Lata Mangeshkar Funeral: ನೆಚ್ಚಿನ ಗಾಯಕಿಗೆ ದುಃಖದ ವಿದಾಯ; ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಮಂಗೇಶ್ಕರ್ ಅಂತ್ಯಸಂಸ್ಕಾರ
ಲತಾ ಮಂಗೇಶ್ಕರ್ ಅವರು ಭಾನುವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿಧನ ಹೊಂದಿದರು. ಮುಂಬೈನ ಖಾಸಗಿ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ಅಧಿಕೃತ ಮಾಡಿದರು. ಕೊವಿಡ್ ಹಾಗೂ ನ್ಯುಮೋನಿಯಾದಿಂದ ಅವರು ಬಳಲುತ್ತಿದ್ದರು.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರು ಇಂದು (ಫೆಬ್ರವರಿ 6) ಮುಂಜಾನೆ ನಿಧನ ಹೊಂದಿದರು. ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಅವರಿಗೆ ನೀಡಿದ ಚಿಕಿತ್ಸೆ ಫಲ ಕೊಡಲಿಲ್ಲ. ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ (Mumbai Shivaji Park) ಸಕಲ ಸರ್ಕಾರಿ ಗೌರವಗಳೊಂದಿಗೆ ಲತಾ ಮಂಗೇಶ್ಕರ್ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ನಟ ಶಾರುಖ್ ಖಾನ್ ಸೇರಿ ಸಾಕಷ್ಟು ಗಣ್ಯರು ಇದಕ್ಕೆ ಸಾಕ್ಷಿ ಆದರು. ಶಿವಾಜಿ ಪಾರ್ಕ್ನಲ್ಲಿ ದುಃಖದ ಛಾಯೆ ಆವರಿಸಿತ್ತು. ಎಲ್ಲರೂ ಭಾವುಕರಾಗಿದ್ದರು. ಲೆಜೆಂಡರಿ ಗಾಯಕಿಯನ್ನು ಕಳೆದುಕೊಂಡ ದುಃಖ ಎಲ್ಲರಲ್ಲೂ ಮನೆ ಮಾಡಿತ್ತು.
ಲತಾ ಮಂಗೇಶ್ಕರ್ ಅವರು ಭಾನುವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿಧನ ಹೊಂದಿದರು. ಮುಂಬೈನ ಖಾಸಗಿ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ಅಧಿಕೃತ ಮಾಡಿದರು. ಕೊವಿಡ್ ಹಾಗೂ ನ್ಯುಮೋನಿಯಾದಿಂದ ಅವರು ಬಳಲುತ್ತಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹೀಗಾಗಿ, ಲತಾ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ನಿಧನ ಹೊಂದಿದರು.
ಆ ಬಳಿಕ ಲತಾ ಮಂಗೇಶ್ಕರ್ ದೇಹವನ್ನು ಮುಂಬೈನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅನುಪಮ್ ಖೇರ್ ಸೇರಿದಂತೆ ಬಾಲಿವುಡ್ನ ಸಾಕಷ್ಟು ದಿಗ್ಗಜರು ಬಂದು ಲತಾ ಅವರ ಅಂತಿಮ ದರ್ಶನ ಪಡೆದರು. ಕೇವಲ ಆಪ್ತರಿಗಷ್ಟೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮನೆಯಿಂದ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರ ತೆರಳುವುದಕ್ಕೂ ಮೊದಲು ಅವರ ಸಹೋದರಿ ಆಶಾ ಭೋಸ್ಲೆ ಅವರು ಅಂತಿಮ ನಮನ ಸಲ್ಲಿಸಿದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Mumbai | People join the funeral procession of #LataMangeshkar as it proceeds to Shivaji Park from her ‘Prabhukunj’ residence
The last rites of the legendary singer will be performed at Shivaji Park today evening pic.twitter.com/poVpSWNm2f
— ANI (@ANI) February 6, 2022
ಆ ಬಳಿಕ ವಿಶೇಷ ವಾಹನದಲ್ಲಿ ಲತಾ ಮಂಗೇಶ್ಕರ್ ಪಾರ್ಥಿವ ಶರೀರವನ್ನು ಶಿವಾಜಿ ಪಾರ್ಕ್ಗೆ ಕರೆತರಲಾಯಿತು. ದಾರಿಯುದ್ದಕ್ಕೂ ಲತಾ ಅವರ ಅಪಾರ ಅಭಿಮಾನಿಗಳು ವಾಹನವನ್ನು ಹಿಂಬಾಲಿಸಿದರು. ಇಡೀ ವಾಹನವನ್ನು ಹೂವಿನಿಂದ ಅಲಂಕರಿಸಲಾಗಿತ್ತು. ದಾರಿಯುದ್ದಕ್ಕೂ ಲತಾ ಅವರನ್ನು ಬೀಳ್ಕೊಡಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ಗಾಯಕಿಗೆ ದುಃಖದ ವಿದಾಯ ಹೇಳಿದರು.
#WATCH | Cricketer Sachin Tendulkar and actor Shah Rukh Khan pay last respect to veteran singer Lata Mangeshkar at Mumbai’s Shivaji Park pic.twitter.com/r22Njpi4XW
— ANI (@ANI) February 6, 2022
8 ಅರ್ಚಕರು ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಲತಾ ಸಹೋದರ ಹೃದಯನಾಥ್ ಅವರ ಮಗ ವಿಧಿ ವಿಧಾನಗಳು ಪೂರ್ಣಗೊಳಿಸಿದರು. ಸಾಕಷ್ಟು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಎಲ್ಲರೂ ಲತಾಗೆ ದುಃಖದ ವಿದಾಯ ಹೇಳಿದರು.
ಇದನ್ನೂ ಓದಿ: ‘ನಮ್ಮ ಎದೆಯೊಳಗೆ ಲತಾಜೀ ಸದಾ ಜೀವಂತ’: ಲತಾ ಮಂಗೇಶ್ಕರ್ ನಿಧನಕ್ಕೆ ಬಾಲಿವುಡ್ ಸಂತಾಪ
‘ದುಃಖವನ್ನು ಮರೆಮಾಚುವ ನಗು’; ಆಶಾ ಭೋಸ್ಲೆ ಭೇಟಿ ಮಾಡಿ ಸಾಂತ್ವನ ಹೇಳಿದ ಅನುಪಮ್ ಖೇರ್
Published On - 7:24 pm, Sun, 6 February 22