ಬಾಲಿವುಡ್ ಇತಿಹಾಸದಲ್ಲೇ ದಾಖಲೆ ಬರೆದ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್
ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಬಾಲಿವುಡ್ ಅಂಗಳದಲ್ಲಿ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದ್ದರು. ಇದು ಫಲ ನೀಡಿದೆ.
‘ಕೆಜಿಎಫ್ 2’ ಸಿನಿಮಾ (KGF Chapter 2) ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಮೊದಲ ದಿನ ಈ ಚಿತ್ರ ಯಾರೂ ಊಹಿಸದಷ್ಟು ಗಳಿಕೆ ಮಾಡಿದೆ. ಯಶ್ (Yash) ಅಬ್ಬರಕ್ಕೆ ಅಲ್ಲಿನ ಬಾಕ್ಸ್ ಆಫೀಸ್ (KGF Chapter 2 Box Office Collection) ಉಡೀಸ್ ಆಗಿದೆ. ಈ ಚಿತ್ರ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಈ ಮೂಲಕ ಬಾಲಿವುಡ್ನಲ್ಲೇ ಸಿದ್ಧಗೊಂಡ ‘ವಾರ್’ (51.60) ಹಾಗೂ ‘ಥಗ್ಸ್ ಆಫ್ ಹಿಂದೂಸ್ತಾನ್’ (50.75) ಚಿತ್ರಗಳ ಮೊದಲ ದಿನದ ಕಲೆಕ್ಷನ್ಅನ್ನು ಹಿಂದಿಕ್ಕಿದೆ. ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಖ್ಯಾತಿ ‘ಕೆಜಿಎಫ್ 2’ಗೆ ಸಿಕ್ಕಿದೆ.
ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರು ಬಾಲಿವುಡ್ ಅಂಗಳದಲ್ಲಿ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಿದ್ದರು. ದೆಹಲಿ, ಮುಂಬೈ ಮೊದಲಾದ ಕಡೆಗಳಲ್ಲಿ ತೆರಳಿ ನಿರಂತರವಾಗಿ ಪ್ರಮೋಷನ್ ಮಾಡಿದ್ದರು. ಇದು ಫಲ ನೀಡಿದೆ. ಉತ್ತರ ಭಾರತದಲ್ಲಿ ಮುಂಜಾನೆಯಿಂದಲೇ ಸಿನಿಮಾ ಪ್ರದರ್ಶನ ಕಂಡಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ, ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಿದೆ.
ಬಾಕ್ಸ್ ಆಫೀಸ್ ಅನಲಿಸ್ಟ್ ತರಣ್ ಆದರ್ಶ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಕೆಜಿಎಫ್ 2’ ಇತಿಹಾಸ ಸೃಷ್ಟಿಸಿದೆ. ‘ಓಪನಿಂಗ್ ಡೇ ರೆಕಾರ್ಡ್ಗಳನ್ನು ಸಿನಿಮಾ ಬ್ರೇಕ್ ಮಾಡಿದೆ. ಹಿಂದಿ ವರ್ಷನ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ ಸಿನಿಮಾ’ ಎಂದು ಬರೆದುಕೊಂಡಿದ್ದಾರೆ.
‘ಕೆಜಿಎಫ್ ಚಾಪ್ಟರ್ 1’ ಸಿನಿಮಾ ಹಿಂದಿ ಚಿತ್ರರಂಗದಿಂದ ಒಟ್ಟೂ ಗಳಿಸಿದ್ದು 44 ಕೋಟಿ ರೂಪಾಯಿ. ಈ ಕಲೆಕ್ಷನ್ಅನ್ನು ಎರಡನೇ ಚಾಪ್ಟರ್ ಒಂದೇ ದಿನದಲ್ಲಿ ಬ್ರೇಕ್ ಮಾಡಿದೆ. ಈ ಮೊದಲು ತೆರೆಗೆ ಬಂದಿದ್ದ ‘ಪುಷ್ಪ’, ‘ಆರ್ಆರ್ಆರ್’ ಚಿತ್ರಗಳು ಕೂಡ ಬಾಲಿವುಡ್ನಲ್ಲಿ ಈ ಮಟ್ಟಿನ ಕಲೆಕ್ಷನ್ ಮಾಡಿರಲಿಲ್ಲ. ಶುಕ್ರವಾರ (ಏಪ್ರಿಲ್ 15) ಸೇರಿ ಭಾನುವಾರದವರೆಗೆ ನಿರಂತರವಾಗಿ ರಜೆ ಇರುವುದರಿಂದ ಬಾಕ್ಸ್ ಆಫೀಸ್ ಗಳಿಕೆ ಹೆಚ್ಚಲಿದೆ.
ಬಾಲಿವುಡ್ನ ಸ್ಟಾರ್ ಕಲಾವಿದರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಕಾರಣಕ್ಕೂ ಸಿನಿಮಾಗೆ ಉತ್ತರ ಭಾರದಲ್ಲಿ ಬೇಡಿಕೆ ಹೆಚ್ಚಿದೆ. ಮಾಸ್ ಡೈಲಾಗ್ಗಳು ಹೆಚ್ಚಿರುವುದರಿಂದ ಬಾಲಿವುಡ್ ಮಂದಿ ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: KGF Chapter 2 Release Highlights: ‘ಕೆಜಿಎಫ್ ಚಾಪ್ಟರ್ 2’ಗೆ ಜನರಿಂದ ಉಘೇಉಘೇ; ಎಲ್ಲೆಡೆ ಭರ್ಜರಿ ಪ್ರದರ್ಶನ
Published On - 1:07 pm, Fri, 15 April 22