AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಎದೆಯೊಳಗೆ ಲತಾಜೀ ಸದಾ ಜೀವಂತ’: ಲತಾ ಮಂಗೇಶ್ಕರ್​ ನಿಧನಕ್ಕೆ ಬಾಲಿವುಡ್​ ಸಂತಾಪ

ಲತಾ ಮಂಗೇಶ್ಕರ್​ ನಿಧನದಿಂದ ಇಡೀ ಬಾಲಿವುಡ್​ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಖ್ಯಾತ ಗಾಯಕಿಯ ಆತ್ಮಕ್ಕೆ ಎಲ್ಲರೂ ಶಾಂತಿ ಕೋರುತ್ತಿದ್ದಾರೆ.

‘ನಮ್ಮ ಎದೆಯೊಳಗೆ ಲತಾಜೀ ಸದಾ ಜೀವಂತ’: ಲತಾ ಮಂಗೇಶ್ಕರ್​ ನಿಧನಕ್ಕೆ ಬಾಲಿವುಡ್​ ಸಂತಾಪ
ಎ.ಆರ್​. ರೆಹಮಾನ್​, ಲತಾ ಮಂಗೇಶ್ಕರ್​
TV9 Web
| Edited By: |

Updated on:Apr 26, 2022 | 4:19 PM

Share

ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ಕಳೆದುಕೊಂಡು ಇಡೀ ಚಿತ್ರರಂಗಕ್ಕೆ ಕಂಬನಿ ಮಿಡಿಯುತ್ತಿದೆ. ಕೊರೊನಾ ಮತ್ತು ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಇಂದು (ಫೆ.6) ನಿಧನರಾದರು. ಈ ಸುದ್ದಿ ತಿಳಿದು ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಮರುಗಿದ್ದಾರೆ. ಲತಾ ಮಂಗೇಶ್ಕರ್​ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್​ ಮೀಡಿಯಾ ಮೂಲಕ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಜನವರಿ ಮೊದಲ ವಾರದಲ್ಲಿ ಲತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 29 ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅವರಿಗೆ 92 ವರ್ಷ ವಯಸ್ಸಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸುವುದು ಕಷ್ಟವಾಯಿತು. ಹಲವು ದಿನಗಳ ಕಾಲ ಅವರು ಐಸಿಯುನಲ್ಲಿದ್ದರು. ವೈದ್ಯರ ಸತತ ಪ್ರಯತ್ನದ ನಡುವೆಯೂ ಲತಾ ಮಂಗೇಶ್ಕರ್​ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎ.ಆರ್​. ರೆಹಮಾನ್​ (AR Rehman)​), ಸೋನು ನಿಗಮ್​, ಕಂಗನಾ ರಣಾವತ್, ಅನಿಲ್​ ಕಪೂರ್​, ಅಕ್ಷಯ್​ ಕುಮಾರ್​, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಲತಾ ಮಂಗೇಶ್ಕರ್​ ನಿಧನಕ್ಕೆ (Lata Mangeshkar Death) ಸಂತಾಪ ಸೂಚಿಸಿದ್ದಾರೆ.

‘ತುಂಬ ಬೇಸರವಾಗಿದೆ. ನಮ್ಮ ಹೃದಯದಲ್ಲಿ ಲತಾಜೀ ಶಾಶ್ವತವಾಗಿ ಇರುತ್ತಾರೆ. ಅವರನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಂಗೀತದಿಂದಾಗಿ ಅವರು ತಮ್ಮ ಜೀವನದ ಮೇಲೆ ಅಷ್ಟು ಪ್ರಭಾವ ಬೀರಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಅನಿಲ್​ ಕಪೂರ್​ ಟ್ವೀಟ್​ ಮಾಡಿದ್ದಾರೆ. ‘ಓರ್ವ ಲೆಜೆಂಡರಿ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಇದು ಇಡೀ ದೇಶಕ್ಕೆ ದೊಡ್ಡ ನಷ್ಟ. ಹಲವು ತಲೆಮಾರಿನ ಜನರು ನಿಮ್ಮನ್ನು ನೆನಪಿಟ್ಟುಕೊಳ್ಳುತ್ತಾರೆ’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

‘ಓರ್ವ ಲೆಜೆಂಡ್​, ಓರ್ವ ಐಕಾನ್​. ಇವರ ಬಗ್ಗೆ ಮಾತನಾಡಲು ಪದಗಳು ಸಾಕಾಗುವುದಿಲ್ಲ. ನಿಮ್ಮ ಸುಮಧುರ ಕಂಠಕ್ಕಾಗಿ ಧನ್ಯವಾದಗಳು ಲತಾಜೀ’ ಎಂದು ಶಾಹಿದ್​ ಕಪೂರ್​ ಟ್ವೀಟ್​ ಮಾಡಿದ್ದಾರೆ. ‘ಇಂಥ ಧ್ವನಿಯನ್ನು ಯಾರು ಮರೆಯಲು ಸಾಧ್ಯ? ಲತಾ ಮಂಗೇಶ್ಕರ್​ ಅವರ ನಿಧನದ ಸುದ್ದಿ ತಿಳಿದು ತೀವ್ರ ನೋವಾಗಿದೆ. ಅವರಿಗಾಗಿ ನನ್ನ ಪ್ರಾಮಾಣಿಕ ಪ್ರಾರ್ಥನೆ ಮತ್ತು ಸಂತಾಪಗಳು. ಓಂ ಶಾಂತಿ’ ಎಂದು ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ.

ಲತಾ ಮಂಗೇಶ್ಕರ್​ ಜೊತೆಗೆ ತಾವಿರುವ ಫೋಟೋವನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರು ಪೋಸ್ಟ್​ ಮಾಡಿದ್ದಾರೆ. ‘ಪ್ರೀತಿ, ಗೌರವ ಮತ್ತು ಪ್ರಾರ್ಥನೆಗಳು’ ಎಂದು ಆ ಫೋಟೋಗೆ ಅವರು ಕ್ಯಾಪ್ಷನ್​ ನೀಡಿದ್ದಾರೆ.

ಕನ್ನಡದ ಸೆಲೆಬ್ರಿಟಿಗಳಾದ ಶಿವರಾಜ್​ಕುಮಾರ್​, ರಮೇಶ್​ ಅರವಿಂದ್​, ವಿಜಯ್​ ಪ್ರಕಾಶ್​ ಸೇರಿದಂತೆ ಅನೇಕರು ಕೂಡ ಲತಾ ಮಂಗೇಶ್ಕರ್​ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅದೇ ರೀತಿ, ಪ್ರಧಾನಿ ನರೇಂದ್ರ ಮೋದಿ, ರಾಹುಲ್​ ಗಾಂಧಿ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್​ನಲ್ಲಿ ಲತಾ ಮಂಗೇಶ್ಕರ್​ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ:

‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್​; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ

Lata Mangeshkar Death: ಲತಾ ಮಂಗೇಶ್ಕರ್​ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ

Published On - 1:00 pm, Sun, 6 February 22

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?