‘ಕೆಜಿಎಫ್ 2’ ಅಬ್ಬರದಿಂದ ಮಲ್ಟಿಪ್ಲೆಕ್ಸ್ಗಳಲ್ಲಿ ‘ಬೀಸ್ಟ್’ಗೆ ಸಿಗಲಿಲ್ಲ ಸ್ಕ್ರೀನ್; ನಿರ್ಮಾಪಕನ ಅಸಮಾಧಾನ?
ಮಲ್ಟಿಪ್ಲೆಕ್ಸ್ಗಳಲ್ಲಿ ‘ಕೆಜಿಎಫ್ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಇದರಿಂದ ‘ಬೀಸ್ಟ್’ ಚಿತ್ರಕ್ಕೆ ಐಮ್ಯಾಕ್ಸ್ ಪರದೆ ಸಿಕ್ಕಿಲ್ಲ ಎಂದು ವರದಿ ಆಗಿದೆ.
‘ಕೆಜಿಎಫ್’ ಚಿತ್ರದ (KGF: Chapter 2) ಎದುರು ‘ಝೀರೋ’ ಚಿತ್ರ ಬಂದಾಗ ಕನ್ನಡದ ಚಿತ್ರವೇ ಗೆದ್ದು ಬೀಗಿತ್ತು. ಈಬಾರಿ, ‘ಕೆಜಿಎಫ್ 2’ ಚಿತ್ರದ ಎದುರು ಬೇರೆ ಭಾಷೆಯ ಚಿತ್ರಗಳು ತೆರೆಗೆ ಬರುವಾಗ ಕೆಲವರು ಬುದ್ಧಿವಾದ ಹೇಳಿದ್ದರು. ಹಿಂದಿಯ ‘ಜೆರ್ಸಿ’ ತಂಡದವರು (Jersey Movie) ಈ ಕಿವಿಮಾತನ್ನು ಸ್ವೀಕರಿಸಿ, ಸಿನಿಮಾ ರಿಲೀಸ್ ದಿನಾಂಕವನ್ನು ಒಂದು ವಾರ ಮುಂದೂಡಿದರು. ಆದರೆ, ‘ಬೀಸ್ಟ್’ ಚಿತ್ರದವರು (Beast Movie) ‘ಕೆಜಿಎಫ್ 2’ ಜತೆ ಸ್ಪರ್ಧೆಗೆ ಇಳಿದರು. ಈಗ ಚಿತ್ರಮಂದಿರ ಸಿಗದೆ ಒದ್ದಾಡುತ್ತಿದ್ದಾರೆ.
ಮಲ್ಟಿಪ್ಲೆಕ್ಸ್ನ ಐಮ್ಯಾಕ್ಸ್ ಪರದೆಗಳಲ್ಲೂ ‘ಕೆಜಿಎಫ್ 2’ ಪ್ರದರ್ಶನ ಕಾಣುತ್ತಿದೆ. ಈ ಪರದೆ ಸಾಮಾನ್ಯ ಥಿಯೇಟರ್ ಪರದೆಗಿಂತ ದೊಡ್ಡದಾಗಿರುತ್ತದೆ. ಪ್ರಾಜೆಕ್ಟರ್ ಗುಣಮಟ್ಟ ಹೆಚ್ಚಿರುತ್ತದೆ. ಸೌಂಡ್ ಗುಣಮಟ್ಟ ಕೂಡ ಹೆಚ್ಚು ಉತ್ತಮವಾಗಿರುತ್ತದೆ. ಇದರಿಂದ ಸಿನಿಮಾ ಎಫೆಕ್ಟ್ ಹೆಚ್ಚಿರುತ್ತದೆ. ಇನ್ನು, ಐಮ್ಯಾಕ್ಸ್ ಸಿನಿಮಾ ಫಾರ್ಮ್ಯಾಟ್ ಕೂಡ ಬೇರೆಯದೇ ಇರುತ್ತದೆ. ಈ ಪರದೆಯನ್ನು ಪಡೆಯಲು ‘ಬೀಸ್ಟ್’ ವಿಫಲವಾಗಿದೆ.
ಐಮ್ಯಾಕ್ಸ್ ಫಾರ್ಮ್ಯಾಟ್ ಚಿತ್ರಗಳು ಇಲ್ಲದಾಗ ಸಾಮಾನ್ಯ ಫಾರ್ಮ್ಯಾಟ್ ಚಿತ್ರವನ್ನೇ ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ‘ಬೀಸ್ಟ್’ ಐಮ್ಯಾಕ್ಸ್ ಸಿನಿಮಾ ಅಲ್ಲ. ಆದಾಗ್ಯೂ, ಈ ಐಮ್ಯಾಕ್ಸ್ ಪರದೆ ಪಡೆದು ಸಿನಿಮಾ ಪ್ರದರ್ಶಿಸಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ, ‘ಕೆಜಿಎಫ್ 2’ ಐಮ್ಯಾಕ್ಸ್ ಅವತರಣಿಕೆಯಲ್ಲೂ ರಿಲೀಸ್ ಆಗಿದೆ. ಈ ಚಿತ್ರ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಕಾರಣಕ್ಕೆ ಮಲ್ಟಿಪ್ಲೆಕ್ಸ್ಗಳು ‘ಕೆಜಿಎಫ್ 2’ಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ‘ಬೀಸ್ಟ್’ ಚಿತ್ರಕ್ಕೆ ಐಮ್ಯಾಕ್ಸ್ ಪರದೆ ಸಿಕ್ಕಿಲ್ಲ ಎಂದು ವರದಿ ಆಗಿದೆ. ಈ ವಿಚಾರ ‘ಬೀಸ್ಟ್’ ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಕನಿಷ್ಠ ಒಂದು ಸ್ಕ್ರೀನ್ ಆದರೂ ಬೀಸ್ಟ್ಗೆ ನೀಡಬೇಕಿತ್ತು ಎನ್ನುವ ಅಭಿಪ್ರಾಯ ನಿರ್ಮಾಪಕರ ಕಡೆಯಿಂದ ಬಂದಿದೆ ಎನ್ನಲಾಗಿದೆ.
‘ಕೆಜಿಎಫ್ 2’ ಕನ್ನಡದ ಮೊದಲ ಸಂಪೂರ್ಣ ಐಮ್ಯಾಕ್ಸ್ ಸಿನಿಮಾ. ಈ ಪರದೆಗಳ ಟಿಕೆಟ್ ದರ ಸಾಮಾನ್ಯ ಚಿತ್ರಮಂದಿರಗಳ ಟಿಕೆಟ್ ದರಕ್ಕಿಂತ ಹೆಚ್ಚಿರುತ್ತದೆ. ಸದ್ಯ, ಬೆಂಗಳೂರಿನಲ್ಲಿ ‘ಕೆಜಿಎಫ್ 2’ ಐಮ್ಯಾಕ್ಸ್ ಟಿಕೆಟ್ ದರ 850 ರೂಪಾಯಿ ಆಸುಪಾಸಿನಲ್ಲಿದೆ.
ತಮಿಳುನಾಡಿನ ಹಲವು ಥಿಯೇಟರ್ಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ. ಕೆಲವು ಕಡೆಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಚಿತ್ರಮಂದಿರ ಫುಲ್ ಆದ ಕಾರಣಕ್ಕೆ ಖಾಲಿ ಇರುವ ಜಾಗದಲ್ಲಿ ಹೆಚ್ಚುವರಿ ಚೇರ್ಗಳನ್ನು ಹಾಕಿ ಸಿನಿಮಾ ತೋರಿಸಲಾಗಿದೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಇನ್ನೂ ಕೆಲವು ಕಡೆಗಳಲ್ಲಿ ಫ್ಯಾನ್ಸ್ ಥಿಯೇಟರ್ನ ನೆಲದ ಮೇಲೆ ಕೂತು ಸಿನಿಮಾ ನೋಡಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ನಿಂತು ‘ಕೆಜಿಎಫ್ 2’ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಶೂಟ್ ಆಗಲಿದೆ ‘ಕೆಜಿಎಫ್ ಚಾಪ್ಟರ್ 3’?; ಇಲ್ಲಿದೆ ಹಲವು ಅಚ್ಚರಿಯ ವಿಚಾರಗಳು
ಬಾಲಿವುಡ್ ಇತಿಹಾಸದಲ್ಲೇ ದಾಖಲೆ ಬರೆದ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್