ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್​ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್​ ಆಫ್ ಇಂಡಿಯಾ

ಲತಾ ಮಂಗೇಶ್ಕರ್​ ಅವರು ಸಣ್ಣ ವಯಸ್ಸಿಗೆ ಸಂಗೀತ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಯಿತು. ಎಲ್ಲ ಭಾಷೆಗಳಲ್ಲೂ ಅವರಿಗೆ ಆಹ್ವಾನ ಬರೋಕೆ ಶುರುವಾಯಿತು. ಆದರೆ, ಲತಾ ಜೀವನ ಅಷ್ಟು ಸುಲಭದ್ದಾಗಿರಲಿಲ್ಲ.

ಮುಂದಿನ ಜನ್ಮ ಇದ್ದರೆ ಲತಾ ಮಂಗೇಶ್ಕರ್​ ಆಗಿ ಹುಟ್ಟಲು ನನಗೆ ಇಷ್ಟವಿಲ್ಲ ಎಂದಿದ್ದ ನೈಟಿಂಗೇಲ್​ ಆಫ್ ಇಂಡಿಯಾ
ಲತಾ ಮಂಗೇಶ್ಕರ್
TV9kannada Web Team

| Edited By: Rajesh Duggumane

Feb 13, 2022 | 6:30 AM

ಲತಾ ಮಂಗೇಶ್ಕರ್ (Lata Mangeshkar)​ ಅವರು ಗಳಿಸಿದ ಖ್ಯಾತಿ ಅಂತಿಂಥದಲ್ಲ. ಅವರು ಮಾಡಿರುವ ಸಾಧನೆಗೆ ಸರಿಯಾಗಿ ನಿಲ್ಲುವ ಮತ್ತೊಂದು ಗಾಯಕಿ (Singer) ಇರಲಿಕ್ಕಿಲ್ಲ. 75 ವರ್ಷಗಳ ವೃತ್ತಿ ಜೀವನದಲ್ಲಿ ಅವರು 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇಷ್ಟು ಗೀತೆಗಳನ್ನು ಹಾಡುವುದು ಅಷ್ಟು ಸುಲಭದ ಮಾತಲ್ಲ. ಅವರು ಕನ್ನಡ, ಹಿಂದಿ ಸೇರಿ ಸುಮಾರು 36 ಭಾಷೆಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿಯೂ ಅವರು ಎರಡು ಹಾಡುಗಳನ್ನು ಹಾಡಿದ್ದಾರೆ. ಬಹುತೇಕರಿಗೆ ನಾನೂ ಲತಾ ಅವರಂತೆ ಆಗಬೇಕು ಎನ್ನುವ ಆಸೆ ಇರುತ್ತದೆ. ಲತಾ ಅವರಂತೆ ಹಾಡಬೇಕು ಎನ್ನುವ ಕನಸು ಇರುತ್ತದೆ. ಅಚ್ಚರಿ ಎಂದರೆ, ಲತಾ ಮಂಗೇಶ್ಕರ್​ ಅವರು ತಮ್ಮ ಜೀವನದಲ್ಲಿ ತುಂಬಾನೇ ಕಷ್ಟ ಎದುರಿಸಿದ್ದ ಬಗ್ಗೆ ಹೇಳಿಕೊಂಡಿದ್ದರು! ಮುಂದಿನ ಜನ್ಮದಲ್ಲಿ ಮತ್ತೆ ಲತಾ ಮಂಗೇಶ್ಕರ್​ ಆಗಿ ಹುಟ್ಟೋದು ಅವರಿಗೆ ಇಷ್ಟವಿರಲಿಲ್ಲ!

ಲತಾ ಮಂಗೇಶ್ಕರ್​ ಅವರು ಸಣ್ಣ ವಯಸ್ಸಿಗೆ ಸಂಗೀತ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಯಿತು. ಎಲ್ಲ ಭಾಷೆಗಳಲ್ಲೂ ಅವರಿಗೆ ಆಹ್ವಾನ ಬರೋಕೆ ಶುರುವಾಯಿತು. ಆದರೆ, ಲತಾ ಜೀವನ ಅಷ್ಟು ಸುಲಭದ್ದಾಗಿರಲಿಲ್ಲ. 13ನೇ ವಯಸ್ಸಿಗೇ ಅಪ್ಪನನ್ನು ಕಳೆದುಕೊಂಡರು ಲತಾ. ಅಮ್ಮ, ತಂಗಿಯರು ಹಾಗೂ ತಮ್ಮನ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡರು. ಅಭಿನಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬಳಿಕ ಗಾಯಕಿಯಾಗಿ ಪ್ರಸಿದ್ಧಿ ಪಡೆದರು.

ದಿವಂಗತ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಮಹಾರಾಜ ರಾಜ್ ಸಿಂಗ್ ಡುಂಗರ್​ಪುರ್ ಅವರನ್ನು ಲತಾ ಮಂಗೇಶ್ಕರ್ ಬಹಳ ಪ್ರೀತಿಸುತ್ತಿದ್ದರು. ಲತಾರನ್ನು ಕಂಡರೆ ರಾಜ್ ಸಿಂಗ್ ಅವರಿಗೂ ಪ್ರೀತಿಯಿತ್ತು. ಆದರೆ, ಇಬ್ಬರ ಮದುವೆ ನೆರವೇರಲೇ ಇಲ್ಲ. ಈ ಕಾರಣಕ್ಕೂ ಅವರು ಜೀವನ ಉದ್ದಕ್ಕೂ ಮದುವೆ ಆಗದೇ ಒಂಟಿಯಾಗಿ ಕಳೆದರು ಎನ್ನಲಾಗಿದೆ. ಅವರಲ್ಲಿ ಹೇಳಿಕೊಳ್ಳಲಾಗದೆ ಇರುವ ಸಾಕಷ್ಟು ನೋವುಗಳಿದ್ದವು. ಒಮ್ಮೆ ಈ ಬಗ್ಗೆ ಲತಾ ಮೌನ ಮುರಿದಿದ್ದರು.

ಮುಂದಿನ ಜನ್ಮದಲ್ಲಿ ನೀವು ಲತಾ ಮಂಗೇಶ್ಕರ್​ ಆಗಿಯೇ ಹುಟ್ಟೋಕೆ ಬಯಸುತ್ತೀರಾ ಎಂಬ ರೀತಿಯಲ್ಲಿ ಲತಾಗೆ ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಅವರು ನೇರವಾಗಿಯೇ ಉತ್ತರ ನೀಡಿದ್ದರು. ‘ಈ ಮೊದಲು ಕೂಡ ನನಗೆ ಇದೇ ಮಾದರಿಯ ಪ್ರಶ್ನೆ ಕೇಳಲಾಗಿತ್ತು. ಮುಂದಿನ ಜನ್ಮ ಅನ್ನೋದು ಇಲ್ಲದೆ ಇದ್ದರೆ ಅತ್ಯುತ್ತಮ. ಆದಾಗ್ಯೂ ಒಂದು ಜನ್ಮ ಸಿಕ್ಕರೆ ನಾನು ಲತಾ ಮಂಗೇಶ್ಕರ್​ ಆಗಿ ಹುಟ್ಟೋಕೆ ಇಷ್ಟಪಡುವುದಿಲ್ಲ. ಲತಾ ಯಾವ ರೀತಿಯ ಸಂಕಟ, ತೊಂದರೆ ಅನುಭವಿಸುತ್ತಿದ್ದಾಳೆ ಎಂಬುದು ಅವಳಿಗೆ ಮಾತ್ರ ಗೊತ್ತು’ ಎಂದಿದ್ದರು.

ಇದನ್ನೂ ಓದಿ: ಲತಾ ಮಂಗೇಶ್ಕರ್​ ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಸೇರೋದು ಯಾರಿಗೆ? ಇಲ್ಲಿದೆ ಮಾಹಿತಿ

ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada