11ನೇ ಶತಮಾನದ ಸಂತ ಶ್ರೀರಾಮಾನುಜರ 1,000ನೇ ಜನ್ಮೋತ್ಸವ ಸಂಭ್ರಮದ ಈ ಸಂದರ್ಭದಲ್ಲಿ ರಾಮಾನುಜಾಚಾರ್ಯರ ಪಂಚಲೋಹದ ಬೃಹತ್ ಪ್ರತಿಮೆ ಅನಾವರಣಗೊಂಡಿದೆ. ಶ್ರೀ ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ (Chinna Jeeyar Swamy) ಆಶ್ರಮದ ಸಮೀಪದಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಂಚು ಹಾಗೂ ಜಿಂಕ್ನಿಂದ ನಿರ್ಮಾಣಗೊಂಡಿರುವ ಈ ಪ್ರತಿಮೆಯು ಕುಳಿತ ಭಂಗಿಯಲ್ಲಿ ಇರುವ ಪ್ರಪಂಚದ ಅತೀ ಎತ್ತರದ ಮೂರ್ತಿಗಳಲ್ಲಿ ಒಂದಾಗಿದೆ.