Image
‘ದಂಗಲ್​’ ದಾಖಲೆ ಉಡೀಸ್​ ಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಗೆದ್ದ ಸಿನಿಮಾವನ್ನು ಅತಿಯಾಗಿ ಹೊಗಳ್ತಾರೆ’: ಕೆಜಿಎಫ್​ 2, ಆರ್​ಆರ್​ಆರ್​ ಬಗ್ಗೆ ನವಾಜುದ್ದೀನ್​ ಸಿದ್ದಿಕಿ ಹೇಳಿಕೆ

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಗೆಲುವಿಗೆ ಹಲವು ಕಾರಣಗಳಿವೆ. ರವಿ ಬಸ್ರೂರು ಅವರ ಸಂಗೀತ, ಭುವನ್​ ಗೌಡ ಛಾಯಾಗ್ರಹಣ, ಶಿವಕುಮಾರ್​ ಅವರ ಕಲಾ ನಿರ್ದೇಶನ, ಯಶ್​ ಮ್ಯಾನರಿಸಂ, ಎಲ್ಲ ಕಲಾವಿದರ ನಟನೆ, ತಾಯಿ ಸೆಂಟಿಮೆಂಟ್​, ಮೈ ನವಿರೇಳಿಸುವ ಆ್ಯಕ್ಷನ್​ ಸನ್ನಿವೇಶ, ಸರಿಸಾಟಿ ಇಲ್ಲದ ಮೇಕಿಂಗ್​, ಬೃಹತ್​ ಸೆಟ್​ಗಳು ಸೇರಿದಂತೆ ಅನೇಕ ಅಂಶಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಜಯಭೇರಿ ಬಾರಿಸಿದೆ. ಸಂಜಯ್​ ದತ್​, ರವೀನಾ ಟಂಡನ್​ ಅವರು ‘ಕೆಜಿಎಫ್​ 2’ ಸಿನಿಮಾದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು. ಹಿಂದಿ ಪ್ರೇಕ್ಷಕರಿಗೆ ಈ ಚಿತ್ರ ಆಪ್ತವಾಗಲು ಇದು ಕೂಡ ಒಂದು ಕಾರಣ. ಈ ಸಿನಿಮಾದಿಂದ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:51 pm, Wed, 11 May 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ