AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲತಾ ಮಂಗೇಶ್ಕರ್​ ಅವರನ್ನು ಕಳೆದುಕೊಂಡ ಆಶಾ ಭೋಸ್ಲೆ ಕುಟುಂಬಕ್ಕೆ ಮತ್ತೊಂದು ಆಘಾತ

ಆನಂದ್ ಅವರನ್ನು ಈ ಮೊದಲು ಐಸಿಯುನಲ್ಲಿ ಇಡಲಾಗಿತ್ತು. ಈಗ ಅವರು ಕೊಂಚ ಚೇತರಿಕೆ ಕಂಡಿದ್ದಾರೆ ಎನ್ನಲಾಗಿದೆ. ಆದರೆ, ಸಂಪೂರ್ಣವಾಗಿ ಅವರು ಗುಣಮುಖರಾಗಿಲ್ಲ.

ಲತಾ ಮಂಗೇಶ್ಕರ್​ ಅವರನ್ನು ಕಳೆದುಕೊಂಡ ಆಶಾ ಭೋಸ್ಲೆ ಕುಟುಂಬಕ್ಕೆ ಮತ್ತೊಂದು ಆಘಾತ
ಆನಂದ್-ಆಶಾ
TV9 Web
| Edited By: |

Updated on:Apr 15, 2022 | 3:31 PM

Share

ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಕಳೆದುಕೊಂಡ ನಂತರ ಅವರ ಸಹೋದರಿ ಆಶಾ ಭೋಸ್ಲೆ (Asha Bhosle) ಕುಟುಂಬ ದುಃಖದಲ್ಲೇ ಇದೆ. ಈಗ ಈ ಕುಟಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಆಶಾ ಅವರ ಮಗ ಆನಂದ್ ಭೋಸ್ಲೆ (Anand Bhosle) ಅವರು ದುಬೈನಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಏಕಾಏಕಿ ಅವರು ನೆಲಕ್ಕೆ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ನೆಲದಮೇಲೆ ಬಿದ್ದಿದ್ದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅವರ ಕುಟುಂದವರು ಹಾಗೂ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಕೆಲ ದಿನಗಳ ಹಿಂದೆ ಈ ಘಟನೆ ನಡೆದಿರುವುದಾಗಿ ಇಟೈಮ್ಸ್ ವರದಿ ಮಾಡಿದೆ. ಆನಂದ್ ಅವರನ್ನು ಈ ಮೊದಲು ಐಸಿಯುನಲ್ಲಿ ಇಡಲಾಗಿತ್ತು. ಈಗ ಅವರು ಕೊಂಚ ಚೇತರಿಕೆ ಕಂಡಿದ್ದಾರೆ ಎನ್ನಲಾಗಿದೆ. ಆದರೆ, ಸಂಪೂರ್ಣವಾಗಿ ಅವರು ಗುಣಮುಖರಾಗಿಲ್ಲ. ಇದು ಆಶಾ ಭೋಸ್ಲೆಅವರನ್ನು ಮತ್ತಷ್ಟು ದುಃಖಕ್ಕೆ ತಳ್ಳಿದೆ. ಆಶಾ ಅವರು ಆನಂದ್ ಅವರ ಆರೋಗ್ಯದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಆನಂದ್ ಅನಾರೋಗ್ಯಕ್ಕೆ ತುತ್ತಾದಾಗ ಆಶಾ ಕೂಡ ದುಬೈನಲ್ಲೇ ಇದ್ದರು. ಅವರು ಮಗನ ಆರೋಗ್ಯದ ಬಗ್ಗೆ ಈಗ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಸದ್ಯದ ಮಟ್ಟಿಗೆ ಭಾರತಕ್ಕೆ ಮರಳವುದಿಲ್ಲ ಎನ್ನಲಾಗಿದೆ. ಆನಂದ್​ ಅವರಿಗೆ ಕಾಡಿದ ಸಮಸ್ಯೆ ಏನು, ಅವರು ಏಕಾಏಕಿ ಏಕೆ ಬಿದ್ದರು, ಆಸ್ಪತ್ರೆಯಿಂದ ಯಾವಾಗ ಡಿಸ್ಚಾರ್ಜ್​ ಆಗಲಿದ್ದಾರೆ? ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಫೆಬ್ರವರಿಯಲ್ಲಿ ನಿಧನ ಹೊಂದಿದ್ದ ಲತಾ..

ಕೊವಿಡ್​ನಿಂದ ಲತಾ ಅವರು ಫೆಬ್ರವರಿ 6ರಂದು ನಿಧನ ಹೊಂದಿದರು. ಲತಾ ಮಂಗೇಶ್ಕರ್ ಅವರು ಗಳಿಸಿದ ಖ್ಯಾತಿ ಅಂತಿಂಥದಲ್ಲ. ಅವರು ಮಾಡಿರುವ ಸಾಧನೆಗೆ ಸರಿಸಾಟಿಯಾಗಿ ನಿಲ್ಲುವ ಮತ್ತೊಂದು ಗಾಯಕಿ ಇರಲಿಕ್ಕಿಲ್ಲ. 75 ವರ್ಷಗಳ ವೃತ್ತಿ ಜೀವನದಲ್ಲಿ 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇಷ್ಟು ಗೀತೆಗಳನ್ನು ಹಾಡುವುದು ಅಷ್ಟು ಸುಲಭದ ಮಾತಲ್ಲ. ಲತಾ ಕನ್ನಡ, ಹಿಂದಿ ಸೇರಿ ಸುಮಾರು 36 ಭಾಷೆಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಅವರು ಈ ವರ್ಷ ಫೆಬ್ರವರಿ 6ರಂದು ನಿಧನ ಹೊಂದಿದರು. ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ ಲತಾ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಆಗಲಿಲ್ಲ ಎಂಬುದಕ್ಕೆ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್​ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್​ ಆಫ್ ಇಂಡಿಯಾ

Lata Mangeshkar: ಶೀಘ್ರದಲ್ಲೇ ಲತಾ ಮಂಗೇಶ್ಕರ್ ಚಿತ್ರವಿರುವ ಅಂಚಿ ಚೀಟಿ ಬಿಡುಗಡೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

Published On - 3:29 pm, Fri, 15 April 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು