ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಇಂದು (ಫೆಬ್ರವರಿ 6) ಮುಂಜಾನೆ ನಿಧನ ಹೊಂದಿದರು. ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಅವರಿಗೆ ನೀಡಿದ ಚಿಕಿತ್ಸೆ ಫಲ ಕೊಡಲಿಲ್ಲ.
ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಅವರ ಅಂತಿಮ ಸಂಸ್ಕಾರ ನೆರವೇರಿದೆ.
ಲತಾ ಮಂಗೇಶ್ಕರ್ ಅವರು ಭಾನುವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ನಿಧನ ಹೊಂದಿದರು. ಮುಂಬೈನ ಖಾಸಗಿ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ಅಧಿಕೃತ ಮಾಡಿದರು. ಕೊವಿಡ್ ಹಾಗೂ ನ್ಯುಮೋನಿಯಾದಿಂದ ಅವರು ಬಳಲುತ್ತಿದ್ದರು
ಅವರಿಗೆ 92 ವರ್ಷ ವಯಸ್ಸಾಗಿತ್ತು. ಹೀಗಾಗಿ, ಲತಾ ದೇಹ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರು ನಿಧನ ಹೊಂದಿದರು.
ಲತಾ ಮಂಗೇಶ್ಕರ್ ದೇಹವನ್ನು ಮುಂಬೈನಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅನುಪಮ್ ಖೇರ್ ಸೇರಿದಂತೆ ಬಾಲಿವುಡ್ನ ಸಾಕಷ್ಟು ದಿಗ್ಗಜರು ಬಂದು ಲತಾ ಅವರ ಅಂತಿಮ ದರ್ಶನ ಪಡೆದರು. ಕೇವಲ ಆಪ್ತರಿಗಷ್ಟೇ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ (Narendra Modi), ನಟ ಶಾರುಖ್ ಖಾನ್ ಸೇರಿ ಸಾಕಷ್ಟು ಗಣ್ಯರು ಇದಕ್ಕೆ ಸಾಕ್ಷಿ ಆದರು. ಶಿವಾಜಿ ಪಾರ್ಕ್ನಲ್ಲಿ ದುಃಖದ ಛಾಯೆ ಆವರಿಸಿತ್ತು.
ಇಂದು ಸಂಜೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಲತಾ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ನಟ ಶಾರುಖ್ ಖಾನ್ ಸೇರಿ ಸಾಕಷ್ಟು ಗಣ್ಯರು ಇದಕ್ಕೆ ಸಾಕ್ಷಿ ಆದರು.
ಲತಾ ಮಂಗೇಶ್ಕರ್ಗೆ ಸಚಿನ್ ಅಂತಿಮ ನಮನ
ಶಾರುಖ್ ಖಾನ್ ಅವರು ಅಂತಿಮ ನಮನದ ವೇಳೆ ಕಾಣಿಸಿಕೊಂಡರು.
8 ಅರ್ಚಕರು ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಲತಾ ಸಹೋದರ ಹೃದಯನಾಥ್ ಅವರ ಮಗ ವಿಧಿ ವಿಧಾನಗಳು ಪೂರ್ಣಗೊಳಿಸಿದರು. ಸಾಕಷ್ಟು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಎಲ್ಲರೂ ಲತಾಗೆ ದುಃಖದ ವಿದಾಯ ಹೇಳಿದರು.
ಶ್ರದ್ಧಾ ಕಪೂರ್ ಅವರು ಲತಾ ನಿವಾಸದಲ್ಲಿ ಕಾಣಿಸಿಕೊಂಡರು.
Published On - 7:32 pm, Sun, 6 February 22