Lata Mangeshkar: ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ?

Lata Mangeshkar Marriage: ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ಮಾತ್ರವಲ್ಲದೆ ಲತಾ ಮಂಗೇಶ್ಕರ್ ಅವರು ಒಂಟಿಯಾಗಿರುವುದಕ್ಕೆ ಪ್ರೇಮ ವೈಫಲ್ಯವೂ ಒಂದು ಕಾರಣ.

Lata Mangeshkar: ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ?
ಯೌವನದ ದಿನಗಳಲ್ಲಿ ಲತಾ ಮಂಗೇಶ್ಕರ್
Follow us
ಸುಷ್ಮಾ ಚಕ್ರೆ
| Updated By: ಮದನ್​ ಕುಮಾರ್​

Updated on: Feb 06, 2022 | 11:12 AM

ಲತಾ ಮಂಗೇಶ್ಕರ್ (Lata Mangeshkar) ಹೆಸರು ಯಾರಿಗೆ ತಾನೇ ಗೊತ್ತಿಲ್ಲ. 75ಕ್ಕೂ ಹೆಚ್ಚು ವರ್ಷಗಳಿಂದ 36 ಭಾಷೆಗಳಲ್ಲಿ ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ 1929ರ ಸೆಪ್ಟೆಂಬರ್ 28ರಲ್ಲಿ ಜನಿಸಿದರು. ಹಾಗೇ, ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಯೂ ಅವರದ್ದು. ಲತಾ ಮಂಗೇಶ್ಕರ್ ವೃತ್ತಿ ಜೀವನದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅವರ ವೈಯಕ್ತಿಕ ಜೀವನ ಮಾತ್ರ ಅಷ್ಟೇನೂ ಸುಖಕರವಾಗಿರಲಿಲ್ಲ. ಲತಾ ಮಂಗೇಶ್ಕರ್ ಕೊನೆಯವರೆಗೂ ಮದುವೆಯೇ ಆಗದಿರಲು ಕಾರಣವೇನು? ಎಂದು ಅವರ ಅಭಿಮಾನಿಗಳಿಗೆ ಕುತೂಹಲವಿರುವುದು ಸಹಜ. ಆ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

ತಮ್ಮ 13ನೇ ವಯಸ್ಸಿಗೇ ಅಪ್ಪನನ್ನು ಕಳೆದುಕೊಂಡು ಅಮ್ಮ, ತಂಗಿಯರು ಹಾಗೂ ತಮ್ಮನ ಜವಾಬ್ದಾರಿಯನ್ನು ಹೊತ್ತ ಲತಾ ಮಂಗೇಶ್ಕರ್ ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ನಾಟಕ, ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಳಿಕ ಗಾಯಕಿಯಾಗಿ ಪ್ರಸಿದ್ಧಿ ಪಡೆದ ಅವರು ತಮ್ಮ-ತಂಗಿಯರಿಗೆ ಮದುವೆ ಮಾಡಿದರು. ಅವರೆಲ್ಲರ ಜೀವನವನ್ನು ಸೆಟಲ್ ಮಾಡಬೇಕೆಂದು ತಮ್ಮ ಖುಷಿಯನ್ನು ತ್ಯಾಗ ಮಾಡಿದ ಲತಾ ಮಂಗೇಶ್ಕರ್ ನಂತರ ತಮ್ಮ-ತಂಗಿಯರ ಮಕ್ಕಳ ಆರೈಕೆಯಲ್ಲೇ ತಮ್ಮ ಖುಷಿಯನ್ನು ಕಂಡುಕೊಂಡರು.

ಲತಾ ಮಂಗೇಶ್ಕರ್ ಪ್ರೇಮಕತೆ: ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ಮಾತ್ರವಲ್ಲದೆ ಲತಾ ಮಂಗೇಶ್ಕರ್ ಅವರು ಒಂಟಿಯಾಗಿರುವುದಕ್ಕೆ ಪ್ರೇಮ ವೈಫಲ್ಯವೂ ಒಂದು ಕಾರಣ. ‘ಪತ್ರಿಕಾ ಡಾಟ್ ಕಾಂ’ ಮಾಡಿರುವ ವರದಿ ಪ್ರಕಾರ, ಗಾಯಕಿ ಲತಾ ಮಂಗೇಶ್ಕರ್ ಪ್ರೀತಿಸಿದ್ದ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಾಗದ ಕಾರಣದಿಂದ ಅವರು ತನ್ನ ಜೀವನದಲ್ಲಿ ಬೇರೆ ಯಾರನ್ನೂ ಮದುವೆಯಾಗುವುದಿಲ್ಲ ಎಂಬ ನಿರ್ಧಾರ ಮಾಡಿದರು. ಅಷ್ಟಕ್ಕೂ ಲತಾ ಮಂಗೇಶ್ಕರ್ ಅವರ ಮನಸು ಕದ್ದಿದ್ದ ಆ ವ್ಯಕ್ತಿ ಯಾರು?

ಲತಾ ಮಂಗೇಶ್ಕರ್ ಅವರಿಗೆ ಕ್ರಿಕೆಟ್ ಬಗ್ಗೆ ಬಹಳ ಆಸಕ್ತಿ ಮತ್ತು ಪ್ರೀತಿಯಿತ್ತು ಎಂಬುದು ಗೊತ್ತಿಲ್ಲದ ವಿಷಯವೇನಲ್ಲ. ಲತಾ ಮಂಗೇಶ್ಕರ್ ಅವರಿಗೆ ಸಚಿನ್ ತೆಂಡೂಲ್ಕರ್ ಎಂದರೆ ಬಹಳ ಪ್ರೀತಿ. ಅವರು ನಿವೃತ್ತಿ ತೆಗೆದುಕೊಂಡಾಗ ಲತಾ ಬಹಳ ಬೇಸರ ವ್ಯಕ್ತಪಡಿಸಿದ್ದರು. ಆಗಾಗ ಬಿಡುವು ಸಿಕ್ಕಾಗ ಕ್ರಿಕೆಟ್ ನೋಡುವ ಅಭ್ಯಾಸವಿದ್ದ ಲತಾ ಮಂಗೇಶ್ಕರ್ ಅವರಿಗೆ ಕ್ರಿಕೆಟ್ ಮಾತ್ರವಲ್ಲ ಆ ಕಾಲದ ಖ್ಯಾತ ಕ್ರಿಕೆಟಿಗರೊಬ್ಬರ ಮೇಲೂ ಪ್ರೀತಿ ಉಂಟಾಗಿತ್ತು.

lata mangeshkar- raj singh dungarpur

ಲತಾ ಮಂಗೇಶ್ಕರ್- ರಾಜ್ ಸಿಂಗ್ ಡುಂಗರ್​ಪುರ್

ದಿವಂಗತ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಮಹಾರಾಜ ರಾಜ್ ಸಿಂಗ್ ಡುಂಗರ್​ಪುರ್ ಅವರನ್ನು ಲತಾ ಮಂಗೇಶ್ಕರ್ ಬಹಳ ಪ್ರೀತಿಸುತ್ತಿದ್ದರು. ಲತಾರನ್ನು ಕಂಡರೆ ರಾಜ್ ಸಿಂಗ್ ಅವರಿಗೂ ಪ್ರೀತಿಯಿತ್ತು. ಲತಾ ಮಂಗೇಶ್ಕರ್ ಅವರ ತಮ್ಮನಾಗಿದ್ದ ಹೃದಯನಾಥ್ ಮಂಗೇಶ್ಕರ್ ಹಾಗೂ ಕ್ರಿಕೆಟಿಗ ರಾಜ್ ಸಿಂಗ್ ಆತ್ಮೀಯ ಸ್ನೇಹಿತರಾಗಿದ್ದರು. ಮಾಜಿ ಕ್ರಿಕೆಟಿಗ ರಾಜ್ ಸಿಂಗ್ ರಾಜಸ್ಥಾನದ ರಾಜಮನೆತನಕ್ಕೆ ಸೇರಿದವರಾಗಿದ್ದರು. ಡುಂಗರ್‌ಪುರದ ಅಂದಿನ ಆಡಳಿತಗಾರರಾಗಿದ್ದ ದಿವಂಗತ ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜೀಯವರ ಕಿರಿಯ ಪುತ್ರರಾಗಿದ್ದ ರಾಜ್ ಸಿಂಗ್ ತಾವು ಲತಾ ಮಂಗೇಶ್ಕರ್ ಅವರನ್ನು ಪ್ರೀತಿ ಮಾಡುತ್ತಿದ್ದ ವಿಷಯವನ್ನು ಮನೆಯಲ್ಲೂ ಹೇಳಿದ್ದರು. ಆದರೆ, ರಾಜ ವಂಶಸ್ಥರಾಗಿದ್ದ ರಾಜ್ ಸಿಂಗ್ ಜನಸಾಮಾನ್ಯರನ್ನು ಮದುವೆಯಾಗುವಂತಿಲ್ಲ ಎಂಬ ಕಾರಣದಿಂದ ಅವರ ತಂದೆ ಈ ಮದುವೆಗೆ ಒಪ್ಪಿರಲಿಲ್ಲ.

ಹೃದಯನಾಥ್ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಡುಂಗರ್​ಪುರ್ ಸ್ನೇಹಿತರಾಗಿದ್ದರಿಂದ ಅವರಿಬ್ಬರೂ ಲತಾ ಮಂಗೇಶ್ಕರ್ ಅವರ ಮನೆಯಲ್ಲೇ ಮೀಟ್ ಆಗುತ್ತಿದ್ದರು. ಹೀಗಾಗಿ ಸಹಜವಾಗಿ ರಾಜ್ ಸಿಂಗ್ ಅವರು ತಮ್ಮ ಸ್ನೇಹಿತನ ಅಕ್ಕನಾಗಿದ್ದ ಲತಾ ಮಂಗೇಶ್ಕರ್ ಅವರೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದರು. ಬಳಿಕ ಅವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ರಾಜ್ ಸಿಂಗ್ ಅವರು ಲತಾ ಮಂಗೇಶ್ಕರ್ ಅವರನ್ನು ಮಿಥೂ ಎಂದು ಕರೆಯುತ್ತಿದ್ದರು.

ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಮದುವೆಗೆ ರಾಜ್ ಸಿಂಗ್ ಅವರ ತಂದೆ ಮಹಾರಾವಲ್ ಲಕ್ಷ್ಮಣ್ ಸಿಂಗ್​ಜೀ ಒಪ್ಪಿಗೆ ನೀಡಲಿಲ್ಲ. ಲತಾ ರಾಜಮನೆತನದವರಲ್ಲ ಎಂಬುದೇ ಇದರ ಹಿಂದಿನ ಕಾರಣ. ಮಹಾರಾವಲ್ ಲಕ್ಷ್ಮಣ್ ಸಿಂಗ್‌ಜಿಯವರ ದೃಢ ನಿರ್ಧಾರವು ರಾಜ್ ಸಿಂಗ್ ಡುಂಗರ್‌ಪುರ್ ಮತ್ತು ಲತಾ ಮಂಗೇಶ್ಕರ್ ಅವರ ಕನಸಿನ ಕೋಟೆಯನ್ನು ನೆಲಸಮ ಮಾಡಿತ್ತು. ರಾಜ್ ಸಿಂಗ್ ತನ್ನ ತಂದೆಯ ಮೇಲಿನ ಅಪಾರ ಪ್ರೀತಿ ಮತ್ತು ಗೌರವದಿಂದ ತಂದೆಯ ನಿರ್ಧಾರವನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದರು. ಹಾಗೇ, ನಾನು ಲತಾಳನ್ನು ಮದುವೆಯಾಗಬಾರದು ಎಂದಮೇಲೆ ಇನ್ಯಾವ ಹುಡುಗಿಯನ್ನೂ ಮದುವೆಯಾಗುವುದಿಲ್ಲ ಎಂದು ಅಪ್ಪನ ಮುಂದೆ ಪ್ರತಿಜ್ಞೆ ಮಾಡಿದರು. ಹೀಗಾಗಿ, ಕೊನೆಯವರೆಗೂ ಲತಾ ಮಂಗೇಶ್ಕರ್ ಮತ್ತು ರಾಜ್ ಸಿಂಗ್ ಯಾರನ್ನೂ ಮದುವೆಯಾಗಲಿಲ್ಲ. ಅವರಿಬ್ಬರೂ ಕೊನೆಯವರೆಗೂ ಉತ್ತಮ ಸ್ನೇಹಿತರಾಗೇ ಉಳಿದರು.

2009ರ ಸೆಪ್ಟೆಂಬರ್ 12ರಂದು ರಾಜ್ ಸಿಂಗ್ ಡುಂಗರ್​ಪುರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಮುಂಬೈನಲ್ಲಿ ನಿಧನರಾದರು. ಲತಾ ಮಂಗೇಶ್ಕರ್ ಆಗಲಿ ಅಥವಾ ರಾಜ್ ಸಿಂಗ್ ಡುಂಗರ್ಪುರ್ ಆಗಲಿ ಎಂದೂ ತಮ್ಮ ಸಂಬಂಧದ ಬಗ್ಗೆ ಎಂದೂ ಮಾತನಾಡಲಿಲ್ಲ. ನೀವು ಮದುವೆಯಾಗದಿದ್ದುದಕ್ಕೆ ಎಂದೂ ಬೇಸರವಾಗಲಿಲ್ಲವೇ? ನಿಮಗೆ ಒಂಟಿತನ ಕಾಡಲಿಲ್ಲವೇ ಎಂದು ಸಂದರ್ಶನವೊಂದರಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಲತಾ ಮಂಗೇಶ್ಕರ್, ‘ನಮ್ಮ ಜೀವನದಲ್ಲಿ ಎಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತದೆ. ಏನಾಗುತ್ತದೆಯೋ ಅದೆಲ್ಲವೂ ಒಳ್ಳೆಯದೇ ಆಗುತ್ತದೆ, ನಮ್ಮ ಜೀವನದಲ್ಲಿ ಏನು ನಡೆಯುವುದಿಲ್ಲವೋ ಅದೂ ಕೂಡ ಒಳ್ಳೆಯದಕ್ಕೇ ಆಗಿರುತ್ತದೆ. ಸುಮಾರು ನಾಲ್ಕೈದು ದಶಕಗಳ ಹಿಂದೆ ನೀವು ಇದನ್ನು ಕೇಳಿದ್ದರೆ, ಬಹುಶಃ ನಿಮಗೆ ಬೇರೆ ಉತ್ತರ ಸಿಗುತ್ತಿತ್ತು. ಆದರೆ ಇಂದು ನನಗೆ ಅಂತಹ ಆಲೋಚನೆಗಳಿಗೆ ಅವಕಾಶವಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ: 

Lata Mangeshkar Death: ಲತಾ ಮಂಗೇಶ್ಕರ್​ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ

36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ