‘ಕೆಜಿಎಫ್​ 2’ ನೋಡಿದ್ಮೇಲೆ ‘ಕೆಜಿಎಫ್​ 3’ ಬಗ್ಗೆ ಶಿವಣ್ಣ ಹೇಳಿದ್ದೇನು? ಇಲ್ಲಿದೆ ‘ಸೆಂಚುರಿ ಸ್ಟಾರ್​’ ಮಾತು

‘ಕೆಜಿಎಫ್​ 3’ ಬಗ್ಗೆ ಎಲ್ಲರಿಗೂ ಕೌತುಕ ಇದೆ. ಅದರೆ ಅದು ಹೇಗೆ ಮೂಡಿಬರಲಿದೆ ಅನ್ನೋದು ಯಾರಿಗೂ ತಿಳಿದಿಲ್ಲ. ಆ ಬಗ್ಗೆ ಶಿವರಾಜ್​ಕುಮಾರ್​ ಅನಿಸಿಕೆ ತಿಳಿಸಿದ್ದಾರೆ.

TV9kannada Web Team

| Edited By: Madan Kumar

May 07, 2022 | 9:53 AM

ಕನ್ನಡದ ‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ (Shivarajkumar) ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಈ ಹಿಂದೆ ಟ್ರೇಲರ್​ ಲಾಂಚ್​ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವ ಮೂಲಕ ಅವರು ಚಿತ್ರತಂಡಕ್ಕೆ ಬೆನ್ನು ತಟ್ಟಿದ್ದರು. ಈಗ ಅವರು ಬೆಂಗಳೂರಿನಲ್ಲಿ ‘ಕೆಜಿಎಫ್​ 2’ (KGF Chapter 2) ನೋಡಿದ್ದಾರೆ. ಪ್ರೇಕ್ಷಕನಾಗಿ ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ‘ಕೆಜಿಎಫ್​ 3’ (KGF 3) ಬಗ್ಗೆ ಸುಳಿವು ನೀಡಲಾಗಿದೆ. ಆ ಕುರಿತು ಶಿವಣ್ಣ ಮಾತನಾಡಿದ್ದಾರೆ. ‘ಇನ್ನೊಂದು ಪಾರ್ಟ್​ ಮಾಡೋದು ನಿರ್ದೇಶಕರ ಕೆಲಸ. ಅದರ ಬಗ್ಗೆ ನಂಗೆ ಏನೂ ತಿಳಿದಿಲ್ಲ. ತಿಳಿದಿದ್ದರೆ ನಾನೇ ಡೈರೆಕ್ಟರ್​ ಆಗಿಬಿಡುತ್ತೇನೆ. ಇನ್ನೊಬ್ಬರ ಆಲೋಚನೆಯನ್ನು ಕದಿಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಿರ್ದೇಶಕರನ್ನು ಕ್ಯಾಪ್ಟನ್​ ಆಫ್​ ದಿ ಶಿಪ್​ ಅಂತೀವಿ. ಸರಸ್ವತಿ ಪುತ್ರರು ಅಂತ ಹೇಳ್ತೀವಿ. ಪ್ರಶಾಂತ್​ ನೀಲ್​ಗೆ ಫೋನ್​ ಮಾಡಿ ಪಾರ್ಟ್​ 3 ಬಗ್ಗೆ ಕೇಳ್ತೀನಿ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada