ಲತಾ ಮಂಗೇಶ್ಕರ್​ ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಸೇರೋದು ಯಾರಿಗೆ? ಇಲ್ಲಿದೆ ಮಾಹಿತಿ

ಲತಾ ಅವರು ಸಂಗೀತ ಕ್ಷೇತ್ರ ಹಾಗೂ ಚಿತ್ರರಂಗದ ಮೂಲಕ ಅಪಾರ ಆಸ್ತಿ ಗಳಿಸಿದ್ದಾರೆ. ಮುಂಬೈನಲ್ಲಿ ಅವರು ಮನೆ ಹೊಂದಿದ್ದಾರೆ. ಹಲವು ಕಡೆಗಳಲ್ಲಿ ಜಾಗ ಖರೀದಿಸಿದ್ದಾರೆ. ಅವರ ಬಳಿ ಹಲವು ಕಾರುಗಳು ಇವೆ ಎನ್ನಲಾಗಿದೆ.

ಲತಾ ಮಂಗೇಶ್ಕರ್​ ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಸೇರೋದು ಯಾರಿಗೆ? ಇಲ್ಲಿದೆ ಮಾಹಿತಿ
ಲತಾ-ಆಶಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 08, 2022 | 3:38 PM

ಲತಾ ಮಂಗೇಶ್ಕರ್ (Lata Mangeshkar)​ ಅವರು ಭಾನುವಾರ (ಫೆಬ್ರವರಿ 6) ಮುಂಜಾನೆ ಮೃತಪಟ್ಟರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಲತಾ ಮಂಗೇಶ್ಕರ್ ನಿಧನ ವಾರ್ತೆ ಸಾಕಷ್ಟು ಜನರಿಗೆ ದುಃಖ ತಂದಿದೆ. 75 ವರ್ಷಗಳ ವೃತ್ತಿ ಜೀವನದಲ್ಲಿ ಅವರು 60 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಇಷ್ಟು ಗೀತೆಗಳನ್ನು ಹಾಡುವುದು ಅಷ್ಟು ಸುಲಭದ ಮಾತಲ್ಲ. ಅವರು ಕನ್ನಡ, ಹಿಂದಿ ಸೇರಿ ಸುಮಾರು 36 ಭಾಷೆಗಳಲ್ಲಿ ಹಾಡಿದ್ದಾರೆ. ಅವರ ಕಂಠವನ್ನು ಇಷ್ಟಪಡದವರೇ ಇಲ್ಲ ಎಂದರೂ ತಪ್ಪಾಗಲಾರದು. ಲತಾ ಅವರು ಮದುವೆ ಆಗಿರಲಿಲ್ಲ. ಅವಿವಾಹಿತೆಯಾಗಿಯೇ ಅವರು ನಿಧನ ಹೊಂದಿದರು. ಈ ಕಾರಣಕ್ಕೆ ಅವರು ಬಿಟ್ಟು ಹೋದ ನೂರಾರು ಕೋಟಿ ಆಸ್ತಿ ಬಗ್ಗೆ ಎಲ್ಲ ಕಡೆಗಳಲ್ಲೂ ಚರ್ಚೆ ನಡೆಯುತ್ತಿದೆ. ಈ ಆಸ್ತಿ (Lata Mangeshkar Net worth) ಯಾರ ಪಾಲಾಗಲಿದೆ ಎನ್ನುವ ಕುತೂಹಲ ಅನೇಕರಲ್ಲಿದೆ.

ಲತಾ ಅವರು ಮುಂಬೈನಲ್ಲಿ ವಾಸವಾಗಿದ್ದರು. ಸಹೋದರಿಯರ ಜತೆ ಲತಾ ಮಂಗೇಶ್ಕರ್​​ಗೆ ಒಳ್ಳೆಯ ಒಡನಾಟ ಇತ್ತು. ಲತಾ ಅವರ ಇಡೀ ಕುಟುಂಬವೇ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಸಾಮಾನ್ಯವಾಗಿ ಸಾಯುವುದಕ್ಕೂ ಮೊದಲು ತಮ್ಮ ಆಸ್ತಿ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಬರೆದಿಟ್ಟು ಸಾಯುತ್ತಾರೆ. ಲತಾ ಕೂಡ ಹಾಗೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಲತಾ ಅವರು ಸಂಗೀತ ಕ್ಷೇತ್ರ ಹಾಗೂ ಚಿತ್ರರಂಗದ ಮೂಲಕ ಅಪಾರ ಆಸ್ತಿ ಗಳಿಸಿದ್ದಾರೆ. ಮುಂಬೈನಲ್ಲಿ ಅವರು ಮನೆ ಹೊಂದಿದ್ದಾರೆ. ಹಲವು ಕಡೆಗಳಲ್ಲಿ ಜಾಗ ಖರೀದಿಸಿದ್ದಾರೆ. ಅವರ ಬಳಿ ಹಲವು ಕಾರುಗಳು ಇವೆ ಎನ್ನಲಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ ಅವರ ಆಸ್ತಿ ಮೌಲ್ಯ 200 ಕೋಟಿ ರೂಪಾಯಿ ಎನ್ನಲಾಗಿದೆ.  ಪ್ರತಿ ವರ್ಷ ಅವರಿಗೆ ರಾಯಲ್ಟಿ ರೂಪದಲ್ಲಿ 5 ಕೋಟಿ ರೂಪಾಯಿ ಬರುತ್ತಿದೆ. ಅವರ ನಿಧನದ ನಂತರವೂ ಈ ಹಣ ಬರುತ್ತಲೇ ಇರುತ್ತದೆ. ಇವೆಲ್ಲವೂ ಈಗ ಯಾರಿಗೆ ಸೇರಲಿದೆ ಎಂಬ ಕುತೂಹಲ ಮೂಡಿದೆ.

ಆಶಾ ಭೋಸ್ಲೆ, ಮೀನಾ, ಉಷಾ ಮಂಗೇಶ್ಕರ್​ ಹಾಗೂ ಹೃದಯನಾಥ್​ ಮಂಗೇಶ್ಕರ್​ ಕೂಡ ಹಾಡುಗಾರರು. ಅವರೆಲ್ಲರ ಸೆಟ್ಲ್​ ಆಗಿದ್ದಾರೆ. ಇವರಿಗೆ ಲತಾ ಆಸ್ತಿ ಹಂಚಿಕೆ ಆಗಲಿದೆ ಎನ್ನುವ ಒಂದು ಮಾತಿದೆ. ಆದರೆ, ಕೆಲವು ವರದಿಗಳ ಪ್ರಕಾರ ಲತಾ ಆಸ್ತಿ ಮನೆಯವರಿಗೆ ಯಾರಿಗೂ ಸೇರುವುದಿಲ್ಲವಂತೆ. ಹಾಗಾದರೆ ಅವೆಲ್ಲ ಎಲ್ಲಿ ಹೋಗುತ್ತದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಲತಾ ಮಂಗೇಶ್ಕರ್​ ಅವರು ತುಂಬಾನೇ ಹೃದಯವಂತೆ ಆಗಿದ್ದರು. ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದರು. ಹೀಗಾಗಿ ಅವರು ತಂದೆ ಹೆಸರಲ್ಲಿ ಒಂದು ಟ್ರಸ್ಟ್​ ಸ್ಥಾಪನೆ ಮಾಡಿದ್ದರು. ಈ ಟ್ರಸ್ಟ್​ನಿಂದ ಹಲವು ಸಾಮಾಜಿಕ ಕೆಲಸಗಳು ಆಗುತ್ತಿವೆ. ಈ ಟ್ರಸ್ಟ್​ಗೆ ಲತಾ ಆಸ್ತಿ ವರ್ಗಾವಣೆ ಆಗುತ್ತದೆ ಎನ್ನುವ ಮಾತೂ ಇದೆ. ಲತಾ ಮಂಗೇಶ್ಕರ್​ ಅವರ ವಕೀಲರು ಈ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

ಇದನ್ನೂ ಓದಿ: ಲತಾಜೀ ಮೃತದೇಹಕ್ಕೆ ಶಾರುಖ್​ ಉಗಿದರು ಎಂಬ ಆರೋಪ; ವೈರಲ್​ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?

Lata Mangeshkar: ಶೀಘ್ರದಲ್ಲೇ ಲತಾ ಮಂಗೇಶ್ಕರ್ ಚಿತ್ರವಿರುವ ಅಂಚಿ ಚೀಟಿ ಬಿಡುಗಡೆ; ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ

Published On - 3:30 pm, Tue, 8 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ