‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

Kamaal K Khan | KGF Chapter 2: ‘ಕೆಜಿಎಫ್​ 2’ ಚಿತ್ರ ಮಾಡಿದ್ದಕ್ಕೆ ನಿಮಗೆ ನಾಚಿಕೆ ಆಗಬೇಕು’ ಎಂದು ಕಮಾಲ್​ ಆರ್​. ಖಾನ್​ ಬರೆದುಕೊಂಡಿದ್ದಾರೆ. ಇದು ಯಶ್​ ಫ್ಯಾನ್ಸ್​ ಕೋಪಕ್ಕೆ ಕಾರಣ ಆಗಿದೆ.

‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​
ಕಮಾಲ್ ಆರ್. ಖಾನ್, ಯಶ್​
Follow us
| Updated By: ಮದನ್​ ಕುಮಾರ್​

Updated on: Apr 16, 2022 | 8:25 AM

ನಟ ಯಶ್​ (Yash) ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಆರಂಭದಲ್ಲಿ ಕರುನಾಡಿಗೆ ಮಾತ್ರ ಸೀಮಿತವಾಗಿದ್ದ ಅವರು ಈಗ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಮಾಡಿರುವ ಸಾಧನೆಗೆ ಇಡೀ ದೇಶವೇ ಭೇಷ್​ ಎನ್ನುತ್ತಿದೆ. ಎಲ್ಲರೂ ಉತ್ತಮ ರೇಟಿಂಗ್​ ನೀಡಿದ್ದಾರೆ. ಸಿನಿಮಾ ಕುರಿತು ಪಾಸಿಟಿವ್​ ವಿಮರ್ಶೆಗಳು ಪ್ರಕಟ ಆಗಿವೆ. ಈ ನಡುವೆ ನಟ, ಸ್ವಯಂ ಘೋಷಿತ ವಿಮರ್ಶಕ ಕಮಾಲ್​ ಆರ್​. ಖಾನ್​ (Kamaal K Khan) ಅವರು ‘ಕೆಜಿಎಫ್​ 2’ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದಾರೆ. ಅಲ್ಲದೇ ಯಶ್​ ಕುರಿತಾಗಿ ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾವನ್ನು 3 ಗಂಟೆಗಳ ಟಾರ್ಚರ್​ ಎಂದು ಅವರು ಹೀಯಾಳಿಸಿದ್ದಾರೆ. ಕಮಾಲ್​ ಆರ್​. ಖಾನ್​ ಟ್ವಿಟರ್​​ನಲ್ಲಿ ಈ ರೀತಿ ಪೋಸ್ಟ್​ ಮಾಡಿರುವುದಕ್ಕೆ ಯಶ್​ ಫ್ಯಾನ್ಸ್​ ‘ಗರಂ’ ಆಗಿದ್ದಾರೆ. ಕೆಟ್ಟದಾಗಿ ವಿಮರ್ಶೆ ಮಾಡಿರುವ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಮಾಲ್​ ಆರ್​. ಖಾನ್​ ಈ ರೀತಿ ನೆಗೆಟಿವ್​ ವಿಮರ್ಶೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಅನೇಕ ಸೆಲೆಬ್ರಿಟಿಗಳ ಕುರಿತು ಕೆಟ್ಟ ಮಾತುಗಳನ್ನು ಆಡಿ ಅವರು ಬಹುತೇಕರಿಂದ ಛೀ ಥೂ ಎನಿಸಿಕೊಂಡಿದ್ದಾಗಿದೆ. ಈಗ ಯಶ್​ ತಂಟೆಗೆ ಬಂದಿದ್ದಾರೆ. ಅಷ್ಟಕ್ಕೂ ಕಮಾಲ್​ ಆರ್​. ಖಾನ್​ ಮಾಡಿದ ಟ್ವೀಟ್​ ಏನು? ಇಲ್ಲಿದೆ ನೋಡಿ..

‘ಕೆಜಿಎಫ್​ 2 ಸಿನಿಮಾ ಮೂರು ಗಂಟೆಗಳ ಟಾಪ್​ ಕ್ಲಾಸ್​ ಟಾರ್ಚರ್​. ಫಿಲ್ಮ್​ ಮೇಕಿಂಗ್​ ಹೆಸರಿನಲ್ಲಿ ಹಣ ಮತ್ತು ಸಮಯ ವೇಸ್ಟ್​ ಆಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದರೆ ಬಾಲಿವುಡ್​ ಅಂತ್ಯವಾದಂತೆ. ಯಾಕೆಂದರೆ, ಬಾಲಿವುಡ್​ನವರು ಈ ರೀತಿ ಸಿನಿಮಾ ಮಾಡಿದರೆ ಖಂಡಿತಾ ಡಿಸಾಸ್ಟರ್​ ಆಗಲಿದೆ. ರೇಟಿಂಗ್​ ಆ ಥೂ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಕೆಆರ್​ಕೆ ವ್ಯಂಗ್ಯ ಇಷ್ಟಕ್ಕೇ ನಿಂತಿಲ್ಲ. ‘ಯಶ್​ ಬ್ರೋ.. ನೀವು ಕನ್ನಡಕ ತೆಗೆಯದೆಯೂ ಒಂದು ಗಂಟೆಯಲ್ಲಿ ರಷ್ಯಾವನ್ನು ಸೋಲಿಸಬಹುದು. ದಯವಿಟ್ಟು ಆ ರೀತಿ ಮಾಡಿ ಲಕ್ಷಾಂತರ ಜನರನ್ನು ಕಾಪಾಡಿ. ‘ಕೆಜಿಎಫ್​ 2’ ಚಿತ್ರ ಮಾಡಿದ್ದಕ್ಕೆ ನಿಮಗೆ ನಾಚಿಕೆ ಆಗಬೇಕು. ಆ ಥೂ ಎಂಬುದೇ ನನ್ನ ರೇಟಿಂಗ್​’ ಎಂದು ಕಮಾಲ್​ ಆರ್​. ಖಾನ್​ ಪೋಸ್ಟ್​ ಮಾಡಿದ್ದಾರೆ.

ಉತ್ತರ ಭಾರತದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಸೂಪರ್​ ಕಲೆಕ್ಷನ್​ ಮಾಡುತ್ತಿದೆ. ಜನರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಈ ನಡುವೆ ಕೆಟ್ಟ ವಿಮರ್ಶೆ ಮಾಡಿದ ಕಮಾಲ್​ ಆರ್​. ಖಾನ್​ನನ್ನು ಯಶ್​ ಫ್ಯಾನ್ಸ್​ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಆರ್​ಆರ್​ಆರ್​’ ಚಿತ್ರ ತೆರೆಕಂಡಾಗಲೂ ಕಮಾಲ್​ ಆರ್​. ಖಾನ್​ ಕುಹಕವಾಡಿದ್ದರು. ಚಿತ್ರತಂಡ ನೀಡುತ್ತಿರುವ ಬಾಕ್ಸ್​ ಆಫೀಸ್​ ಲೆಕ್ಕಾಚಾರ ಸುಳ್ಳು ಎಂದು ಅವರು ವಾದ ಮಾಡಿದ್ದರು. ಈಗ ಅವರು ಯಶ್​ ತಂಟೆಗೆ ಬಂದು ವಿವಾದ ಹುಟ್ಟುಹಾಕಿದ್ದಾರೆ.

ಕಮಾಲ್​ ಆರ್​. ಖಾನ್​ ನಟಿಸಿ, ನಿರ್ಮಾಣ ಮಾಡಿದ್ದ ‘ದೇಶದ್ರೋಹಿ’ ಸಿನಿಮಾ 2008ರಲ್ಲಿ ತೆರೆಕಂಡಿತ್ತು. ಅದನ್ನು ನೋಡಿದ ವಿಮರ್ಶಕರು ‘ಹಿಂದಿ ಚಿತ್ರರಂಗದ ಅತಿ ಕೆಟ್ಟ ಸಿನಿಮಾ’ ಎಂದು ವಿಮರ್ಶೆ ಮಾಡಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ಕೇವಲ 80 ಲಕ್ಷ ರೂಪಾಯಿ ಕಲೆಕ್ಷನ್​ ಮಾಡಿ ಆ ಸಿನಿಮಾ ನೆಲಕಚ್ಚಿತ್ತು. ಈಗ ಅದೇ ಸಿನಿಮಾವನ್ನು ಮತ್ತೆ ನೆನಪಿಸಿ ಜನರು ಕಮೆಂಟ್​ಗಳ ಮೂಲಕ ತಿರುಗೇಟು ನೀಡುತ್ತಿದ್ದಾರೆ.

ಇದನ್ನೂ ಓದಿ:

KGF Chapter 2 Collection: ಫಸ್ಟ್​ ಡೇ 134.5 ಕೋಟಿ ರೂ. ಕಲೆಕ್ಷನ್​ ಮಾಡಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಗಳಿಸಿದ್ದು ಇನ್ನೂ ಹೆಚ್ಚು

‘ಎಲ್ಲ ಶೋ ನೋಡ್ತೀನಿ, ಥಿಯೇಟರ್​ನಲ್ಲೇ ಮಲಗ್ತೀನಿ’: ಅಮೆರಿಕದಲ್ಲಿ ‘ಕೆಜಿಎಫ್​ 2’ ಪ್ರೇಕ್ಷಕರ ಪ್ರತಿಕ್ರಿಯೆ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ