‘ಪ್ರಶಾಂತ್​ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟ’: ವಿವರ ನೀಡಿದ ಆರ್​ಜಿವಿ

TV9 Digital Desk

| Edited By: ಮದನ್​ ಕುಮಾರ್​

Updated on:May 05, 2022 | 9:09 AM

ರಾಮ್​ ಗೋಪಾಲ್​ ವರ್ಮಾ ಅವರ ಈ ಮಾತುಗಳಿಗೆ ಪ್ರಶಾಂತ್​ ನೀಲ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಅಂತ ಕಾದು ನೋಡಬೇಕಷ್ಟೇ. ಮುಂದಿನ ಸಿನಿಮಾ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ.

‘ಪ್ರಶಾಂತ್​ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟ’: ವಿವರ ನೀಡಿದ ಆರ್​ಜಿವಿ
ಪ್ರಶಾಂತ್​ ನೀಲ್​, ರಾಮ್​ ಗೋಪಾಲ್ ವರ್ಮಾ

ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರ ಬಗ್ಗೆ ಇಡೀ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ಇದೆ. ಅದರಲ್ಲೂ ಕನ್ನಡಿಗರಿಗೆ ಅವರನ್ನು ಕಂಡರೆ ಹೆಚ್ಚು ಅಭಿಮಾನ. ಕನ್ನಡ ಚಿತ್ರರಂಗದ ಕಡೆಗೆ ಜಾಗತಿಕ ಸಿನಿಮಾರಂಗ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಪ್ರಶಾಂತ್​ ನೀಲ್​ ಅವರಿಗೆ ಸಲ್ಲುತ್ತದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದಿಂದ ಅವರು ರಾಷ್ಟ್ರಮಟ್ಟದಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಎಷ್ಟೋ ನಿರ್ದೇಶಕರಿಗೆ ಪ್ರಶಾಂತ್​ ನೀಲ್ ಸ್ಫೂರ್ತಿ ಆಗಿದ್ದಾರೆ. ಅವರ ರೀತಿಯೇ ಕೆಲಸ ಮಾಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ (Ram Gopal Varma) ಅವರು ಡಿಫರೆಂಟ್​ ಆಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪ್ರಶಾಂತ್ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಆರ್​ಜಿವಿ ಆರೋಪಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಅಂದಹಾಗೆ, ರಾಮ್​ ಗೋಪಾಲ್​ ವರ್ಮಾ ಅವರು ಪ್ರಶಾಂತ್​ ನೀಲ್​ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಬದಲಿಗೆ ಹೊಗಳಿದ್ದಾರೆ. ಅದು ಹೇಗೆ? ಇಲ್ಲಿದೆ ವಿವರ..

ಮೇ 4ರಂದು ‘ನಿರ್ದೇಶಕರ ದಿನ’. ಆ ಪ್ರಯುಕ್ತ ಎಲ್ಲರೂ ತಮ್ಮ ನೆಚ್ಚಿನ ಸಿನಿಮಾ ನಿರ್ದೇಶಕರಿಗೆ ವಿಶ್ ಮಾಡಿದ್ದಾರೆ. ಈ ಪ್ರಯುಕ್ತ ರಾಮ್​ ಗೋಪಾಲ್​ ವರ್ಮಾ ಅವರು ಪ್ರಶಾಂತ್​ ನೀಲ್​ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಆದರೆ ಅದು ಅವರದ್ದೇ ಸ್ಟೈಲ್​ನಲ್ಲಿ ಎಂಬುದು ವಿಶೇಷ. ‘ಬಾಲಿವುಡ್​, ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್​ನ ಎಲ್ಲ ನಿರ್ದೇಶಕರ ತಲೆ ಕೆಡಿಸಿದ್ದಕ್ಕಾಗಿ ಪ್ರಶಾಂತ್​ ನೀಲ್​ ಅವರಿಗೆ ನಾನು ಅನ್​ಹ್ಯಾಪಿ ಡೈರೆಕ್ಟರ್ಸ್​ ಡೇ ಅಂತ ವಿಶ್​ ಮಾಡುತ್ತೇನೆ. ಪ್ರಶಾಂತ್​ ನೀಲ್​ ಅವರೇ.. ನೀವು ಭಾರತೀಯ ಚಿತ್ರರಂಗದ ವೀರಪ್ಪನ್​’ ಎಂದು ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ

(ರಾಮ್ ಗೋಪಾಲ್ ವರ್ಮಾ ಟ್ವೀಟ್)

‘ಪ್ರಶಾಂತ್​ ನೀಲ್​ ಅವರೇ.. ನೀವು ಕ್ವಿಂಟಾಲ್​ಗಟ್ಟಲೆ ಹಣ ಮಾಡಿದ್ದೀರಿ. ಆದರೆ ಅದರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಟನ್​ಗಳಷ್ಟು ಹಣ ನಷ್ಟ ಆಗಿದೆ. ಯಾಕೆಂದರೆ ಹೊಸದಾಗಿ ಚಿತ್ರೀಕರಣ ಮಾಡಲು, ಹೊಸದಾಗಿ ಡ್ರಾಫ್ಟ್​ ಮಾಡಲು, ಹೊಸದಾಗಿ ಆಲೋಚನೆ ಮಾಡಲು ಬೇರೆ ಚಿತ್ರತಂಡದವರು ಹಣ ಖರ್ಚು ಮಾಡಲಿದ್ದಾರೆ. ಆದರೆ ‘ಕೆಜಿಎಫ್ 2’ ಯಾಕೆ ಗೆದ್ದಿದೆ ಎಂಬುದು​ ಅವರಿಗೆ ತಿಳಿದಿಲ್ಲ’ ಎಂದು ರಾಮ್​ ಗೋಪಾಲ್​ ವರ್ಮಾ ಬರೆದುಕೊಂಡಿದ್ದಾರೆ.

ಈ ಮಾತುಗಳಿಗೆ ಪ್ರಶಾಂತ್​ ನೀಲ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಷ್ಟೇ. ಮುಂದಿನ ಸಿನಿಮಾ ಕೆಲಸಗಳತ್ತ ಅವರು ಗಮನ ಹರಿಸಿದ್ದಾರೆ. ಪ್ರಭಾಸ್ ನಟಿಸಲಿರುವ ‘ಸಲಾರ್​’ ಸಿನಿಮಾಗೆ ಪ್ರಶಾಂತ್​ ನೀಲ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಹಾಗೆಯೇ ‘ಕೆಜಿಎಫ್​: ಚಾಪ್ಟರ್​ 3’ ಯಾವಾಗ ಬರಲಿದೆ ಎಂದು ಕೂಡ ಅಭಿಮಾನಿಗಳು ಕಾಯುತ್ತಿದ್ದಾರೆ. ‘ಸಲಾರ್​’ ಬಳಿಕ ಪ್ರಶಾಂತ್​ ನೀಲ್​ ಯಾವ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಸೃಷ್ಟಿ ಆಗಿದೆ. ಯಶ್​ ಅವರ ಮುಂದಿನ ಸಿನಿಮಾ ಬಗ್ಗೆಯೂ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada