ಅಮೆರಿಕದಲ್ಲಿ ಶೂಟ್ ಆಗಲಿದೆ ‘ಕೆಜಿಎಫ್ ಚಾಪ್ಟರ್ 3’?; ಇಲ್ಲಿದೆ ಹಲವು ಅಚ್ಚರಿಯ ವಿಚಾರಗಳು
ಏಪ್ರಿಲ್ 14ರಂದು ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿತ್ತು. ಈ ಸಿನಿಮಾದ ಮೂರನೇ ಪಾರ್ಟ್ ಸಿದ್ಧಗೊಳ್ಳಲಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ (KGF Chapter 2) ಎಂಡ್ ಕ್ರೆಡಿಟ್ಸ್ ತೋರಿಸಿದ ಬಳಿಕ ಹಲವರು ಚಿತ್ರಮಂದಿರದಿಂದ ಹೊರ ನಡೆದಿದ್ದರು. ಆದರೆ, ಎಂಡ್ ಕ್ರೆಡಿಟ್ಸ್ ಬಳಿಕ ‘ಕೆಜಿಎಫ್ 3’ (KGF Chapter 3)ಚಿತ್ರ ಬರುವ ಬಗ್ಗೆ ಸೂಚನೆ ಕೊಡಲಾಗಿತ್ತು. ರಾಕಿ (ಯಶ್) ವಿದೇಶದಲ್ಲಿ ಸಾಕಷ್ಟು ಕ್ರೈಮ್ ಮಾಡಿರುತ್ತಾನೆ. ಆ ದಾಖಲೆಗಳನ್ನು ಅಲ್ಲಿನ ಅಧಿಕಾರಿಗಳು ಪ್ರಧಾನಿ ರಮಿಕಾ ಸೇನ್ (ರವೀನಾ ಟಂಡನ್) ಮುಂದೆ ಇಡುತ್ತಾರೆ. ಆಗ ಮೂರನೇ ಚಾಪ್ಟರ್ ತೆರೆದುಕೊಳ್ಳುತ್ತದೆ. ಮೂಲಗಳ ಪ್ರಕಾರ ಟ್ರಯಾಲಜಿ ರೀತಿಯಲ್ಲಿ ‘ಕೆಜಿಎಫ್’ ಮೂಡಿ ಬರುತ್ತಿದ್ದು, ‘ಕೆಜಿಎಫ್ 3’ ಈ ಸರಣಿಯ ಕೊನೆಯ ಸಿನಿಮಾ ಆಗಿರಲಿದೆ.
‘ಕೆಜಿಎಫ್’ ಎರಡು ಪಾರ್ಟ್ಗಳಲ್ಲಿ ಬರಲಿದೆ ಎನ್ನುವ ಮಾಹಿತಿಯನ್ನು ಚಿತ್ರತಂಡದವರು ಆರಂಭದಲ್ಲೇ ಹಂಚಿಕೊಂಡಿದ್ದರು. ಆದರೆ,
ಮೂಲಗಳ ಪ್ರಕಾರ, ಅಮೆರಿಕ, ದಕ್ಷಿಣ ಆಫ್ರಿಕಾ ಸೇರಿ ಹಲವು ದೇಶಗಳಲ್ಲಿ ‘ಕೆಜಿಎಫ್ 3’ ಚಿತ್ರದ ಶೂಟಿಂಗ್ ನಡೆಯಲಿದೆ. ಕಥೆ ರೆಟ್ರೋ ಶೈಲಿಯಲ್ಲೇ ಸಾಗಲಿದ್ದು, ಇದಕ್ಕಾಗಿ ಹೆಚ್ಚಿನ ಕೆಲಸದ ಅಗತ್ಯವಿದೆ. ಹೀಗಾಗಿ, ಚಿತ್ರದ ಬಜೆಟ್ ಹಿರಿದಾಗಲಿದೆ. ಇದಕ್ಕಾಗಿ ಚಿತ್ರತಂಡ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಅಂದಹಾಗೆ, ಈ ಸಿನಿಮಾ ರಾಕಿ ಈ ಮೊದಲು ಮಾಡಿದ ಕ್ರೈಮ್ಗಳ ಬಗ್ಗೆ ಇರಲಿದೆ.
‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಈ ಸಿನಿಮಾದ ಗಳಿಕೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ 130 ಕೋಟಿ ರೂಪಾಯಿ ದಾಟಿದೆ. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಚಿತ್ರ 53.95 ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ನಿಂದ ‘ಚಾಪ್ಟರ್ 3’ ಮಾಡಲು ಹೊರಟಿರುವ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ಬಂದಿದೆ.
‘KGF2’ DAY 1: ₹ 134.50 CR… #KGF2 has smashed ALL RECORDS on Day 1… Grosses ₹ 134.50 cr Gross BOC [#India biz; ALL versions]… OFFICIAL POSTER ANNOUNCEMENT… pic.twitter.com/ZB0NVJMKBR
— taran adarsh (@taran_adarsh) April 15, 2022
ಇದನ್ನೂ ಓದಿ: ಬಾಲಿವುಡ್ ಇತಿಹಾಸದಲ್ಲೇ ದಾಖಲೆ ಬರೆದ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್
ಬಾಲಿವುಡ್ ಒಂದರಲ್ಲೇ 300 ಕೋಟಿ ರೂಪಾಯಿ ಬಾಚಲಿದೆ ‘ಕೆಜಿಎಫ್ 2’? ಹೌದೆನ್ನುತ್ತಿದ್ದಾರೆ ಪಂಡಿತರು
Published On - 4:39 pm, Fri, 15 April 22