AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2 Collection: ಫಸ್ಟ್​ ಡೇ 134.5 ಕೋಟಿ ರೂ. ಕಲೆಕ್ಷನ್​ ಮಾಡಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಗಳಿಸಿದ್ದು ಇನ್ನೂ ಹೆಚ್ಚು

KGF chapter 2 first day Box Office: ಭಾರತದ ಬಾಕ್ಸ್​ ಆಫೀಸ್​ನಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಮೊದಲ ದಿನ 134.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇದರಲ್ಲಿ ಹಿಂದಿ ಬಾಕ್ಸ್​ ಆಫೀಸ್​ ಗಳಿಕೆ 53.95 ಕೋಟಿ ರೂಪಾಯಿ.

KGF Chapter 2 Collection: ಫಸ್ಟ್​ ಡೇ 134.5 ಕೋಟಿ ರೂ. ಕಲೆಕ್ಷನ್​ ಮಾಡಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಗಳಿಸಿದ್ದು ಇನ್ನೂ ಹೆಚ್ಚು
ಕೆಜಿಎಫ್​: ಚಾಪ್ಟರ್​ 2
TV9 Web
| Edited By: |

Updated on:Apr 15, 2022 | 2:31 PM

Share

ಗಲ್ಲಾಪೆಟ್ಟಿಗೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ (KGF chapter 2) ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಮೊದಲ ದಿನದ ಕಲೆಕ್ಷನ್​ ರಿಪೋರ್ಟ್​ ಹೊರಬಿದ್ದಿದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಫಸ್ಟ್​ ಡೇ ಗಳಿಸಿರುವುದು ಬರೋಬ್ಬರಿ 134.5 ಕೋಟಿ ರೂಪಾಯಿ. ಈ ಮೂಲಕ ಯಶ್​ ಗೆದ್ದು ಬೀಗಿದ್ದಾರೆ. ಪ್ರಶಾಂತ್​ ನೀಲ್​ ಮತ್ತು ಅವರ ತಂಡದ ಪರಿಶ್ರಮಕ್ಕೆ ಸೂಕ್ತ ಬೆಲೆ ಸಿಕ್ಕಿದೆ. ವಿಶ್ವಾದ್ಯಂತ ಎಷ್ಟು ಕಲೆಕ್ಷನ್​ (KGF chapter 2 Box Office Collection) ಆಗಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆ ಲೆಕ್ಕವನ್ನೂ ಸೇರಿದರೆ ‘ಕೆಜಿಎಫ್​ 2’ ಸಿನಿಮಾದ ಒಟ್ಟು ಗಳಿಕೆ ಇನ್ನಷ್ಟು ಹೆಚ್ಚಲಿದೆ. ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣ ಮಾಡಿದ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಎಲ್ಲ ಕಡೆಗಳಲ್ಲೂ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ದಾಖಲೆ ಬರೆಯಲಿದೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಅದಕ್ಕೆ ತಕ್ಕಂತೆಯೇ ಕಲೆಕ್ಷನ್​ ರಿಪೋರ್ಟ್​ (KGF chapter 2 first day Box Office) ಬಂದಿದೆ.

ಅದ್ದೂರಿ ಮೇಕಿಂಗ್ ಮೂಲಕ ‘ಕೆಜಿಎಫ್​: 2’ ಸಿನಿಮಾ ಗಮನ ಸೆಳೆದಿದೆ. ಮಾಸ್​ ಡೈಲಾಗ್​ಗಳಿಗೆ ಭರಪೂರ ಶಿಳ್ಳೆ ಚೆಪ್ಪಾಳೆ ಸಿಗುತ್ತಿದೆ. ಭರ್ಜರಿ ಆ್ಯಕ್ಷನ್​ ದೃಶ್ಯಗಳನ್ನು ಕಂಡು ಅಭಿಮಾನಿಗಳು ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ತಾಯಿ ಸೆಂಟಿಮೆಂಟ್​ ನೋಡಿ ಫ್ಯಾಮಿಲಿ ಪ್ರೇಕ್ಷಕರು ಮನ ಸೋತಿದ್ದಾರೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಕೂಡ ಈ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಈ ಎಲ್ಲ ಕಾರಣಗಳಿಂದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಧೂಳೆಬ್ಬಿಸುತ್ತಿದೆ.

ಗುರುವಾರ ಅಂಬೇಡ್ಕರ್​ ಜಯಂತಿ ಮತ್ತು ಮಹಾವೀರ ಜಯಂತಿ ಆದ್ದರಿಂದ ಈ ರಜಾ ದಿನದ ಲಾಭವನ್ನು ‘ಕೆಜಿಎಫ್​ 2’ ಸಿನಿಮಾ ತಂಡ ಪಡೆದುಕೊಂಡಿದೆ. ಶುಕ್ರವಾರ ಗುಡ್​ ಫ್ರೈಡೇ ಇರುವುದರಿಂದ ಜನರು ಮುಗಿಬಿದ್ದು ಈ ಸಿನಿಮಾ ನೋಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ವೀಕೆಂಡ್​ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡಲಿದ್ದಾರೆ. ಪರಿಣಾಮವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಅನೇಕ ದಾಖಲೆಗಳನ್ನು ಮಾಡಲಿದೆ.

ಯಶ್, ಪ್ರಶಾಂತ್​ ನೀಲ್ ಹಾಗೂ ಅವರ ತಂಡದವರು ಉತ್ತರ ಭಾರತದಲ್ಲಿ ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದ್ದರು. ದೆಹಲಿ, ಮುಂಬೈ ಮೊದಲಾದ ಕಡೆಗಳಲ್ಲಿ ತೆರಳಿ ನಿರಂತರವಾಗಿ ಪ್ರಮೋಷನ್ ಮಾಡಿದ್ದರು. ಇದು ಫಲ ನೀಡಿದೆ. ಉತ್ತರ ಭಾರತದಲ್ಲಿ ಮುಂಜಾನೆಯಿಂದಲೇ ಸಿನಿಮಾ ಪ್ರದರ್ಶನ ಕಂಡಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ, ಬಾಕ್ಸ್ ಆಫೀಸ್​ ಗಳಿಕೆ ಹೆಚ್ಚಿದೆ. ಮೊದಲ ದಿನ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 53.95 ಕೋಟಿ ರೂಪಾಯಿ ಗಳಿಕೆ ಆಗಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ.

ಇದನ್ನೂ ಓದಿ:

‘ಕೆಜಿಎಫ್​ 2’ ಎದುರು ‘ಬೀಸ್ಟ್​’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್​ ಮಗನ ಎಂಟ್ರಿ ಬಗ್ಗೆ ಟಾಕ್​ ಶುರು

ಐಎಂಡಿಬಿ, ಬುಕ್​ ಮೈ ಶೋ ರೇಟಿಂಗ್​ನಲ್ಲಿ ‘ಕೆಜಿಎಫ್​ 2’ನದ್ದೇ ಪಾರುಪತ್ಯ; ಈ ಚಿತ್ರವನ್ನು ತಡೆಯೋರೆ ಇಲ್ಲ

Published On - 1:58 pm, Fri, 15 April 22

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ