- Kannada News Photo gallery Lata Mangeshkar No More: Legendary singer Lata Mangeshkar rare and unseen photos
Lata Mangeshkar Death: ಲತಾ ಮಂಗೇಶ್ಕರ್ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ
Lata Mangeshkar Photos: ಮಹಾನ್ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ಕಳೆದುಕೊಂಡು ಚಿತ್ರರಂಗ ನೋವಿನಲ್ಲಿದೆ. ಕೊರೊನಾ ವೈರಸ್ ಕಾರಣದಿಂದ ಆಸ್ಪತ್ರೆ ಸೇರಿದ್ದ ಅವರು ನಿಧನರಾಗಿದ್ದು ಅಸಂಖ್ಯಾತ ಅಭಿಮಾನಿಗಳು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
Updated on: Feb 06, 2022 | 9:58 AM

Legendary singer Lata Mangeshkar rare and unseen photos

Legendary singer Lata Mangeshkar rare and unseen photos

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜೊತೆ ಲತಾ ಮಂಗೇಶ್ಕರ್ ಅವರ ಅಪರೂಪದ ಫೋಟೋ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಲತಾ ಅವರ ಹಾಡುಗಳು ಅಚ್ಚುಮೆಚ್ಚು. (Photo Credit: Lata Mangeshkar Instagram)

ಪಂಡಿತ್ ಭೀಮ್ ಸೇನ್ ಜೋಷಿ ಅವರ ಬಗ್ಗೆ ಲತಾ ಮಂಗೇಶ್ಕರ್ ಅವರು ಅಪಾರ ಗೌರವವನ್ನು ಹೊಂದಿದ್ದರು. ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಒಡನಾಟವನ್ನು ಮೆಲುಕು ಹಾಕಿದ್ದರು. (Photo Credit: Lata Mangeshkar Instagram)

ಶಾಸ್ತ್ರೀಯ ಸಂಗೀತ ಲೋಕದ ಮಹಾನ್ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಜೊತೆಗೆ ಲತಾ ಮಂಗೇಶ್ಕರ್ ಅವರಿಗೆ ಸ್ನೇಹ ಇತ್ತು. ಸುಬ್ಬುಲಕ್ಷ್ಮಿ ಅವರ ಗಾಯನ ಎಂದರೆ ನನಗೆ ತುಂಬ ಇಷ್ಟ ಎಂದು ಅವರು ಹೇಳುತ್ತಿದ್ದರು. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಮತ್ತು ಲತಾ ಮಂಗೇಶ್ಕರ್ ಅವರ ಕಾಂಬಿನೇಷನ್ನಲ್ಲಿ ಹಲವಾರು ಸೂಪರ್ ಹಿಟ್ ಗೀತೆಗಳು ಮೂಡಿಬಂದಿವೆ. ಆ ಹಾಡುಗಳೆಲ್ಲವೂ ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. (Photo Credit: Lata Mangeshkar Instagram)

ಖ್ಯಾತ ನಟ ದಿಲೀಪ್ ಕುಮಾರ್ ಅವರ ಜೊತೆ ಲತಾ ಮಂಗೇಶ್ಕರ್ ಅವರಿಗೆ ಆಪ್ತ ಒಡನಾಟ ಇತ್ತು. ಅವರನ್ನು ಸಹೋದರ ಎಂದು ಲತಾ ಕರೆಯುತ್ತಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಒಟ್ಟಿಗೆ ಕೆಲಸ ಮಾಡಿದ್ದರು. (Photo Credit: Lata Mangeshkar Instagram)

ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್ ಅವರನ್ನು ಲತಾ ಮಂಗೇಶ್ಕರ್ ಅಪಾರವಾಗಿ ಗೌರವಿಸುತ್ತಿದ್ದರು. ಅವರನ್ನು ತಂದೆಯ ಸಮಾನರು ಎಂದು ಲತಾ ಹೇಳಿದ್ದುಂಟು. (Photo Credit: Lata Mangeshkar Instagram)

ಲತಾ ಮಂಗೇಶ್ಕರ್ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅನೇಕ ಸ್ಟಾರ್ ಕಲಾವಿದರು ಕೂಡ ಸಾಂಗ್ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋಗೆ ಬರುತ್ತಿದ್ದರು. ಲತಾ ಹಾಡುವ ಸಮಯದಲ್ಲಿ ನಟಿ ಮೀನಾ ಕುಮಾರಿ ಅವರು ಹಾಜರಿರುತ್ತಿದ್ದರು. (Photo Credit: Lata Mangeshkar Instagram)
























