‘ದುಃಖವನ್ನು ಮರೆಮಾಚುವ ನಗು’; ಆಶಾ ಭೋಸ್ಲೆ ಭೇಟಿ ಮಾಡಿ ಸಾಂತ್ವನ ಹೇಳಿದ ಅನುಪಮ್​ ಖೇರ್

‘ದುಃಖವನ್ನು ಮರೆಮಾಚುವ ನಗು’; ಆಶಾ ಭೋಸ್ಲೆ ಭೇಟಿ ಮಾಡಿ ಸಾಂತ್ವನ ಹೇಳಿದ ಅನುಪಮ್​ ಖೇರ್
ಆಶಾ ಬೋಸ್ಲೆ-ಅನುಪಮ್​ ಖೇರ್​

ಕಪ್ಪು-ಬಿಳುಪಿನ ಫೋಟೋವನ್ನು ಅನುಪಮ್​ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಆಶಾ ಅವರ ಕೈ ಹಿಡಿದು ಕುಳಿತಿದ್ದಾರೆ ಅನುಪಮ್​. ಆಶಾ ಅವರು ನಗುತ್ತಿದ್ದಾರೆ. ಆದರೆ, ಈ ನಗುವಿನ ಹಿಂದೆ ಸಾಕಷ್ಟು ನೋವಿದೆ ಎಂಬುದನ್ನು ಅನುಪಮ್​ ಬರೆದುಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Feb 06, 2022 | 4:28 PM

ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್​ (Lata Mangeshkar) ಅವರು ನಿಧನ ಹೊಂದಿರುವ ವಿಚಾರ ಇಡೀ ಭಾರತೀಯ ಸಂಗೀತ ಕ್ಷೇತ್ರ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಕಂಠದಲ್ಲಿ ಮೂಡಿಬಂದ ಸೂಪರ್​ ಹಿಟ್​ ಹಾಡುಗಳಿಗೆ ಲೆಕ್ಕವೇ ಇಲ್ಲ. ಅವರ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಮುಂಬೈನಲ್ಲಿರುವ ಲತಾ ಮಂಗೇಶ್ಕರ್ ನಿವಾಸಕ್ಕೆ ತೆರಳುತ್ತಿರುವ ಸೆಲೆಬ್ರಿಟಿಗಳು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದಾರೆ. ನಟ ಅನುಪಮ್​ ಖೇರ್ (Anupam Kher)​ ಅವರು ಲತಾ ಮಂಗೇಶ್ಕರ್​ ನಿವಾಸಕ್ಕೆ ತೆರಳಿದ್ದಾರೆ. ಅವರ ಸಹೋದರಿ, ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bhosle) ಅವರನ್ನು ಭೇಟಿ ಮಾಡಿದ್ದಾರೆ. ಅವರಿಗೆ ಸಾಂತ್ವನ ಹೇಳುತ್ತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಶನಿವಾರ (ಫೆಬ್ರವರಿ 5) ಲತಾ ಅವರನ್ನು ಆಶಾ ಅವರು ಕೊನೆಯದಾಗಿ ನೋಡಿದ್ದರು. ಈಗ ಲತಾ ಇಲ್ಲದೆ ಆಶಾ ತುಂಬಾನೇ ದುಃಖಪಡುತ್ತಿದ್ದಾರೆ. ಆದರೆ, ಈ ದುಃಖದಲ್ಲೂ ಮುಖದಲ್ಲಿ ಅವರು ನಗು ಇಟ್ಟುಕೊಂಡಿದ್ದಾರೆ.

ಕಪ್ಪು-ಬಿಳುಪಿನ ಫೋಟೋವನ್ನು ಅನುಪಮ್​ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಆಶಾ ಅವರ ಕೈ ಹಿಡಿದು ಕುಳಿತಿದ್ದಾರೆ ಅನುಪಮ್​. ಆಶಾ ಅವರು ನಗುತ್ತಿದ್ದಾರೆ. ಆದರೆ, ಈ ನಗುವಿನ ಹಿಂದೆ ಸಾಕಷ್ಟು ನೋವಿದೆ ಎಂಬುದನ್ನು ಅನುಪಮ್​ ಬರೆದುಕೊಂಡಿದ್ದಾರೆ. ‘ದುಃಖದ ಹೃದಯವನ್ನು ಮರೆಮಾಚುವ ಅತ್ಯಂತ ದೊಡ್ಡ ನಗು ಇದು. ಆಶಾ ಅವರ ದುಃಖದಲ್ಲೂ ನಗುತ್ತಿದ್ದಾರೆ. ಆಶಾಗೆ ಆದ ನೋವಿನ ಪ್ರಮಾಣ ನನಗೆ ಗೊತ್ತಾಗಿದೆ. ನಾವು ನಗು ಮತ್ತು ಅಳುವನ್ನು ಹಂಚಿಕೊಂಡಿದ್ದೇವೆ’ ಎಂದಿದ್ದಾರೆ ಅನುಪಮ್​.

‘ಲತಾ ಮಂಗೇಶ್ಕರ್ ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಅವರ ಚಿತ್ರಣ ಮತ್ತು ಧ್ವನಿ  ಪ್ರತಿಯೊಬ್ಬ ಭಾರತೀಯನ ಹೃದಯ ಮತ್ತು ಆತ್ಮದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮೇಲಿರುವ ದೇವತೆಗಳು  ಲತಾ ದೀದಿಯವರ ಧ್ವನಿಯನ್ನು ಕೇಳಲು ಬಯಸಿರಬಹುದು. ಹೀಗಾಗಿ ಅವರನ್ನು ಕರೆದುಕೊಂಡರು. ಅಂದಹಾಗೆ, ನಿಮ್ಮ ವಾಟ್ಸಾಪ್​ ಸಂದೇಶಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು  ಅನುಪಮ್​ ಖೇರ್ ಈ ಮೊದಲು ಬರೆದುಕೊಂಡಿದ್ದರು.

ಅಂತಿಮ ಸಂಸ್ಕಾರದಲ್ಲಿ ಮೋದಿ

ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸ ‘ಪ್ರಭು ಕುಂಜ್​’ಗೆ ಕೊಂಡೊಯ್ಯಲಾಗಿದೆ. ಇಂದು ಸಂಜೆ 6.30ಕ್ಕೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅಂತ್ಯಸಂಸ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಭಾಗವಹಿಸಲಿದ್ದಾರೆ.

‘ಲತಾ ಅವರು ಸ್ವರ್ಗಕ್ಕೆ ತೆರಳಿದ್ದಾರೆ. ಅವರ ಜತೆ ಒಳ್ಳೆಯ ಬಾಂಧವ್ಯ ಇತ್ತು ಎಂದು ನನ್ನಂತ ಹಲವು ಜನರು ಹೆಮ್ಮಿಯಿಂದ ಹೇಳಿಕೊಳ್ಳಬಹುದು. ನೀವು ಎಲ್ಲೇ ತೆರಳಿದರು ಅವರ ಪ್ರೀತಿಪಾತ್ರರು ಸಿಗುತ್ತಾರೆ. ಅವರ ಮಧುರ ಕಂಠ ನಮ್ಮ ಜತೆ ಸದಾ ಇರುತ್ತದೆ. ನನ್ನ ಭಾರ ಹೃದಯದಿಂದ ಅವರಿಗೆ ಅಂತಿಮ ನಮನ ಸೂಚಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ. ಇಂದು ಮೋದಿ ಕೂಡ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದು, ಈ ಮೂಲಕ ಖ್ಯಾತ ಗಾಯಕಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಮುಂಬೈ ಮನೆಯಲ್ಲಿ ಲತಾ ಮಂಗೇಶ್ಕರ್​ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಲತಾ ಮಂಗೇಶ್ಕರ್ ಜತೆ ಬಾಲಿವುಡ್​ ತಾರೆಯರ ಸವಿ ನೆನಪು; ಆ ಕ್ಷಣಗಳನ್ನು ನೆನಪಿಸಿದ ಫೋಟೋಗಳು

Follow us on

Related Stories

Most Read Stories

Click on your DTH Provider to Add TV9 Kannada